ನಿತೀಶ್ ಕುಮಾರ್‌ಗೆ ಮತ್ತೊಂದು ಆಘಾತ: ಜೆಡಿಯುನ 15 ಜಿಲ್ಲಾ ಪಂಚಾಯ್ತಿ ಸದಸ್ಯರು ಬಿಜೆಪಿಗೆ ಸೇರ್ಪಡೆ

| Updated By: ನಯನಾ ರಾಜೀವ್

Updated on: Sep 13, 2022 | 11:46 AM

ನಿತೀಶ್ ಕುಮಾರ್ ಅವರು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಬೇರ್ಪಟ್ಟ ನಂತರ, ಬಿಜೆಪಿ ಅವರಿಗೆ ಒಂದರ ಹಿಂದೆ ಒಂದು ದೊಡ್ಡ ಹೊಡೆತವನ್ನು ನೀಡುತ್ತಿದೆ.

ನಿತೀಶ್ ಕುಮಾರ್‌ಗೆ ಮತ್ತೊಂದು ಆಘಾತ: ಜೆಡಿಯುನ 15 ಜಿಲ್ಲಾ ಪಂಚಾಯ್ತಿ ಸದಸ್ಯರು ಬಿಜೆಪಿಗೆ ಸೇರ್ಪಡೆ
Nitish Kumar
Follow us on

ನಿತೀಶ್ ಕುಮಾರ್ ಅವರು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಬೇರ್ಪಟ್ಟ ನಂತರ, ಬಿಜೆಪಿ ಅವರಿಗೆ ಒಂದರ ಹಿಂದೆ ಒಂದು ದೊಡ್ಡ ಹೊಡೆತವನ್ನು ನೀಡುತ್ತಿದೆ. ಈ ಬಾರಿ ಜೆಡಿಯುನ ದಮನ್ ಮತ್ತು ದಿಯು ಘಟಕವು ಸೋಮವಾರ ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ಈ ಹಿಂದೆ ಮಣಿಪುರ ಮತ್ತು ಅರುಣಾಚಲ ಪ್ರದೇಶದ ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ದಮನ್ ಮತ್ತು ದಿಯುನಲ್ಲಿ ಜೆಡಿಯುನ 17 ಜಿಲ್ಲಾ ಪಂಚಾಯತ್ ಸದಸ್ಯರಲ್ಲಿ 15 ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ರಾಜ್ಯ ಜೆಡಿಯುನ ಸಂಪೂರ್ಣ ಘಟಕ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದೆ.

ಈ ಕುರಿತು ಬಿಜೆಪಿಯು ದಮನ್ ದಿಯುನ ಜೆಡಿಯುನ 17 ಜಿಲ್ಲಾ ಪಂಚಾಯತ್ ಸದಸ್ಯರಲ್ಲಿ 15 ಸದಸ್ಯರು ಮತ್ತು ರಾಜ್ಯ ಜೆಡಿಯುನ ಸಂಪೂರ್ಣ ಘಟಕವು ನಿತೀಶ್ ಕುಮಾರ್ ಅವರ ಭ್ರಷ್ಟ ಮತ್ತು ಕುಟುಂಬ ರಾಜಕಾರಣವನ್ನು ವಿರೋಧಿಸಿ, ಬಿಹಾರದಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸಲು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಜೆಡಿಯು ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರು. ಇತ್ತೀಚೆಗಷ್ಟೇ ಮಣಿಪುರದ ಜೆಡಿಯುನ 7 ಶಾಸಕರ ಪೈಕಿ 5 ಮಂದಿ ಬಿಜೆಪಿ ಸೇರಿದ್ದರು. ಕಳೆದ ವಾರ, ಜನತಾ ದಳದ (ಯುನೈಟೆಡ್) ಐವರು ಶಾಸಕರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಆಡಳಿತ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಯಿತು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯಿಂದ ಬೇರ್ಪಟ್ಟ ನಂತರ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಇತ್ತೀಚೆಗಷ್ಟೇ ದೆಹಲಿಗೆ ಆಗಮಿಸಿದ್ದ ನಿತೀಶ್ ಅವರು ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಓಂಪ್ರಕಾಶ್ ಚೌಟಾಲಾ, ಎಚ್.ಡಿ.ದೇವೇಗೌಡರಂತಹ ವಿಪಕ್ಷ ನಾಯಕರನ್ನು ಭೇಟಿ ಮಾಡಿದ್ದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತಕ್ಕೆ ಮರಳಿದ ತಕ್ಷಣ ನಾನು ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತೇನೆ ಎಂದು ನಿತೀಶ್ ಹೇಳಿದ್ದಾರೆ.

ದೆಹಲಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ತಾವು ಪ್ರಧಾನಿ ಹುದ್ದೆಗೆ ಸ್ಪರ್ಧಿಯೂ ಅಲ್ಲ, ಆಕಾಂಕ್ಷಿಯೂ ಅಲ್ಲ ಎಂದು ಹೇಳಿದ್ದರು.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿದ ಬಳಿಕ ನಿತೀಶ್ ಅವರು ತಮ್ಮ ಗಮನ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವತ್ತದೆ ಎಂದು ಹೇಳಿದ್ದರು.

2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಡಪಕ್ಷಗಳು, ಕಾಂಗ್ರೆಸ್ ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ವಿರೋಧ ಪಕ್ಷವನ್ನು ರಚಿಸುವ ಸಮಯ ಬಂದಿದೆ ಎಂದು ನಿತೀಶ್ ಕುಮಾರ್ ಹೇಳಿದರು.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ