ಗದಗ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ (Free Bus Pass) ನೀಡುತ್ತೇವೆ ಅಂತ ಗದಗದಲ್ಲಿ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು (B Sriramulu) ಹೇಳಿಕೆ ನೀಡಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡುವ ವ್ಯವಸ್ಥೆ ಬಿಜೆಪಿ ಮಾಡುತ್ತದೆ ಎಂದು ಸಚಿವರು ಹೇಳಿಕೆ ನೀಡಿದ್ದು, ಮುಂದಿನ ಚುನಾವಣೆಗೆ ಹೊಸ ತಂತ್ರ ರೂಪಿಸಿದ್ದಂತೆ ಗೋಚರವಾಗುತ್ತಿದೆ. ಕೆಎಸ್ಆರ್ಟಿಸಿ ಯಾವುದೇ ಆಸ್ತಿ ಅಡಮಾನವಾಗಿ ಇಟ್ಟಿಲ್ಲ. ಬೆಂಗಳೂರು ಶಾಂತಿ ನಗರ ಕಾಂಪ್ಲೆಕ್ಸ್ ಅಡಮಾನ ಇಡಲಾಗಿದೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕಡೆ 16 ಎಕರೆ ಅಡಮಾನ ಇಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲೂ ಕೆಲವು ಜಮೀನು ಅಡಮಾನ ಇಡಲಾಗಿದೆ. ಸಂಸ್ಥೆ ಜಾಗ ಅಡಮಾನ ಇಟ್ಟ ಹಣ ಸಿಬ್ಬಂದಿ ಭವಿಷ್ಯ ನಿಧಿಗೆ ನೀಡಲಾಗಿದೆ. ಕಡಿಮೆ ದರದಲ್ಲಿ ಬಡ್ಡಿ ಇದ್ದ ಕಾರಣ ಆಸ್ತಿ ಅಡಮಾನ ಇಡಲಾಗಿದೆ. ಇನ್ನೂ ಒಂದೂವರೆ ತಿಂಗಳ ಸಂಬಳ ಮಾತ್ರ ಬಾಕಿ ಇದೆ. ಒಂದು ವಾರದೊಳಗೆ ಆ ಬಾಕಿ ಸಂಬಳ ನೀಡಿದರೆ ಕ್ಲಿಯರ್ ಆಗುತ್ತೆ ಅಂತ ಸಚಿವರು ತಿಳಿಸಿದರು.
ಮುಂದಿನ ತಿಂಗಳಿಂದ ಸಿಬ್ಬಂದಿಗೆ ನಿರಂತರವಾಗಿ ಸಂಬಳ ನೀಡಲಾಗುತ್ತದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ 3 ಸಾವಿರ ಕೋಟಿ ಇಲಾಖೆಗೆ ನೀಡಿದ್ದಾರೆ. 3 ಸಾವಿರ ಕೋಟಿ ಸಂಬಳ ನೀಡಲು ಕೊಟ್ಟಿದ್ದಾರೆ. ಇನ್ನು ಮುಂದೆ ಚಾಲಕರ, ನಿರ್ವಾಹಕರು ಹಾಗೂ ಸಿಬ್ಬಂದಿ ಸಂಬಳಕ್ಕೆ ಕಾಯಬೇಕಿಲ್ಲ. ಅಡಮಾನ ಇಟ್ಟಿದ್ದು ವೈಯಕ್ತಿಕ ಬಳಕೆಗೆ ಅಲ್ಲ. ಸಿಬ್ಬಂದಿ ಭವಿಷ್ಯದ ನಿಧಿಗಾಗಿ ಎಂದು ಸ್ಪಷ್ಟಪಡಿಸಿದ ರಾಮುಲು, ನಮ್ಮ ಇಲಾಖೆ ದಿವಾಳಿ ಆಗಿದೆ ಅಂತ ಹೇಳುತ್ತಾರಲ್ಲ. ಇದು ಲಾಭದಾಯಕ ಮಾಡುವ ಉದ್ದೇಶ ಅಲ್ಲ ಎಂದರು.
ಕಾಂಗ್ರೆಸ್ ಪಾರ್ಟ್‌ಟೈಂ ಪಕ್ಷವಾಗಿ ಉಳಿಯುತ್ತದೆ. ರಾಹುಲ್ ಗಾಂಧಿ ಪಾರ್ಟ್‌ಟೈಂ ನಾಯಕರಾಗುತ್ತಾರೆ. ಕಾಂಗ್ರೆಸ್ ವೈಟ್‌ವಾಶ್ ಮಾಡುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ ಅಂತ ಶ್ರೀರಾಮುಲು ಅಭಿಪ್ರಾಯಪಟ್ಟರು.
ಇದೇ ವೇಳೆ ಕೆಲೂರ ಗ್ರಾಮದ ರೈತ ಮಹಿಳೆ ಆತ್ಮಹತ್ಶೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಚಿವರು, ಅರಣ್ಶ ಜಮೀನಿನಲ್ಲಿ ಒಕ್ಕಲುತನ ಮಾಡುವವರನ್ನು ಒಕ್ಕಲೇಬ್ಬಿಸಬಾರದು. ಸುಮಾರು 20-30 ವರ್ಷಗಳಿಂದ ಒಕ್ಕಲುತನ ಮಾಡುತ್ತಿದ್ದರೇ, ಅಂತವರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಸುರ್ಪಿಂ ಕೋರ್ಟ್ ಸ್ಪಷ್ಟ ಸಂದೇಶ ನೀಡಿದೆ. ಮುಂದೆ ಈ ರೀತಿ ಘಟನೆಗಳು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆನೆ. ನಿರ್ಮಲಾ ಕುಟುಂಬಕ್ಕೆ ಸರ್ಕಾರ ಈಗಾಗಲೇ ಪರಿಹಾರ ಧನ ನೀಡಿದೆ. ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ರೈತ ಮಹಿಳೆಯ ಕುಟುಂಬಕ್ಕೆ ಎರಡು ಎಕರೆ ಜಮೀನು ಹಾಗೂ ಗಂಗಾ ಕಲ್ಶಾಣ ಯೋಜನೆಯಲ್ಲಿ ಒಂದು ಬೊರ್ ವೆಲ್ ಕೊಡಿಸುತ್ತೇವೆ. ಸರ್ಕಾರದಿಂದ ಏನು ಪರಿಹಾರ ಬೇಕು ಅದನ್ನು ಕೋಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ- ಬಿ.ವೈ ವಿಜಯೇಂದ್ರ:
ಹುಬ್ಬಳ್ಳಿ: ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಆ ಹಿನ್ನೆಲೆ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದರು. ಅವರಿಗೆ ಆಘಾತವಾಗಿದೆ. ಈಗಾಗಲೇ ಯಡಿಯೂಪ್ಪನವರು ಅದನ್ನ ಅಸೆಂಬ್ಲಿಯಲ್ಲೆ ಹೇಳಿದ್ದಾರೆ.. ಬಿಜೆಪಿ ಗೆಲುವು ಕಾಂಗ್ರೆಸ್ ನಿದ್ದೆಗೆಡಿಸಿದ್ದರೆ, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತರಿಸಿದೆ. ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ. ನಾನು ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ಕೆಲಸ ಮಾಡುತ್ತೇನೆ. ನಾನು ಯಾವುದೇ ಆಸೆಯಿಂದ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯ, ಕೇಂದ್ರ ನಾಯಕ ಹತ್ತಿರ ಯಾವುದೇ ಚರ್ಚೆ ಆಗಿಲ್ಲ. ಜೆ.ಪಿ. ನಡ್ಡಾ ಅವರನ್ನ ಭೇಟಿಯಾಗಿದ್ದು ನನ್ನ ವಯುಕ್ತಿಕ ಕೆಲಸಕ್ಕೆ ಅಂತ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ
ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪ ಹೆಚ್ಡಿ ರೇವಣ್ಣ ಕಾರಣ; ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿಕೆ
‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ
Published On - 12:19 pm, Sun, 13 March 22