ಬೆಂಗಳೂರು, (ಫೆಬ್ರವರಿ 02): ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ (Karnataka Rajya Sabha Election) ದಿನಾಂಕ ನಿಗದಿಯಾಗಿದೆ. ಇದೇ ಫೆಬ್ರವರಿ 27 ಮತದಾನ ನಡೆಯಲಿದ್ದು, ಅಂದೆ ಫಲಿತಾಂಶ ಪ್ರಕಟವಾಗಲಿದೆ. ಆಡಳಿತರೂಢ ಕಾಂಗ್ರೆಸ್ ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಸುಲಭವಾಗಿ ಗೆಲ್ಲಬಹುದು. ಇನ್ನುಳಿಂದ ಬಿಜೆಪಿ ಒಂದು ಸ್ಥಾನದಲ್ಲಿ ಮಾತ್ರ ನಿರಾಯಾಸವಾಗಿ ಗೆಲ್ಲಬಹದು. ಈ ಸಂಬಂಧ ಚರ್ಚಿಸಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ( bjp core committee meeting) ಮಾಡಿದ್ದು, ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಕ್ಷಣ ಯಾವುದೇ ಶಿಫಾರಸು ಮಾಡದಿರುವ ಬಗ್ಗೆ ತೀರ್ಮಾನವಾಗಿದೆ.
ನಾಲ್ಕು ಸ್ಥಾನಗಳ ಪೈಕಿ ಒಂದು ಸ್ಥಾನ ಮಾತ್ರ ಬಿಜೆಪಿಗೆ ಗೆಲುವಿನ ಅವಕಾಶ, ಹಾಲಿ ಸದಸ್ಯರಾಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರೇ ಮತ್ತೆ ಅಭ್ಯರ್ಥಿಯಾಗುವುದಾದರೆ ಇಲ್ಲಿ ಚರ್ಚೆ ಬೇಡ. ಒಂದು ವೇಳೆ ಬೇರೆಯವರು. ಅಭ್ಯರ್ಥಿಯಾಗುವುದು ಅಂತಾದರೆ ಆಗ ಮತ್ತೊಮ್ಮೆ ಚರ್ಚೆ ಮಾಡೋಣ. ಈ ಬಗ್ಗೆ ಮೊದಲು ರಾಜ್ಯಾಧ್ಯಕ್ಷರು ವರಿಷ್ಠರ ಜೊತೆ ಚರ್ಚಿಸಲಿ ಎಂದು ಸಭೆಯಲ್ಲಿ ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ: ಇಲ್ಲಿದೆ ರಾಜಕೀಯ ಲೆಕ್ಕಾಚಾರ
ಇನ್ನು ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆಯೂ ತೀರ್ಮಾನವಾದರೆ ಯಾರು ಸಮರ್ಥರು ಎಂದು ಕೂಡಾ ವರಿಷ್ಠರ ಜೊತೆ ಚರ್ಚೆಯಾಗಲಿ. ವರಿಷ್ಠರ ಜೊತೆ ಚರ್ಚಿಸಿ ಸ್ಪಷ್ಟತೆ ಪಡೆದ ಬಳಿಕವೇ ರಾಜ್ಯಾಧ್ಯಕ್ಷರು ಸಂಭಾವ್ಯ ಹೆಸರುಗಳನ್ನು ಕಳುಹಿಸಲಿ ಎಂಬ ತೀರ್ಮಾನಕ್ಕೆ ಕೋರ್ ಕಮಿಟಿ ಸದಸ್ಯರು ಬಂದಿದ್ದಾರೆ.
ಕಳೆದ ಬಾರಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಹೆಸರುಗಳನ್ನು ಬದಿಗೊತ್ತಿ ಹೈಕಮಾಂಡ್ ತನ್ನ ಆಯ್ಕೆ ಮಾಡಿತ್ತು. ಇದರಿಂದ ರಾಜ್ಯ ಬಿಜೆಪಿಗೆ ಭಾರೀ ಮುಜುಗರವನ್ನುಂಟು ಮಾಡಿತ್ತು. ಈ ಕಾರಣದಿಂದ ಮುಜುಗರದ ರೀತಿಯ ಸನ್ನಿವೇಶದಿಂದ ಪಾರಾಗಲು ಈ ಬಾರಿ ರಾಜ್ಯ ಬಿಜೆಪಿ ಎಚ್ಚರಿಕೆಯ ನಿಲುವು ತಳೆದಿದೆ.
ಫೆಬ್ರವರಿ 8 ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಫೆಬ್ರವರಿ 15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಫೆಬ್ರವರಿ 27 ಮತದಾನ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಫೆಬ್ರವರಿ 27 ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಯಿಂದ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಪಕ್ಷವೇ ರಾಜ್ಯಸಭೆಯಲ್ಲಿ ಪಾರುಪತ್ಯ ಸಾಧಿಸುತ್ತದೆ. ಹೀಗಾಗಿ ರಾಜ್ಯಗಳಲ್ಲಿ ಬಹುಮತ ಸಾಧಿಸಿದ ಪಕ್ಷವೇ ಸಹಜವಾಗಿ ಹೆಚ್ಚು ಸದಸ್ಯರನ್ನು ತನ್ನ ಪಕ್ಷದಿಂದ ರಾಜ್ಯಸಭೆಗೆ ಕಳಿಸಬಹುದು,
ರಾಜ್ಯಸಭೆಯ ಸದಸ್ಯರನ್ನು ರಾಜ್ಯ ವಿಧಾನಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ. ಓರ್ವ ರಾಜ್ಯಸಭಾ ಅಭ್ಯರ್ಥಿ ಗೆಲ್ಲಲು 45 ಬೇಕು. ಈಗಾಗಲೇ ಕಾಂಗ್ರೆಸ್ ಕಾಂಗ್ರೆಸ್ ಬಳಿ 136 ವಿಧಾನಸಭಾ ಸ್ಥಾನಗಳು ಇದ್ದರೆ, ಬಿಜೆಪಿ ಬಳಿ 66 ಹಾಗೂ ಜೆಡಿಎಸ್ 16 ಸ್ಥಾನಗಳನ್ನು ಹೊಂದಿದೆ. ಹಾಗಾಗಿ ಕಾಂಗ್ರೆಸ್ ಮತ್ತೆ ಮೂರು ಸ್ಥಾನ ಹಾಗೂ ಬಿಜೆಪಿ 1 ಸ್ಥಾನದಲ್ಲಿ ನಿರಾಯಾಸವಾಗಿ ಗೆಲ್ಲಲಿದೆ. ಒಂದು ವೇಳೆ ಐದನೇ ಅಭ್ಯರ್ಥಿ ಕಣಕ್ಕಿಳಿದರೆ ಮಾತ್ರ ಚುನಾವಣೆ ನಡೆಯಲಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ