MLC By Election: ವಿಧಾನಪರಿಷತ್ ಉಪ ಚುನಾವಣೆ; ಕಾಂಗ್ರೆಸ್​​ನ ಜಗದೀಶ್​​ ಶೆಟ್ಟರ್​, ಬೋಸರಾಜು, ತಿಪ್ಪಣ್ಣ ಅವಿರೋಧ ಆಯ್ಕೆ

|

Updated on: Jun 23, 2023 | 4:31 PM

ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್​​ಗೆ ಪರಿಷತ್ ಉಪಚುಣಾವಣೆಯಲ್ಲಿಯೂ ಭರ್ಜರಿ ಮುನ್ನಡೆಯಾದಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿದ್ದ ಜಗದೀಶ್ ಶೆಟ್ಟರ್ ಅವರಿಗೂ ತುಸು ನಿರಾಳತೆ ಒದಗಿದಂತಾಗಿದೆ.

MLC By Election: ವಿಧಾನಪರಿಷತ್ ಉಪ ಚುನಾವಣೆ; ಕಾಂಗ್ರೆಸ್​​ನ ಜಗದೀಶ್​​ ಶೆಟ್ಟರ್​, ಬೋಸರಾಜು, ತಿಪ್ಪಣ್ಣ ಅವಿರೋಧ ಆಯ್ಕೆ
ಬೋಸರಾಜು ಮತ್ತು ಜಗದೀಶ್​​ ಶೆಟ್ಟರ್
Follow us on

ಬೆಂಗಳೂರು: ಕರ್ನಾಟಕ ವಿಧಾನಪರಿಷತ್​​ನ ತೆರವಾಗಿದ್ದ ಮೂರು ಸ್ಥಾನಗಳಿಗೆ ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್ (Jagadish Shettar), ತಿಪ್ಪಣ್ಣಪ್ಪ ಕಮಕನೂರ್, ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಎನ್‌ಎಸ್ ಬೋಸರಾಜು ಶುಕ್ರವಾರ ಸಂಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಜೂನ್ 30ರಂದು ಚುನಾವಣೆ (MLC By Election) ನಡೆಸಬೇಕಾದ ಅಗತ್ಯ ಎದುರಾಗದು. ವಿಧಾನಪರಿಷತ್ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಇಂದು (ಜೂನ್ 23) ಕೊಮನೆಯ ದಿನವಾಗಿತ್ತು. ಕಣದಲ್ಲಿ ಮೂವರೇ ಇದ್ದ ಕಾರಣದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.

ವಿಧಾನಪರಿಷತ್ ತೆರವಾಗಿರುವ ಸ್ಥಾನಗಳಿಗೆ ಜೂನ್ 30ರಂದು ಉಪಚುನಾವಣೆ ನಿಗದಿಯಾಗಿತ್ತು.

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಪರಿಷತ್​​ನ ಮೂರು ಸ್ಥಾನಗಳು ತೆರವಾಗಿದ್ದವು. ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ರಾಜೀನಾಮೆ ನೀಡಿದ್ದರಿಂದ ಸ್ಥಾನಗಳು ತೆರವಾಗಿದ್ದವು.

ಇದನ್ನೂ ಓದಿ: MLC By Election: ವಿಧಾನಪರಿಷತ್ ಉಪ ಚುನಾವಣೆ; ಕಾಂಗ್ರೆಸ್​​ನಿಂದ ಜಗದೀಶ್​​ ಶೆಟ್ಟರ್​, ಬೋಸರಾಜು, ತಿಪ್ಪಣ್ಣಗೆ ಟಿಕೆಟ್

ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್​​ಗೆ ಪರಿಷತ್ ಉಪಚುಣಾವಣೆಯಲ್ಲಿಯೂ ಭರ್ಜರಿ ಮುನ್ನಡೆಯಾದಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿದ್ದ ಜಗದೀಶ್ ಶೆಟ್ಟರ್ ಅವರಿಗೂ ತುಸು ನಿರಾಳತೆ ಒದಗಿದಂತಾಗಿದೆ. ನೂತನ ಕಾಂಗ್ರೆಸ್ ಸರ್ಕಾರದ ಸಂಪುಟ ರಚನೆಯಾದ ಬಳಿಕ ಶೆಟ್ಟರ್ ಅವರನ್ನು ಭೇಟಿಯಾಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ