ತುಮಕೂರು: ಪ್ರಜಾಧ್ವನಿ ಯಾತ್ರೆ ಕೇವಲ ಕಾಂಗ್ರೆಸ್ ಯಾತ್ರೆಯಲ್ಲ, ಹೊಸ ಬದಲಾವಣೆಗಾಗಿ ರೂಪುಗೊಂಡ ಯಾತ್ರೆ: ರಣದೀಪ್ ಸಿಂಗ್ ಸುರ್ಜೇವಾಲ

| Updated By: Rakesh Nayak Manchi

Updated on: Jan 24, 2023 | 3:38 PM

ಪ್ರಜಾಧ್ವನಿ ಯಾತ್ರೆ ಕೇವಲ ಕಾಂಗ್ರೆಸ್ ಪಕ್ಷದ ಯಾತ್ರೆ ಅಲ್ಲ, ಇದು ಕರ್ನಾಟಕದಲ್ಲಿ ಹೊಸ ಬದಲಾವಣೆ ತರುವ ಸಲುವಾಗಿ ರೂಪುಗೊಂಡಿರುವ ಯಾತ್ರೆ ಎಂದು ತುಮಕೂರಿನಲ್ಲಿ ನಡೆದ ಯಾತ್ರೆ ಸಮಾವೇಶದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ತುಮಕೂರು: ಪ್ರಜಾಧ್ವನಿ ಯಾತ್ರೆ ಕೇವಲ ಕಾಂಗ್ರೆಸ್ ಯಾತ್ರೆಯಲ್ಲ, ಹೊಸ ಬದಲಾವಣೆಗಾಗಿ ರೂಪುಗೊಂಡ ಯಾತ್ರೆ: ರಣದೀಪ್ ಸಿಂಗ್ ಸುರ್ಜೇವಾಲ
ರಣದೀಪ್ ಸಿಂಗ್ ಸುರ್ಜೇವಾಲ
Follow us on

ತುಮಕೂರು: ಪ್ರಜಾಧ್ವನಿ ಯಾತ್ರೆ (Prajadhwani Yatra, Bus Yatra) ಕೇವಲ ಕಾಂಗ್ರೆಸ್ ಪಕ್ಷದ ಯಾತ್ರೆ ಅಲ್ಲ, ಇದು ಕರ್ನಾಟಕದಲ್ಲಿ ಹೊಸ ಬದಲಾವಣೆ ತರುವ ಸಲುವಾಗಿ ರೂಪುಗೊಂಡಿರುವ ಯಾತ್ರೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಯಾತ್ರೆ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಈ ಯಾತ್ರೆಯ ಮೂಲಕ ನಾವು ಹಲವು ಗ್ಯಾರಂಟಿಗಳನ್ನ ಹೊತ್ತು ತಂದಿದ್ದೇವೆ. ಅದರಲ್ಲಿ ಈಗಾಗಲೇ ಎರಡು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ ಎಂದರು.

ಯಾತ್ರೆ ಮೂಲಕ ಕಾಂಗ್ರೆಸ್ ಹೊತ್ತು ತಂದ ಗ್ಯಾರಂಟಿಗಳ ಪೈಕಿ ಒಂದು ಮಹಿಳೆಯರಿಗೆ 2000 ರೂಪಾಯಿ ನೀಡುವುದು ಮತ್ತು 2000 ಯುನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾನ್ಯ ಜನರ ಮನೆಯ ಬಜೆಟ್ ಅನ್ನು ಹಾಳು ಮಾಡಿಬಿಟ್ಟಿದೆ. ಮೋದಿ ಹಾಲಿನ ಮೇಲೂ ಜಿಎಸ್​ಟಿ ಹಾಕಿದ್ದಾರೆ. ಪನ್ನೀರ್ ಮೇಲೂ ಜಿಎಸ್​ಟಿ ಹಾಕಿದ್ದಾರೆ ಎಂದರು.

ಮೋದಿ ಸರ್ಕಾರ ಮ್ಯಾಗಿ ಸೇರಿದಂತೆ ಇತರ ಆಹಾರಗಳ ಮೇಲೆ ಜಿಎಸ್​ಟಿ ಹಾಕಿದ್ದರೆ. ಅಷ್ಟೇ ಅಲ್ಲದೆ ಜನರು ನಿತ್ಯ ಹಾಕುವ ಬಟ್ಟೆ ಮೇಲೂ ಜಿಎಸ್​ಟಿ ಹಾಕಿದ್ದಾರೆ. ಇನ್ನೊಂದು ಸ್ವಲ್ಪ ದಿನ ಹೋದರೆ ನೀವು ಉಸಿರಾಡುವ ಗಾಳಿಯ ಮೇಲೂ ಜಿಎಸ್​​ಟಿ ಹಾಕಿಬಿಡುತ್ತಾರೆ ಎಂದು ಹೇಳುತ್ತಾ ಮೋದಿ ವಿರುದ್ಧ ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ: ಬಿಜೆಪಿಗೆ ತಿರುಗೇಟು ನೀಡಿದ ಎಂ.ಬಿ.ಪಾಟೀಲ್

ನಮ್ಮ ಘೋಷಣೆಗಳನ್ನು ಕೇಳಿ ಇದಕ್ಕೆಲ್ಲ ನಿಮಗೆ ಹಣ ಎಲ್ಲಿ ಬರುತ್ತೆ ಅಂತಾ ಬಿಜೆಪಿ ನಾಯಕರು ಪದೇ ಪದೇ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ನಾನು ಹೇಳುತ್ತೇನೆ. ರಾಜ್ಯದ ಈಗಿನ ಬಜೆಟ್ ಒಂದೂವರೆ ಲಕ್ಷ ಕೋಟಿ. ಮುಂದಿನ ದಿನಗಳಲ್ಲಿ ಇದು 2 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಇದರಲ್ಲಿ ನೀವೇನು (ಬಿಜೆಪಿ) 40 ಪರ್ಸೆಂಟ್ ಕಮಿಷ್ ಪಡೀತಿರಾ ಇದ್ದೀರಾ ಅದು ಕೂಡ ಒಳಗೊಂಡಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಎಂ.ಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ತುಮಕೂರಿಗೆ ಬಸ್ ಮೂಲಕವೇ ಆಗಮಿಸಿದರು. ಯಾತ್ರೆ ಬಸ್​ ಮೇಲೆ ಕಾರ್ಯಕರ್ತರು ಹೂಮಳೆ ಸುರಿದರಲ್ಲದೆ ಕೋಡಿ ಸರ್ಕಲ್ ಬಳಿ ನಾಯಕರಿಗೆ ಬೃಹತ್ ಗುಲಾಬಿ ಹಾರ ಹಾಕಲಾಯಿತು. ಬಳಿಕ ಅಮಾನಿಕೆರೆ ಬಳಿಯಿರುವ ಗ್ಲಾಸ್ ಹೌಸ್​​ನಲ್ಲಿ ಬೃಹತ್ ಸಮಾವೇಶ ನಡೆಯಿತು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ