
ಬೆಂಗಳೂರು, ಅಕ್ಟೋಬರ್ 12: 100 ವರ್ಷಗಳನ್ನ ಪೂರೈಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಶಾಕ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಾರ್ವಜನಿಕ, ಸರ್ಕಾರಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆಗೆ ನಿರ್ಬಂಧ ವಿಧಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಕೆಲ ಶಾಸಕರು ಸಿಎಂಗೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದಾರೆ. ಶಾಲಾ ಕಾಲೇಜುಗಳ ಆವರಣ, ಉದ್ಯಾನವನ, ಸರ್ಕಾರಿ ಮೈದಾನ ಮತ್ತು ಹಾಸ್ಟೆಲ್ ಕ್ಯಾಂಪಸ್ನಲ್ಲಿ RSS ಚಟುವಟಿಕೆ ನಿರ್ಬಂಧಿಸಲು ಪ್ರಸ್ತಾವನೆಯಲ್ಲಿ ಆಗ್ರಹಿಸಲಾಗಿದೆ. ಕಾನೂನಾತ್ಮಕವಾಗಿ RSS ನಿಷೇಧಿಸಲು ಸಾಧ್ಯವಿಲ್ಲವೆಂದು ಅರಿತಿರುವ ಹಿನ್ನಲೆ RSS ಚಟುವಟಿಕೆ ನಿರ್ಬಂಧಿಸುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
RSS ನೋಂದಣಿ ಆಗದೇ ಇರುವ ಸಂಘಟನೆಯಾಗಿದ್ದು, ನೋಂದಣಿ ಆಗಿದ್ದರೆ ಅವರು ನಮಗೆ ತೋರಿಸಲಿ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ. RSSನವರಿಗೆ ಪೊಲೀಸರು ಪರ್ಮಿಷನ್ ಕೊಟ್ಟಿದ್ದೇಕೆ? ತಮಿಳುನಾಡಿನ ಶಾಲೆಯಲ್ಲಿ RSS ಕಾರ್ಯಕ್ರಮ ನಡೆದಿತ್ತು. ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ್ದಕ್ಕೆ ಕೇಸ್ ಹಾಕಲಾಗಿದೆ. ನಮ್ಮಲ್ಲೂ ತಮಿಳುನಾಡಿನಂತೆ ಮಾಡಬೇಕೆಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:01 pm, Sun, 12 October 25