ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪ ಹೆಚ್ಡಿ ರೇವಣ್ಣ ಕಾರಣ; ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿಕೆ
ರೇವಣ್ಣ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟೆವು ಅಂತ ಹೇಳುತ್ತಿದ್ದಾರೆ. ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ? ಎಂದು ಸಚಿವ ಕೆಸಿ ನಾರಾಯಣ ಗೌಡ ಪ್ರಶ್ನಿಸಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸೋಲಿಗೆ ಅವರ ದೊಡ್ಡಪ್ಪ ಹೆಚ್ಡಿ ರೇವಣ್ಣ (HD Revanna) ಕಾರಣ ಅಂತ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿ ಸಚಿವ ಕೆಸಿ ನಾರಾಯಣ ಗೌಡ (KC Narayana Gowda) ಹೇಳಿಕೆ ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಬಗ್ಗೆ ಗೌರವ ಇದೆ. ಅವರು ಸುಮ್ಮನೆ ಮಾತಾಡೋದು ತಪ್ಪು. ನಿಖಿಲ್ ಚಿಕ್ಕ ರಾಜಕಾರಣಿ, ಕುಮಾರಸ್ವಾಮಿ ಸುಪುತ್ರ. ಪ್ರತಿಯೊಂದು ಮಾಹಿತಿ ಪಡೆದು ಮಾತನಾಡಬೇಕು. ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪ ಪಿಡಬ್ಲೂಡಿ (PWD) ಮಿನಿಸ್ಟರ್ ಆಗಿದ್ದರು ಅಂತ ಸಚಿವರು ಹೇಳಿದರು.
ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟೆವು ಅಂತ ಹೇಳುತ್ತಿದ್ದಾರೆ. ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಸಚಿವ ಕೆಸಿ ನಾರಾಯಣ ಗೌಡ, ಚನ್ನರಾಯಪಟ್ಟಣ ತಾಲ್ಲೂಕು- ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದಾರೆ. ನಮ್ಮ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಅವರ ದೊಡ್ಡಪ್ಪನನ್ನೆ ಕೇಳಲಿ ಮೊದಲು. ಇಲ್ಲ ಮಾಹಿತಿ ಹಕ್ಕಿನಲ್ಲಿ ಕೇಳಲಿ ಅಂತ ಹೇಳಿದರು.
ಅವರಿಗೆ ಪಾಪ ವಿಷಯ ಗೊತ್ತಿಲ್ಲ. ಕ್ಷೇತ್ರಕ್ಕೆ ಬಂದ ಅನುದಾನವನ್ನ ಹಾಸನಕ್ಕೆ ಹಾಕಿಕೊಂಡರು. ಮಂಡ್ಯನ ಖಾಲಿ ಬಿಟ್ಟರು. ನಿಖಿಲ್ ಕುಮಾರಸ್ವಾಮಿ ಸೋಲಬೇಕಾದರೆ ಕೆಲಸಗಳು ಕಾರಣ. ಇಷ್ಟು ಸಾವಿರ ಕೋಟಿ ಕೊಡುತ್ತೇವೆ ಅಂತ ಕುಮಾರಸ್ವಾಮಿ ಖಾಲಿ ಪೇಪರ್ನಲ್ಲಿ ಹೇಳಿಕೊಂಡು ಬಂದರು. ರೇವಣ್ಣ ಅವರು ಲೆಟರ್ ಹೆಡ್ನಲ್ಲಿ ಹಣ ಹೊಡೆದುಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡಿಕೊಂಡರು. ಅಲ್ಲಿ ಅವರ ಮಗನ ಗೆಲ್ಲಿಸಿಕೊಂಡರು, ನಿಖಿಲ್ನ ಸೋಲಿಸಿದರು. ಅದಕ್ಕಿಂತ ಪಾಠ ಬೇಕಾ ನಿಖಿಲ್ ಕುಮಾರಣ್ಣಂಗೆ ಅಂತ ಯುವಜನ ಸೇವೆ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಇದನ್ನೂ ಓದಿ
ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ, ವರಿಷ್ಠರು ಹೇಳಿದಾಗ ಸಚಿವ ಸಂಪುಟ ಪುನಾರಚನೆ: ಸಿಎಂ ಬೊಮ್ಮಾಯಿ
ಮುಂದುವರೆದ ರಷ್ಯಾ-ಉಕ್ರೇನ್ ಯುದ್ಧ: ಅಧಿಕೃತವಾಗಿ ಉಕ್ರೇನ್ ಸೇನೆ ಸೇರಿದ ಮೊದಲ ಮಹಿಳಾ ಸ್ವಯಂ ಸೇವಕಿ
Published On - 11:53 am, Sun, 13 March 22