ಚಿಂತಿಸಬೇಡಿ ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ: ಪ್ರತಾಪ್ ಸಿಂಹಗೆ ಭರವಸೆ ನೀಡಿದ ಕಾಂಗ್ರೆಸ್​

|

Updated on: Jun 14, 2023 | 5:32 PM

ಬಿಜೆಪಿ ಸರ್ಕಾರದ ಭಷ್ಟ್ರಾಚಾರಗಳನ್ನು ತನಿಖೆ ಮಾಡಿಸಿ ಎಂದಿದ್ದ ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್​ ಪ್ರತಿಕ್ರಿಯಿಸಿದ್ದು, ಚಿಂತಿಸಬೇಡಿ ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ ಎಂದು ಭರವಸೆ ನೀಡಿದೆ.

ಚಿಂತಿಸಬೇಡಿ ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ: ಪ್ರತಾಪ್ ಸಿಂಹಗೆ ಭರವಸೆ ನೀಡಿದ ಕಾಂಗ್ರೆಸ್​
ಸಂಸದ ಪ್ರತಾಪ್​ ಸಿಂಹ
Follow us on

ಬೆಂಗಳೂರು: ಈ ಹಿಂದೆ ಕಾಂಗ್ರೆಸ್​ನವರು ಬಿಜೆಪಿ ಸರ್ಕಾರದ ಮೇಲೆ ಸರಣಿ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದರು. ಇದೀಗ ಅವರದ್ದೇ ಸರ್ಕಾರ ಇದೆ ತನಿಖೆ ಮಾಡಲಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ್ ಹೇಳಿದ್ದು, ಇದಕ್ಕೆ ಇದೀಗ ಕಾಂಗ್ರೆಸ್​ ಸಹ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ಪ್ರತಾಪ್ ಸಿಂಹ ಅವರೇ, ಚಿಂತಿಸಬೇಡಿ, ಬಿಜೆಪಿಯ ಎಲ್ಲಾ ಹಗರಣಗಳು, ಅಕ್ರಮಗಳು, ಲೂಟಿಗಳನ್ನು ತನಿಖೆಗೆ ವಹಿಸುತ್ತೇವೆ. ಮುಲಾಜು ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಯಾರೊಬ್ಬರ ಅಂಜಿಕೆಯೂ ನಮಗಿಲ್ಲ. ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ: ಹೊಂದಾಣಿಕೆ ರಾಜಕಾರಣದ ಗದ್ದಲದ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ, ಬೊಮ್ಮಾಯಿ ರಹಸ್ಯ ಸಭೆ

ತನಿಖೆಗೆ ತಾವೂ ಕೂಡ ಸಾಕ್ಷಿಗಳನ್ನು ನೀಡುವ ಮೂಲಕ ಸಹಾಯ ಮಾಡಬಹುದು, ನಿಮ್ಮ ನಾಯಕರ ಲೂಟಿಯ ಬಗ್ಗೆ ನಿಮಗೆ ಹೆಚ್ಚು ತಿಳಿದಿರುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರತಾಪ್ ಸಿಂಹ ಅವರ ಕಾಲೆಳದಿದೆ. ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪಸಿದ್ದರು, ಈಗ ತನಿಖೆ ಮಾಡಿಸಿ, ಭ್ರಷ್ಟಾಚಾರಿಗಳಿಗೆ ಶಿಕ್ಷೆ ಕೊಡಿಸಲಿ, ಇದರಿಂದ ಬಿಜೆಪಿ ಸ್ವಚ್ಛವಾಗುತ್ತದೆ ಎಂದು ಈ ಮೊದಲು ಹೇಳಿಕೆ ನೀಡಿದ್ದರು.


ಇನ್ನು ಬಿಜೆಪಿ ಸರ್ಕಾರ ಇದ್ದಾಗ ಹಲವು ಭ್ರಷ್ಟಾಚಾರದ ಆರೋಪಗಳನ್ನು ಕಾಂಗ್ರೆಸ್ ಮಾಡಿತ್ತು. ಅದರಲ್ಲೂ ಪಿಎಸ್‌ಐ ನೇಮಕಾತಿ ಅಕ್ರಮ ಹಗರಣ, 40 ಪರ್ಸೆಂಟ್ ಕಮೀಷನ್ ಆರೋಪ, ಕೋವಿಡ್ ಸಮಯದಲ್ಲಿ ಅಕ್ರಮ ಆರೋಪ ಮುಖ್ಯವಾಗಿ ಕಾಂಗ್ರೆಸ್‌ನ ಅಸ್ತ್ರಗಳಾಗಿದ್ದವು. ರಾಜ್ಯಾದ್ಯಂತ ಪ್ರತಿಭಟನೆ ಕೂಡ ಮಾಡಿದ್ದ ಕಾಂಗ್ರೆಸ್, ತಾನು ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದಲ್ಲಿ ಆಗಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಾಗಿ ಹೇಳಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ನುಡಿದಂತೆ ಬಿಜೆಪಿ ಅಕ್ರಮಗಳ ತನಿಖೆ ನಡೆಸಲಿ ಎನ್ನುವ ಕೂಗು ಕೇಳಿಬಂದಿದೆ.

ಇದರ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಹಗ್ಗ ಜಗ್ಗಾಟ ಜೋರಾಗಿದೆ. ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಮತ್ತು ಸಿ.ಟಿ. ರವಿ ಆರೋಪ ಮಾಡಿದ ಬಳಿಕ ರಾಜಕಾರಣ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.