ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆ ತಂತ್ರಗಾರಿಕೆ: ಏನಿದು ಬಿಜೆಪಿಯ A,B,C ಪ್ಲಾನ್..?

| Updated By: ರಮೇಶ್ ಬಿ. ಜವಳಗೇರಾ

Updated on: Oct 07, 2022 | 8:06 PM

ಇಂದು(ಅಕ್ಟೋಬರ್ 07) ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಮುಂದಿನ ಚುನಾವಣೆಗೆ ಕಾರ್ಯ, ತಂತ್ರಗಳ ಬಗ್ಗೆ ಚರ್ಚೆಯಾಗಿವೆ. ಅಲ್ಲದೇ ಚುನಾವಣೆಗಾಗಿ ಕೆಲ ಮಹತ್ವದ ತೀರ್ಮಾನಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆ ತಂತ್ರಗಾರಿಕೆ: ಏನಿದು ಬಿಜೆಪಿಯ A,B,C ಪ್ಲಾನ್..?
Karnataka BJP Meeting
Follow us on

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಬಿಜೆಪಿ ರಣತಂತ್ರ ರೂಪಿಸಿದೆ. ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಮತ್ತೆ ಪ್ರವಾಸ ಅಥವಾ ಯಾತ್ರೆ ಮಾಡಲ್ ರಾಜಕಾರಣ ಸಾಧ್ಯತೆ ಇದೆ. ಇದಕ್ಕೆ ಬಿಜೆಪಿ A, B, C ಎನ್ನುವ ಮೂರು ಕೆಟಗೆರಿಯಾಗಿ ವಿಂಗಡಣೆ ಮಾಡಿ ಹೊಸ ತಂತ್ರಗಾರಿಕೆ ರೂಪಿಸಿದೆ.

ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಲರ್ಟ್ಆಗಿದ್ದು, ಆಂತರಿಕ ಸರ್ವೆ ಪ್ರಕಾರ ರಾಜ್ಯ ಪ್ರವಾಸಕ್ಕೆ ಬಿಜೆಪಿ ನಿರ್ಧರಿಸಿದೆ. ಸರ್ವೆ ಆಧಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರವಾಸ ಮಾಡಲಿದ್ದಾರೆ.

ಇದನ್ನೂ ಓದಿ: Arun Singh: ಕೋರ್​ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ದ ಉಸ್ತುವಾರಿ ಅರುಣ್ ಸಿಂಗ್ ಫುಲ್ ಗರಂ!

ರಾಜ್ಯ ಪ್ರವಾಸಕ್ಕಾಗಿ A, B, C ಕೆಟಗರಿಯಲ್ಲಿ ಕ್ಷೇತ್ರಗಳ ವಿಂಗಡಣೆ ಮಾಡಿದೆ. ಕನಿಷ್ಠ ಒಂದು ಬಾರಿ ಗೆದ್ದ ಕ್ಷೇತ್ರಗಳು A ಕೆಟಗರಿಗೆ. ಬಿಜೆಪಿ ಬೇಸ್​ ಇರುವ 40 ಕ್ಷೇತ್ರಗಳು (157 ). 40 ಕ್ಷೇತ್ರಗಳು B ಕೆಟಗರಿಗೆಯನ್ನಾಗಿ ಗುರುತಿಸಿಲಾಗಿದೆ. ಇನ್ನು ಪೈಪೋಟಿ ನೀಡಿ ಶ್ರಮವಹಿಸಿ ಗೆಲ್ಲಬಹುದಾದ ಕ್ಷೇತ್ರಗಳು ಹಾಗೂ ಕಳೆದ ಬಾರಿ ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳು ಇದರಲ್ಲಿವೆ. ಉಳಿದ 27 ಗೆಲ್ಲಲು ಕಷ್ಟ ಸಾಧ್ಯ ಇರುವ ಕ್ಷೇತ್ರಗಳು ಆಗಿದ್ದು, ಅವುಗಳನ್ನ C ಕೆಟಗರಿ ಎಂದು ವಿಂಗಡಿಸಲಾಗಿದೆ.

ಮೊದಲಿಗೆ A ಕೆಟಗರಿಯ ಕ್ಷೇತ್ರಗಳ ಮೇಲೆ ಫೋಕಸ್ ಮಾಡಲು ಬಿಜೆಪಿ ಯೋಜನೆ ರೂಪಿಸಿದ್ದು, ಕೆಟಗರಿಯಡಿ ಪ್ರವಾಸ ನಡೆಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಆರಂಭಿಕ‌ ಹಂತದಲ್ಲಿ A ಕ್ಯಾಟಗರಿಯ ಕ್ಷೇತ್ರಗಳಲ್ಲಿ ಪ್ರವಾಸ ಆರಂಭವಾಗಲಿದ್ದು, ಬಳಿಕ ಇನ್ನುಳಿದ ಬಿ ಹಾಗೂ ಸಿ ಕೆಟಗೆರಿ ಕ್ಷೇತ್ರಗಳಲ್ಲಿ ಸಂಚರಿಸಲು ಪ್ಲಾನ್ ಮಾಡಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಕೌಂಟರ್ ಕೊಡಲು ಬಿಜೆಪಿ ಪ್ಲಾನ್: ಮೈಗೊಡವಿ ನಿಂತ ಬೊಮ್ಮಾಯಿ-ಬಿಎಸ್​ವೈ

ಕಾರ್ಯಕಾರಣಿ ಸಭೆಯ ಮಾಹಿತಿ

ಇಂದು(ಅ.07) ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕರಣಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿದ್ದು, ಈ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಸಚಿವ ಸುನೀಲ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದು, ಅದು ಈ ಕೆಳಗಿನಂತಿದೆ.

ಅ.11ರಿಂದ ಸಿಎಂ ಬೊಮ್ಮಾಯಿ, ಬಿಎಸ್​ವೈ ರಾಜ್ಯದ 50 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಮುಂದಿನ ಚುನಾವಣೆಗೆ ಪಕ್ಷ ಸಂಘಟಿಸಲು ರಾಜ್ಯ ಪ್ರವಾಸ ಮಾಡಲು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಸಂಘಟನೆಯನ್ನ ಇನ್ನಷ್ಟು ವಿಸ್ತಾರಗೊಳಿಸಲು ನಳೀನ್ ಕುಮಾರ್ ಕಟೀಲ್ ಹಾಗೂ ಅರುಣ್ ಸಿಂಗ್ ನೇತೃತ್ವದಲ್ಲಿ 50 ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. 2 ತಿಂಗಳಲ್ಲಿ ವಿಜಯಸಂಕಲ್ಪವನ್ನಿಟ್ಟುಕೊಂಡು 100 ಕ್ಷೇತ್ರಗಳಲ್ಲಿ ಮಾಡಲು ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಿದ್ದು,, ದೊಡ್ಡಮಟ್ಟದ ಸಮಾವೇಶಗಳನ್ನ ಮಾಡಲು ನಿರ್ಧರಿಸಲಾಗಿದೆ ಎಂದರು.

ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ. ಬಳ್ಳಾರಿಯಲ್ಲಿ ಪರಿಶಿಷ್ಟ ಜಾತಿ. ಬೆಂಗಳೂರಿನಲ್ಲಿ ಮಹಿಳೆಯರ ಸಮಾವೇಶ. ಹುಬ್ಬಳ್ಳಿಯಲ್ಲಿ ರೈತ ಸಮಾವೇಶ. ಶಿವಮೊಗ್ಗದಲ್ಲಿ ಯುವ ಮೋರ್ಚಾ ಸಮಾವೇಶ ಮಾಡುತ್ತೇವೆ. ಡಿಸೆಂಬರ್ 30ರೊಳಗೆ ಮುಗಿಸಲು ಚಿಂತನೆ ಇದೆ ಎಂದು ಮಾಹಿತಿ ನೀಡಿದರು..

ಒಂದು ಬೂತ್ ನಿಂದ 5 ಜನರನ್ನ ಕಾರ್ಯಪ್ರವೃತ್ತಿಗೊಳಿಸುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳನ್ನ ಸೇರಿಸಿ ಪ್ರಚಾರ ನೀಡುವುದು. ಕಾಂಗ್ರೆಸ್ ಅಪಪ್ರಚಾರವನ್ನ ಎದುರಿಸೋಕೆ ನಾವೂ ಪ್ಲಾನ್ ಮಾಡಿದ್ದೇವೆ. 3 ತಿಂಗಳಿಗೊಮ್ಮೆ ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆ ಇವತ್ತು ಬೆಂಗಳೂರಿನಲ್ಲಿ ನಡೆದಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷವನ್ನ ಸಂಘಟಿಸಲು ಮಹತ್ವವಾದ ನಿರ್ಣಯಗಳನ್ನ ತೆಗೆದುಕೊಂಡಿದ್ದೇವೆ. ನಾವೂ ಬೂತ್ ಮಟ್ಟಕ್ಕೆ ಹೋಗಿದ್ದೇವೆ. ಕಾಂಗ್ರೆಸ್ ನವರು ಗ್ರಾಮ ಮಟ್ಟಕ್ಕೆ ಹೋಗಲಿ ಸಾಕು ನೋಡೋಣ ಎಂದ ಸಚಿವ ಸುನೀಲ್ ಕುಮಾರ್ ಸವಾಲು ಹಾಕಿದರು.

ಅಭಿವೃದ್ಧಿ ಯೋಜನೆಗಳನ್ನ ನಿರಂತರವಾಗಿ ಮಾಡುತ್ತೇವೆ. ಹಣ ಬಿಡುಗಡೆ ತಡ ಆಗಿರಬಹುದು, ಆದ್ರೆ ಮುಂದಿನ ಬಜೆಟ್ ನಲ್ಲಿ ಎಲ್ಲವೂ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.