ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಶುರು; ಡಿಕೆ ಶಿವಕುಮಾರ್ ಪಟ್ಟಿಯಲ್ಲಿ ಯಾರಿಗೆಲ್ಲ ಸ್ಥಾನ? ಇಲ್ಲಿದೆ ವಿವರ
ಮುಂದಿನ ವರ್ಷ ಲೋಕಸಭಾ ಚುನಾವಣೆಗೆ (Lok Sabha Elections) ಈಗಲೇ ಸಿದ್ಧರಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ ಬೆನ್ನಲ್ಲೇ ಚುರುಕಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಚುನಾವಣೆಯ ಜವಾಬ್ದಾರಿ ನೀಡಲು ನಾಯಕರ ಪಟ್ಟಿ ಸಿದ್ಧಪಡಿಸಿದ್ದಾರೆ.
ಬೆಂಗಳೂರು: ಮುಂದಿನ ವರ್ಷ ಲೋಕಸಭಾ ಚುನಾವಣೆಗೆ (Lok Sabha Elections) ಈಗಲೇ ಸಿದ್ಧರಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ ಬೆನ್ನಲ್ಲೇ ಚುರುಕಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಚುನಾವಣೆಯ ಜವಾಬ್ದಾರಿ ನೀಡಲು ನಾಯಕರ ಪಟ್ಟಿ ಸಿದ್ಧಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಪಟ್ಟಿ ಸಿದ್ಧಪಡಿಸಿ ಅದರೊಂದಿಗೆ ಎಐಸಿಸಿ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಆಪ್ತರ ಜೊತೆ ಕುಳಿತು ಪಟ್ಟಿ ಸಿದ್ಧಪಡಿಸಿರುವ ಶಿವಕುಮಾರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಅವರ ಜತೆ ಕುಳಿತು ಪಟ್ಟಿ ಸಿದ್ಧಪಡಿಸಿದ್ದಾರೆ. ಡಿಕೆ ಶಿವಕುಮಾರ್ ಸಿದ್ಧಪಡಿಸಿ ಕಾಂಗ್ರೆಸ್ ಹೈಕಮಾಂಡ್ಗೆ ನೀಡಲು ತೆಗೆದುಕೊಂಡು ಹೋಗಿರುವ ಪಟ್ಟಿಯ ವಿವರ ಇಲ್ಲಿದೆ.
ತುಮಕೂರು – ಡಾ. ಜಿ ಪರಮೇಶ್ವರ್ ಚಿತ್ರದುರ್ಗ – ಟಿ.ಬಿ.ಜಯಚಂದ್ರ ಶಿವಮೊಗ್ಗ – ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಚಿಕ್ಕಮಗಳೂರು – ಉಡುಪಿ – ಬಿಕೆ ಹರಿಪ್ರಸಾದ್ ಮಂಗಳೂರು – ಮಿಥುನ್ ರೈ, ಅಶೋಕ್ ರೈ ಬೆಳಗಾವಿ – ಸತೀಶ್ ಜಾರಕಿಹೊಳಿ,ಲಕ್ಷ್ಮೀ ಹೆಬ್ಬಾಳ್ಕರ್ ಹುಬ್ಬಳ್ಳಿ ಧಾರವಾಡ – ಜಗದೀಶ್ ಶೆಟ್ಟರ್, ವಿನಯ್ ಕುಲಕರ್ಣಿ ಕೋಲಾರ – ರಾಮಲಿಂಗರೆಡ್ಡಿ, ಮಂಜುನಾಥ್ ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್ ಉತ್ತರ ಕನ್ನಡ – ದೇಶಪಾಂಡೆ ಮೈಸೂರು – ಎಚ್ ಸಿ ಮಹಾದೇವಪ್ಪ, ಯತೀಂದ್ರ ಮಡಿಕೇರಿ,ಕೊಡುಗು – ಪೊನ್ನಣ್ಣ ಬಳ್ಳಾರಿ – ವಿ.ಎಸ್ ಉಗ್ರಪ್ಪ,ನಾಗೇಂದ್ರ ಹಾಸನ – ಶಿವಲಿಂಗೇಗೌಡರಿಗೆ ಇಂದಿನಿಂದಲೇ ಜವಾಬ್ದಾರಿ ಹಂಚಿಕೆ
ಪಕ್ಷದಲ್ಲಿ ಆಂತರಿಕ ಸಮಸ್ಯೆಗಳಿಲ್ಲ; ಡಿಕೆ ಶಿವಕುಮಾರ್
ದೆಹಲಿ ತಲುಪಿರುವ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಬೇಕಿದೆ. ಎಐಸಿಸಿ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಆದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚಿಸಬೇಕಿದೆ. ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ