ಹಳೆ ಮೈಸೂರು ಭಾಗದಲ್ಲೇ ಬಿಜೆಪಿಗೆ ಬಿಗ್ ಶಾಕ್, ಮತ್ತೋರ್ವ ಮಾಜಿ ಶಾಸಕ ಕಾಂಗ್ರೆಸ್​ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸೀಟು ಗೆಲ್ಲಬೇಕೆಂದು ಪಣತೊಟ್ಟಿರುವ ಬಿಜೆಪಿ ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಆದ್ರೆ, ಮತ್ತೊಂದೆಡೆ ಹಳೆ ನಾಯಕರೇ ಪಕ್ಷ ತೊರೆಯುತ್ತಿದ್ದಾರೆ. ಇದರಿಂದ ಬಿಜೆಪಿ ಮೂಲ ಕುಸಿಯುತ್ತಿದೆ.

ಹಳೆ ಮೈಸೂರು ಭಾಗದಲ್ಲೇ ಬಿಜೆಪಿಗೆ ಬಿಗ್ ಶಾಕ್, ಮತ್ತೋರ್ವ ಮಾಜಿ ಶಾಸಕ ಕಾಂಗ್ರೆಸ್​ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಕಾಂಗ್ರೆಸ್, ಬಿಜೆಪಿ ಧ್ವಜImage Credit source: india today
Follow us
ರಮೇಶ್ ಬಿ. ಜವಳಗೇರಾ
|

Updated on: Mar 06, 2023 | 4:02 PM

ಚಾಮರಾಜನಗರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಆಡಳಿತಾರೂಢ ಬಿಜೆಪಿ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ, ಹೈಕಮಾಂಡ್ ನಾಯಕರ ಮೂಲಕ ಹಲವು ರೀತಿಯಲ್ಲಿ ಕಸರತ್ತು ನಡೆಸಿದೆ. ಆದ್ರೆ, ಈ ಭಾಗದಲ್ಲಿರುವ ಬಿಜೆಪಿಯ ನಾಯರು ಒಬ್ಬರಿಂದೊಬ್ಬರು ಪಕ್ಷ ತೊರೆಯುತ್ತಿದ್ದಾರೆ. ಮೊನ್ನೇ ಅಷ್ಟೇ ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಚಾಮರಾಜನಗರದಲ್ಲಿ ಮತ್ತೋರ್ವ ಮಾಜಿ ಶಾಸಕ ಬಿಜೆಪಿ ತೊರೆದು ಕೈ ಹಿಡಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸಚಿವ ನಾರಾಯಣಗೌಡ ಕಾಂಗ್ರೆಸ್​ ಸೇರ್ಪಡೆಗೆ ತೀವ್ರ ವಿರೋಧ, ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆತ, ಕೈಗೆ ಬಳೆ ನೀಡಿ ಕಾರ್ಯಕರ್ತರ ಆಕ್ರೋಶ

ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಬಿಜೆಪಿ ಪಕ್ಷದ ಪ್ರಾಥಾಮಿಕ ಸದಸ್ಯ ಸ್ಥಾನಕ್ಕೆ ಹಾಗೂ ರಾಜ್ಯ ಎಸ್ ‌ಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಾಳೆ(ಮಾ.07) ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇದರಿಂದ ಚುನಾವಣೆ ಹೊತ್ತಲ್ಲೇ ಬಿಜೆಪಿ ಶಾಕ್ ಕೊಟ್ಟಿದ್ದಾರೆ.

ಇನ್ನು ಈ ಬಗ್ಗೆ ಚಾಮರಾಜನಗರದಲ್ಲಿ ಇಂದು(ಮಾ.06) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಂಜುಂಡಸ್ವಾಮಿ, ಭಾರತೀಯ ಜನತಾ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇತ್ತು. ನನಗೆ ಹಾಗೂ ನನ್ನ ಬೆಂಬಲಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲೂ ನನ್ನನ್ನು ಕಡೆಗಣಿಸಲಾಯಿತು. ಪಕ್ಷದ ವರಿಷ್ಠರ ಗಮನಕ್ಕೆ ತಂದರೂ ಸರಿಪಡಿಸುವ ಕೆಲಸ ಆಗಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಯಾವುದೇ ಷರತ್ತಿಲ್ಲದೆ ನಾಳೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಜಿ.ಎನ್.ನಂಜುಂಡಸ್ವಾಮಿ ಅವರು ಈ ಬಾರಿ ಕೊಳ್ಳೆಗಾಲ ವಿಧಾಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ,​ ಎನ್​ ಮಹೇಶ್​ ಅವರಿಗೆ ಟಿಕೆಟ್​ ಖಚಿತವಾಗಿದ್ದರಿಂದ ನಂಜುಂಡಸ್ವಾಮಿ ಅಸಮಾಧಾನಗೊಂಡಿದ್ದಾರೆ. ಇದರಿಂದ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ
ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ