Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ! ಆದ್ರೆ, ಕೋಟೆನಾಡಿನಲ್ಲಿ ಮಲಗುವ ಮುನ್ನ ಪತಿರಾಯ ತನ್ನ ಪತ್ನಿಯ ಹತ್ಯೆಗೈದ

chitradurga: ಸುಂದರ ಸಂಸಾರ ಕಟ್ಟಿಕೊಳ್ಳುವ ದೃಷ್ಟಿಯಿಂದ ಪತಿಗೆ ಬುದ್ಧಿವಾದ ಹೇಳಿದ ಪತ್ನಿಯೇ ಹತ್ಯೆಗೀಡಾದ ದಾರುಣ ಘಟನೆ ಜೋಡಿ ಚಿಕ್ಕೇನಹಳ್ಳಿಯಲ್ಲಿ ನಡೆದಿದೆ. ಪಾಪಿ ಕುಡುಕ ಪತಿ ವಿರುದ್ಧ ಜನ ಹಿಡಿಶಾಪ ಹಾಕುವಂತಾಗಿದೆ.

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ! ಆದ್ರೆ, ಕೋಟೆನಾಡಿನಲ್ಲಿ ಮಲಗುವ ಮುನ್ನ ಪತಿರಾಯ ತನ್ನ ಪತ್ನಿಯ ಹತ್ಯೆಗೈದ
ಕೋಟೆನಾಡಿನಲ್ಲಿ ಮಲಗುವ ಮುನ್ನ ಪತಿರಾಯ ತನ್ನ ಪತ್ನಿಯ ಹತ್ಯೆಗೈದ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 06, 2023 | 4:57 PM

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತೊಂದಿದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಕುಡಿದು ಬಂದ ಪತಿರಾಯ ಮಲಗುವ ಮುನ್ನ ಪತ್ನಿಯ ಹತ್ಯೆಗೈದ (murder) ಘಟನೆ ನಡೆದಿದೆ. ಈ ಕುರಿತು ವರದಿ ಇಲ್ಲಿದೆ. ಕುಡಿದ ಅಮಲಿನಲ್ಲಿ ಪತಿಯಿಂದಲೇ (Alcoholic husband) ಪತ್ನಿಯ (wife) ಭೀಕರ ಹತ್ಯೆ. ಕುಡಿತ ಬಿಟ್ಟು ದುಡಿಮೆ ಮಾಡು ಎಂದ ಪತ್ನಿಯ ಕೊಲೆ. ಗ್ರಾಮದಲ್ಲಿ ಆವರಿಸಿದ ನೀರವ ಮೌನ. ಈ ದೃಶ್ಯಗಳು ಕಂಡು ಬಂದಿರುವುದು ಚಿತ್ರದುರ್ಗ ( chitradurga) ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಗ್ರಾಮದಲ್ಲಿ.

ಹೌದು, ಗ್ರಾಮದ ಲಿಂಗರಾಜ್ ಕೃಷಿ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದವನು. ಸುಮಾರು 12 ವರ್ಷಗಳ ಹಿಂದೆಯೇ ಲಕ್ಷ್ಮೀ ಜತೆ ಮದುವೆ ಆಗಿದ್ದನು. ಸುಂದರ ಸಂಸಾರಕ್ಕೆ ಇಬ್ಬರು ಮಕ್ಕಳು ಸಹ ಜತೆ ಆಗಿದ್ದರು. ಆದ್ರೆ, ಇತ್ತೀಚೆಗೆ ದುಡಿಯುವುದನ್ನು ಬಿಟ್ಟಿದ್ದ ಲಿಂಗರಾಜ್ ಕುಡಿತಕ್ಕೆ ದಾಸನಾಗಿದ್ದ. ಪತ್ನಿ ಲಕ್ಷ್ಮೀಯೇ ಕೂಲಿ ಕೆಲಸ ಮಾಡಿ ಮನೆ ನಡೆಸುವ ಸ್ಥಿತಿ ನಿರ್ಮಾಣ ಆಗಿತ್ತು.

ಈ ಹಿನ್ನೆಲೆಯಲ್ಲಿ ಆಗಾಗ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು. ನಿನ್ನೆ ಸಂಜೆ ವೇಳೆ ಲಕ್ಷ್ಮೀ ಕೂಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದಳು. ಗ್ರಾಮದಲ್ಲಿ ಗ್ರಾಮ ಪಂಚಾಯತಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕುಡಿದ ಅಮಲಿನಲ್ಲಿ ತೇಲುತ್ತಿದ್ದ ಪತಿ ಲಿಂಗರಾಜುನನ್ನು ಕಂಡು ಕುಡಿತ ಬಿಟ್ಟು ದುಡಿಮೆ ಮಾಡುವಂತೆ ಹೇಳಿದ್ದಳು. ಪರಿಣಾಮ ಗಂಡ ಹೆಂಡಿರ ಗಲಾಟೆ ಶುರುವಾಗಿದ್ದು ಲಿಂಗರಾಜು ಕಟ್ಟಿಗೆಯಿಂದ ಪತ್ನಿ ಲಕ್ಷ್ಮೀ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಲಕ್ಷ್ಮೀ ಸಾವಿಗೀಡಾದ ಘಟನೆ ನಡೆದಿದೆ.

ಇನ್ನು ಮೃತ ಲಕ್ಷ್ಮೀಗೆ ಪೋಷಕರು ಇಲ್ಲ. ದೂರದ ಊರಲ್ಲಿ ಸಹೋದರನಿದ್ದಾನಾದರೂ ಸಂಬಂಧಿಗಳ ಸಂಪರ್ಕಕ್ಕೆ ಸಿಕ್ಕಿಲ್ಲ. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸ್ರು ಜೋಡಿಚಿಕ್ಕೇನಹಳ್ಳಿಯಲ್ಲಿನ ಸಂಬಂಧಿಕರ ಮೂಲಕವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿ ಲಿಂಗರಾಜುನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ಕೆ. ಪರಶುರಾಮ್ ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ಸುಂದರ ಸಂಸಾರ ಕಟ್ಟಿಕೊಳ್ಳುವ ದೃಷ್ಟಿಯಿಂದ ಪತಿಗೆ ಬುದ್ಧಿವಾದ ಹೇಳಿದ ಪತ್ನಿಯೇ ಹತ್ಯೆಗೀಡಾದ ದಾರುಣ ಘಟನೆ ಜೋಡಿ ಚಿಕ್ಕೇನಹಳ್ಳಿಯಲ್ಲಿ ನಡೆದಿದೆ. ಪಾಪಿ ಕುಡುಕ ಪತಿ ವಿರುದ್ಧ ಜನ ಹಿಡಿಶಾಪ ಹಾಕುವಂತಾಗಿದೆ. ಗ್ರಾಮಾಂತರ ಠಾಣೆಯ ಪೊಲೀಸ್ರು ಪ್ರಕರಣದ ಕೂಲಂಕಷ ತನಿಖೆ ನಡೆಸಿ ಪಾಪಿ ಪತಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ

ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​