ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಟ್ಟರೆ ಕಷ್ಟಕರವಾಗಲಿದೆ: ಅಣ್ಣಾಮಲೈ

|

Updated on: Mar 06, 2023 | 7:29 PM

ಪ್ರಧಾನಿ ನರೇಂದ್ರ ಮೋದಿ ಅವರು ನಬಭಾರತ ನಿರ್ಮಾಣದ ಕನಸ್ಸು ಕಂಡಿದ್ದಾರೆ. ಪ್ರತಿಯೊಬ್ಬರ ಒಂದೊಂದು ವೋಟು ಪ್ರಧಾನಿ ಮೋದಿಯವರ ಕನಸಿಗೆ ಹಾಕಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮನವಿ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಟ್ಟರೆ ಕಷ್ಟಕರವಾಗಲಿದೆ: ಅಣ್ಣಾಮಲೈ
ಅಣ್ಣಾಮಲೈ
Follow us on

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಒಂದು ಪಟಾಕಿ ಹೊಡೆಯಬೇಕಾದರೂ ಅನುಮತಿ ಪಡೆಯಬೇಕಿತ್ತು. ಆದರೆ ಕಂಡಕಂಡಲ್ಲಿ ಭಯೋತ್ಪಾದಕರು ಬಾಂಬ್ ಹಾಕುತ್ತಿದ್ದರು ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಹೇಳಿದರು. ಜಿಲ್ಲೆಯಲ್ಲಿ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ (BJP Youth Convention) ಭಾಷಣ ಮಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಬಿಟ್ಟರೆ ಕಷ್ಟವಾಗುತ್ತದೆ. ಕಾಂಗ್ರೆಸ್ಸಿಗರು ಬಿಜೆಪಿ ಸರ್ಕಾರದ ಎಲ್ಲಾ ಸಾಧನೆಗಳನ್ನು ನಾಶ ಮಾಡುತ್ತಾರೆ. ಅವರು ದೇಶ ಮುನ್ನಡೆಸುವುದಿಲ್ಲ, ಬದಲಾಗಿ ದೇಶವನ್ನು ಹಿನ್ನಡೆಸುತ್ತಾರೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್​​ನ ಸಂಸ್ಕೃತಿಯನ್ನು ಮುಕ್ತಾಯ ಮಾಡಬೇಕಿದೆ ಎಂದರು.

ಸಾಮಾನ್ಯ ಜನ ನೀಡಿರುವ ಒಂದೊಂದು ವೋಟು ಈಗ ದೇಶದಲ್ಲಿ ಶಕ್ತಿಯಾಗಿ ಪರಿವರ್ತನೆಯಾಗಿದೆ. ಪ್ರಪಂಚದಲ್ಲಿ ಭಾರತ ಮಾತ್ರ ಪ್ರಗತಿಯತ್ತ ಸಾಗುತ್ತಿದೆ. ಕೆಲವು ರಾಷ್ಟ್ರಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. 2014ರ ಹಿಂದೆ ಯುವಕರಿಗೆ ರಾಜಕೀಯವಾಗಿ ಪ್ರಾಮುಖ್ಯತೆ ಇರಲಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಯುವಕರಿಗೆ ಪ್ರಾಮುಖ್ಯತೆ ನೀಡಲಾಗಿದೆ. ಮೋದಿಯವರು ನವಭಾರತ ನಿರ್ಮಾಣದ ಕನಸುನ್ನು ಕೂಡ ಕಂಡಿದ್ದಾರೆ. ಪ್ರತಿಯೊಬ್ಬರ ಒಂದೊಂದು ವೋಟು ಪ್ರಧಾನಿ ಮೋದಿಯವರ ಕನಸಿಗೆ ಹಾಕಬೇಕು. 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಮತ್ತೆ ಸ್ಪಷ್ಟ ಬಹುಮತ ಬರುತ್ತದೆ ಎಂದರು.

ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲೇ ಬಿಜೆಪಿಗೆ ಬಿಗ್ ಶಾಕ್, ಮತ್ತೋರ್ವ ಮಾಜಿ ಶಾಸಕ ಕಾಂಗ್ರೆಸ್​ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಕಾಂಗ್ರೆಸ್​ನವರು ಉಚಿತ ದವಸಧಾನ್ಯ ನೀಡುವುದರ ಮೂಲಕ ಬಡವರನ್ನು ಅವಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಬರಲು ಬಿಟ್ಟರೆ ಕಷ್ಟವಾಗುತ್ತದೆ. ಬಿಜೆಪಿ ಸರ್ಕಾರ ಮಾಡಿದ ಎಲ್ಲಾ ಸಾಧನೆಗಳನ್ನು ನಾಶಮಾಡುತ್ತಾರೆ. ಹೀಗಾಗಿ ನಾಡಿನ ಯುವ ಜನತೆ ಮುಂದಿನ 45 ದಿನಗಳವರೆಗೂ ಶ್ರಮಪಡಬೇಕು ಎಂದು ಮನವಿ ಮಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Mon, 6 March 23