Draupadi Murmu ರಾಷ್ಟ್ರಪತಿ ಚುನಾವಣೆ: ಎನ್​​ಡಿಎಯ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹೆಸರು ಘೋಷಣೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2022 | 10:19 PM

India Presidential Election 2022 64ರ ಹರೆಯದ ಮುರ್ಮು ಚುನಾಯಿತರಾದರೆ ಭಾರತದ ರಾಷ್ಟ್ರಪತಿ ಸ್ಥಾನವನ್ನಲಂಕರಿಸುವ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ.  ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರಪತಿ ಅಭ್ಯರ್ಥಿಗೆ 20 ಹೆಸರುಗಳನ್ನು ಚರ್ಚಿಸಿತ್ತು

Draupadi Murmu ರಾಷ್ಟ್ರಪತಿ ಚುನಾವಣೆ: ಎನ್​​ಡಿಎಯ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹೆಸರು ಘೋಷಣೆ
ದ್ರೌಪದಿ ಮುರ್ಮು
Follow us on

ದೆಹಲಿ: ಬುಡಕಟ್ಟು ಜನಾಂಗದ ಮಹಿಳಾ ನಾಯಕಿ ದ್ರೌಪದಿ ಮುರ್ಮು (Draupadi Murmu) ಅವರನ್ನು ಎನ್ ಡಿಎಯ (NDA) ರಾಷ್ಟ್ರಪತಿ ಅಭ್ಯರ್ಥಿಯಾಗಿ(presidential candidate) ಆಯ್ಕೆ ಮಾಡಲಾಗಿದೆ. ಒಂದು ವೇಳೆ 64ರ ಹರೆಯದ ಮುರ್ಮು ಚುನಾಯಿತರಾದರೆ ಭಾರತದ ರಾಷ್ಟ್ರಪತಿ ಸ್ಥಾನವನ್ನಲಂಕರಿಸುವ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆ ಅವರದ್ದಾಗಲಿದೆ.  ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರಪತಿ ಅಭ್ಯರ್ಥಿಗೆ 20 ಹೆಸರುಗಳನ್ನು ಚರ್ಚಿಸಿತ್ತು.  ಪೂರ್ವ ಭಾರತದಿಂದ ಒಬ್ಬ ಬುಡಕಟ್ಟು ಮತ್ತು ಮಹಿಳೆಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದ್ದರು. ಒಡಿಶಾದಿಂದ ಎರಡು ಬಾರಿ ಬಿಜೆಪಿ ಶಾಸಕಿಯಾಗಿದ್ದ ಮುರ್ಮು ಅವರು ನವೀನ್ ಪಟ್ನಾಯಕ್ ಸಂಪುಟದಲ್ಲಿ ಸಚಿವರಾಗಿದ್ದರು ಎಂದು ಪಿಟಿಐ ವರದಿ ಮಾಡಿದೆ.ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಮುರ್ಮು ನಂತರ ರೈರಂಗಪುರ ರಾಷ್ಟ್ರೀಯ ಸಲಹಾ ಮಂಡಳಿಯ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾದರು.

ಜೂನ್ 20, 1958 ರಂದು ಜನಿಸಿದ ಮುರ್ಮು ಅವರು 2015 ರಿಂದ 2021 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯವರಾದ ಮುರ್ಮು ಅವರು ಶಿಕ್ಷಕರಾಗಿದ್ದು ನಂತರ ಒಡಿಶಾ ರಾಜಕೀಯಕ್ಕೆ ಪ್ರವೇಶಿಸಿದರು. ಅವರು ಮಯೂರ್‌ಭಂಜ್‌ನಲ್ಲಿ 2000 ಮತ್ತು 2009ರಲ್ಲಿ ರೈರಂಗಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಶಾಸಕಿ ಆಗಿದ್ದರು.

ಇದನ್ನೂ ಓದಿ
Yashwant Sinha ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿರೋಧ ಪಕ್ಷಗಳ ಅಭ್ಯರ್ಥಿ
ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; ವಿಪಕ್ಷಗಳ ಮನವಿ ನಿರಾಕರಿಸಿದ ಗೋಪಾಲಕೃಷ್ಣ ಗಾಂಧಿ
ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಲು ನಿರಾಕರಿಸಿದ ಫಾರೂಕ್ ಅಬ್ದುಲ್ಲಾ

ಮುರ್ಮು ಅವರು ಒಡಿಶಾದಲ್ಲಿ ಸಾರಿಗೆ ಮತ್ತು ವಾಣಿಜ್ಯದಂತಹ ವಿವಿಧ ಸಚಿವಾಲಯಗಳನ್ನು ನಿರ್ವಹಿಸಿದ್ದಾರೆ. ಅವರು ಮೀನುಗಾರಿಕೆ, ಪಶುಸಂಗೋಪನೆ ಮುಂತಾದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


ಅಭ್ಯರ್ಥಿ ಘೋಷಣೆ ನಂತರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಶ್ರೀಮತಿ  ದ್ರೌಪದಿ ಮುರ್ಮು ಜೀ ಅವರು ಸಮಾಜ ಸೇವೆಗೆ ಮತ್ತು ಬಡವರು, ದೀನದಲಿತರು ಮತ್ತು ಅಂಚಿನಲ್ಲಿರುವವರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ಶ್ರೀಮಂತ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ ಮತ್ತು ಅತ್ಯುತ್ತಮ ರಾಜ್ಯಪಾಲರ ಅಧಿಕಾರವನ್ನು ಹೊಂದಿದ್ದರು. ಅವರು ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 9:38 pm, Tue, 21 June 22