ಮುಂದುವರಿದ ಟ್ವೀಟಾಸ್ತ್ರ! ಬಿಜೆಪಿಗೆ ಜೆಡಿಎಸ್ ಘಟಕ ತಿರುಗೇಟು

| Updated By: sandhya thejappa

Updated on: Oct 20, 2021 | 5:56 PM

ಮಾಜಿ ಮುಖ್ಯಮಂತ್ರಿಗಳು ಎತ್ತಿದ್ದು ವೈಯಕ್ತಿಕ ವಿಷಯಗಳನ್ನಲ್ಲ. ಆದರೆ ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ.

ಮುಂದುವರಿದ ಟ್ವೀಟಾಸ್ತ್ರ! ಬಿಜೆಪಿಗೆ ಜೆಡಿಎಸ್ ಘಟಕ ತಿರುಗೇಟು
ಬಿಜೆಪಿ ಮತ್ತು ಜೆಡಿಎಸ್ ಚಿಹ್ನೆ
Follow us on

ಬೆಂಗಳೂರು: ಜಿಡಿಎಸ್ ಮತ್ತು ಬಿಜೆಪಿ ನಡುವಿನ ಟ್ವೀಟ್ ಸಮರ ಮುಂದುವರಿದಿದೆ. ಟ್ವೀಟ್ ಮೂಲಕ ಬಿಜೆಪಿಗೆ ಜೆಡಿಎಸ್ ಘಟಕ ತಿರುಗೇಟು ನೀಡಿದೆ. ಆರ್​ಎಸ್​ಎಸ್​ ಎನ್ನುವುದು ಅಧಿಕೃತ ಸಂಸ್ಥೆಯೇ? ಅದು ಎಲ್ಲಿ? ಯಾವಾಗ ನೋಂದಣಿ ಆಗಿದೆ? ಅದರ ಅಧಿಕೃತ ಕಚೇರಿ ಎಲ್ಲಿದೆ? ಅದರ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ? ಅಂತ ಜೆಡಿಎಸ್ ಘಟಕ ಪ್ರಶ್ನಿಸಿದೆ.

ಗುರುದಕ್ಷಿಣೆ ಸೇರಿ ಕೋಟ್ಯಂತರ ರೂಪಾಯಿ ದೇಣಿಗೆ ಬರುತ್ತಿದೆ. ದೇಶ-ವಿದೇಶಗಳಿಂದ ಕೋಟ್ಯಂತರ ರೂ. ದೇಣಿಗೆ ಬರುತ್ತಿದೆ. ಅದಕ್ಕೆ ಸಂಘ ಲೆಕ್ಕ ಕೊಟ್ಟಿದ್ಯಾ? ತನ್ನ ವಹಿವಾಟಿನ ಬಗ್ಗೆ ಬ್ಯಾಲೆನ್ಸ್ಶೀಟ್ ಇಟ್ಟುಕೊಂಡಿದ್ಯಾ? ಅದನ್ನು ಪರಿಶೀಲನೆ ಮಾಡಿದ ಲೆಕ್ಕಪರಿಶೋಧಕರು ಯಾರು? ಶಾಲೆಗಳಲ್ಲಿ ಬಾಲ ಸ್ವಯಂಸೇವಕರ ಬ್ರೈನ್ ವಾಶ್ ಸುಳ್ಳೇ? ಶಿಕ್ಷಣದ ನೆಪದಲ್ಲಿ ಮತಾಂಧತೆಯ ವಿಷಪ್ರಾಶನ ಪೊಳ್ಳಾ? ಸಂಘದ ಶಾಖೆಗಳಲ್ಲಿ ತ್ರಿಶೂಲ, ಖಡ್ಗಗಳನ್ನಿಡುವುದು ಅಕ್ರಮ. ಇದಕ್ಕೆ ಪರವಾನಗಿ ಪಡೆಯಲಾಗಿದೆಯಾ? ಇಂಥ ಹಲವು ಪ್ರಶ್ನೆಗಳನ್ನು ಕುಮಾರಸ್ವಾಮಿ ಕೇಳಿದ್ದರು. ಇದಕ್ಕೆ ಉತ್ತರಿಸುವ ಎದೆಗಾರಿಕೆ ಯಾಕೆ ಬಿಜೆಪಿ ತೋರಲಿಲ್ಲ ಅಂತ ಜೆಡಿಎಸ್ ಟ್ವೀಟ್ ಮೂಲಕ ಕೇಳಿದೆ.

ಮಾಜಿ ಮುಖ್ಯಮಂತ್ರಿಗಳು ಎತ್ತಿದ್ದು ವೈಯಕ್ತಿಕ ವಿಷಯಗಳನ್ನಲ್ಲ. ಆದರೆ ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ. ಸದನದಲ್ಲಿ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿಯವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಎಂದು ಪ್ರಶ್ನಿಸಿದ ರಾಜ್ಯ ಜೆಡಿಎಸ್ ಘಟಕ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿದೆ.

ಇದನ್ನೂ ಓದಿ

ಪ್ರತಿಷ್ಠಿತ ಆಶಸ್ ಸರಣಿಗೂ ಮುನ್ನ ಕಾಂಗರೂಗಳಿಗೆ ಆಘಾತ; ತಂಡದ ಸ್ಟಾರ್ ಬೌಲರ್​ ಕ್ರಿಕೆಟ್​ಗೆ ವಿದಾಯ

‘ಕೋಟಿಗೊಬ್ಬ 3’ ಸಿನಿಮಾ ಕಲೆಕ್ಷನ್​ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಬಾಲಿವುಡ್​ ನಟ

Published On - 5:52 pm, Wed, 20 October 21