ಭಾರತಕ್ಕೆ ಬ್ರಿಟೀಷರಿಗಿಂತ ಕೆಟ್ಟ ಕೆಲಸ ಮಾಡಿದವ್ರು ಕಾಂಗ್ರೆಸ್​ನವರು: ಕಾಂಗ್ರೆಸ್ ವಿರುದ್ಧ ಗೋವಿಂದ ಕಾರಜೋಳ ಭಾರೀ ಟೀಕೆ

ಕಾಂಗ್ರೆಸ್​ನಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಧ್ಯೆ ಏನಿದೆ ಅಂತ ನಾಡಿನ‌ ಜನತೆಗೆ ಗೊತ್ತು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಕಾಂಗ್ರೆಸ್​ನಲ್ಲಿ ಈಗ ಎರಡು ಗುಂಪು ಇವೆ. ಚುನಾವಣೆ ಬರುವಷ್ಟರಲ್ಲಿ ಮೂರು ಗುಂಪು ಆಗುತ್ತದೆ. ಮೂರು ಗುಂಪಿನವರು ಮೂರು ದಿಕ್ಕಿಗೆ ಹೋಗ್ತಾರೆ ಎಂದು ಕಾರಜೋಳ ಟೀಕಿಸಿದ್ದಾರೆ.

ಭಾರತಕ್ಕೆ ಬ್ರಿಟೀಷರಿಗಿಂತ ಕೆಟ್ಟ ಕೆಲಸ ಮಾಡಿದವ್ರು ಕಾಂಗ್ರೆಸ್​ನವರು: ಕಾಂಗ್ರೆಸ್ ವಿರುದ್ಧ ಗೋವಿಂದ ಕಾರಜೋಳ ಭಾರೀ ಟೀಕೆ
ಗೋವಿಂದ ಕಾರಜೋಳ
Follow us
TV9 Web
| Updated By: ganapathi bhat

Updated on: Mar 13, 2022 | 1:28 PM

ಬಾಗಲಕೋಟೆ: ಭಾರತ ದೇಶಕ್ಕೆ ಮೋಸ ಮಾಡಿದವ್ರೇ ಕಾಂಗ್ರೆಸ್​ನವರು. ಬ್ರಿಟೀಷರಿಗಿಂತ ಕೆಟ್ಟ ಕೆಲಸ ಮಾಡಿದವ್ರು ಕಾಂಗ್ರೆಸ್​ನವರು ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೊಳ ಭಾನುವಾರ ಹೇಳಿಕೆ ನೀಡಿದ್ದಾರೆ. ನೀರಾವರಿ ವಿಷಯಕ್ಕೆ ಕಾಂಗ್ರೆಸ್ ಮೇಲೆ ಕಾರಜೋಳ ಗರಂ ಆಗಿದ್ದಾರೆ. ಕೊಯ್ನಾ ಡ್ಯಾಂ ಮುಂಬೈ ಪ್ರಾಂತ್ಯದಲ್ಲಿದ್ದಾಗ ಅನುಮೋದನೆ ನೀಡಲಾಗಿತ್ತು. ಭಾಷಾವಾರು ಪ್ರಾಂತ್ಯಗಳು ವಿಭಜನೆಯಾದವು. ಅಖಂಡ ವಿಜಯಪುರ ಜಿಲ್ಲೆ ಮೈಸೂರು ರಾಜ್ಯಕ್ಕೆ ಸೇರಿತು. ನೀರಾವರಿ ಯೋಜನೆಯಲ್ಲಿ ವಿಜಯಪುರ ಒಳಪಡುತ್ತದೆ. ವಿಜಯಪುರ ಒಳಪಡುತ್ತದೆ ಎಂದು ಮುಂಬೈ ಸರ್ಕಾರ ನಿಮ್ಮ ನೀರಿನ ಪಾಲು ಕೊಡುತ್ತೇವೆ. ನಿಮ್ಮ ಪಾಲಿನ ₹2 ಕೋಟಿ ನೀಡಿದ್ರೆ ನಿಮ್ಮ ಜಿಲ್ಲೆಗೆ 38 TMC ನೀರು ಕೊಡುತ್ತೇವೆ ಎಂದು ಹೇಳಿತ್ತು. ₹2 ಕೋಟಿ ಕೊಡಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಿತು ಎಂದು ಕಾರಜೋಳ ತಿಳಿಸಿದ್ದಾರೆ.

ಟೋಕನ್ ಹಣ ₹10 ಲಕ್ಷ ಕೊಟ್ಟಿದ್ರೂ ನೀರು ಸಿಗುತ್ತಿತ್ತು. ವಿಜಯಪುರ ಜಿಲ್ಲೆಗೆ ನೀರನ್ನ ತಪ್ಪಿಸಿದವರು ಕಾಂಗ್ರೆಸ್ಸಿಗರು. ಕೊಯ್ನಾ ಡ್ಯಾಂ ಯೋಜನೆ ತಪ್ಪಿಸಿದವರು ಕಾಂಗ್ರೆಸ್​ನವರು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೊಳ ಆರೋಪ ಮಾಡಿದ್ದಾರೆ. ಆಗ ಕೇಂದ್ರದಲ್ಲೂ ಕಾಂಗ್ರೆಸ್, ಮುಂಬೈ ಪ್ರಾಂತದಲ್ಲಿಯೂ, ಮೈಸೂರು ಪ್ರಾಂತದಲ್ಲೂ ಕಾಂಗ್ರೆಸ್ ಸರ್ಕಾರ ಇತ್ತು. ಹಾಗಾದ್ರೆ ಯಾರು ಅನ್ಯಾಯ ಮಾಡಿದ್ರು ಅಂತಾ ಮಾಜಿ ನೀರಾವರಿ ಮಂತ್ರಿಯನ್ನು ಕೇಳಿ. ಅನ್ಯಾಯ ಆಗಿದ್ದು ಕಾಂಗ್ರಸ್ಸನಿಂದ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

2024ರ ನಂತರ ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಲಿಕ್ಕೆ ಸಾಧ್ಯವಿಲ್ಲ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ವಿಚಾರಕ್ಕೆ ಸಂಬಂಧಿಸಿ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ಇನ್ನೂ ಹೀನಾಯ ಆಗುತ್ತದೆ. ಇದಕ್ಕಿಂತಲೂ ಹೀನಾಯ ಆಗುತ್ತದೆ. ಪಂಚರಾಜ್ಯ ಚುನಾವಣೆಗೂ ಮುನ್ನ ಬೆಳಗಾವಿಯಲ್ಲಿ ಇದೇ ಮಾತು ಹೇಳಿದ್ದೆ. ಇವಾಗಲೂ ಹೇಳ್ತೀನಿ. 2024ರ ನಂತರ ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಇಬ್ಬರು ಸ್ಪೇಷಲ್ ಪ್ಲೈಟ್ ಮಾಡಿಕೊಂಡು ಗೋವಾ, ಉತ್ತರಾಖಂಡ ಹೋಗಿದ್ದರು. ಬಾಡಿಗೆ ಕೊಟ್ಟು ಮರಳಿ ಬಂದ್ರು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಬರೋದಿಲ್ಲ ಎಂದು ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್​ನಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಧ್ಯೆ ಏನಿದೆ ಅಂತ ನಾಡಿನ‌ ಜನತೆಗೆ ಗೊತ್ತು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಕಾಂಗ್ರೆಸ್​ನಲ್ಲಿ ಈಗ ಎರಡು ಗುಂಪು ಇವೆ. ಚುನಾವಣೆ ಬರುವಷ್ಟರಲ್ಲಿ ಮೂರು ಗುಂಪು ಆಗುತ್ತದೆ. ಮೂರು ಗುಂಪಿನವರು ಮೂರು ದಿಕ್ಕಿಗೆ ಹೋಗ್ತಾರೆ ಎಂದು ಕಾರಜೋಳ ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರು ಬದಲಾವಣೆ ಆಗ್ತಾರೆ ಎಂಬುದು ಗಾಳಿ ಸುದ್ದಿ

ಕಾಂಗ್ರೆಸ್​ನಿಂದ ಬಿಜೆಪಿಗೆ ಕೆಲ ಶಾಸಕರು ಬರುತ್ತಾರೆ ಎಂಬ ಸುದ್ದಿ ಬಗ್ಗೆ ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಬಿಟ್ಟು ಹೋಗ್ತಾರೆ, ಆದರೆ ನಾವು ಯಾರನ್ನೂ ಸಂಪರ್ಕ ಮಾಡಿಲ್ಲ. ನಮ್ಮ ಬಾಗಿಲು 24 ಗಂಟೆಗಳ ಕಾಲ ಓಪನ್ ಇರುತ್ತದೆ. ಯಾರು ಬೇಕಾದರೂ ಬರಬಹುದು. ರಾಜ್ಯ ಬಿಜೆಪಿ ಅಧ್ಯಕ್ಷರು ಬದಲಾವಣೆ ಆಗ್ತಾರೆ ಎಂಬುದು ಗಾಳಿ ಸುದ್ದಿ. ಇವೆಲ್ಲ ಬಾಗಲಕೋಟೆಯಲ್ಲಿ ಹುಟ್ಟಿದ ಸುದ್ದಿ ಎಂದು ಕಾರಜೋಳ ಹಾಸ್ಯಚಟಾಕಿ ಹಾರಿಸಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸದಸ್ಯತ್ವಕ್ಕಾಗಿ ಕಾಂಗ್ರೆಸ್ ನಿಂದ ಟಿವಿ, ಫ್ರಿಡ್ಜ್ ಆಮಿಷ ವಿಚಾರವಾಗಿ ಮಾತನಾಡಿದ ಅವರು ದೇಶದಲ್ಲಿ 70 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ನವರು ಇದೆ ರೀತಿ ಮಾಡಿದ್ದಾರೆ. ಜನರಿಗೆ ಮೋಸ ಮಾಡೋದು. ಜನರಿಗೆ ಆಸೆ, ಆಮಿಷ ಒಡ್ಡೋದೆ ಅವರ ಪ್ರಥಮ ಕಾರ್ಯಕ್ರಮ. ಅದನ್ನು ಅವರು ಮಾಡಿದ್ದಾರೆ. ಸಿ.ಎಮ್. ಇಬ್ರಾಹಿಂ ಹೇಳಿದ್ದು ನಿಜ ಇದೆ. ಈ ದೇಶದಲ್ಲಿ ಬಲವಾಗಿ ಕಾಂಗ್ರೆಸ್ ನಂಬಿದವರು ಅಲ್ಪಸಂಖ್ಯಾತರು. ಕಾಂಗ್ರೆಸ್ ಅವರಿಗೂ ಮೋಸ ಮಾಡುತ್ತಿದೆ. ಇದು ಗೊತ್ತಾದ ಮೇಲೆ ಕಾಂಗ್ರೆಸ್ ನಿಂದ ದೂರ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಂಚರಾಜ್ಯದಲ್ಲಿ ಬಿಜೆಪಿ ಮರಳಿ ಬರಲು ನರೇಂದ್ರ ಮೋದಿ ಹೆಜ್ಜೆಗೆ ಹೆಜ್ಜೆ ಹಾಕಿ ಕೆಲಸ ಮಾಡಿದ್ರು

ಇದೇ ವೇಳೆ, ಜನರ ನಾಡಿ ಮಿಡಿತ ಗೊತ್ತಾಗಿದೆ ಎಂದಿರುವ ಸಿದ್ದರಾಮಯ್ಯಗೆ ಕಾರಜೋಳ ತಿರುಗೇಟು ನೀಡಿದ್ದಾರೆ. ಜನರ ನಾಡಿ ಮಿಡಿತ ಸಿದ್ದರಾಮಯ್ಯಗೆ ಗೊತ್ತಾಗಿದ್ರೆ, ದೇಶದ ಬಗ್ಗೆ ಕಲ್ಪನೆ ಇಟ್ಟುಕೊಂಡು ಆಡಳಿತ ಮಾಡಿದ್ರೆ, ಸಿದ್ದರಾಮಯ್ಯ ವಿಪಕ್ಷದಲ್ಲಿ ಕೂಡ್ತಿರಲಿಲ್ಲ. ಪಂಚರಾಜ್ಯದಲ್ಲಿ ಬಿಜೆಪಿ ಮರಳಿ ಬರಲು ನರೇಂದ್ರ ಮೋದಿ ಹೆಜ್ಜೆಗೆ ಹೆಜ್ಜೆ ಹಾಕಿ ಕೆಲಸ ಮಾಡಿದ್ರು. ಅದಕ್ಕೆ ಮರಳಿ ಅಧಿಕಾರಕ್ಕೆ ಬಂದ್ರು. ಪಂಜಾಬ್​ನಲ್ಲಿ ಕಾಂಗ್ರೆಸ್ ಬರಲಿಲ್ಲ, ಹೀನಾಯವಾಗಿ ಸೋತ್ರು. ಕಾಂಗ್ರೆಸ್ ನವರ ಮೋಸದಾಟ ಗೊತ್ತಾಗಿದೆ. ನಾನು ವೈಯಕ್ತಿಕವಾಗಿ ಗಾಂಧಿ, ನೆಹರು ಮನೆತನದ ಬಗ್ಗೆ ಮಾತಾಡಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ, ವರಿಷ್ಠರು ಹೇಳಿದಾಗ ಸಚಿವ ಸಂಪುಟ ಪುನಾರಚನೆ: ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಹಾಸನ: ನೀವೇ ಮಾತನಾಡಿ ನಾನು ಎದ್ದು ಹೋಗ್ತೀನಿ; ರೈತರ ಮುಂದೆ ಸಿಟ್ಟಿಗೆದ್ದ ಶೋಭಾ ಕರಂದ್ಲಾಜೆ!