ಮಂಡ್ಯ, ಫೆ.8: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್(BJP-JDS) ಮೈತ್ರಿ ಮಾಡಿಕೊಂಡಿದ್ದರೂ ಮಂಡ್ಯ (Mandya) ಕ್ಷೇತ್ರದಲ್ಲಿ ಎರಡೂ ಪಕ್ಷಗಳಲ್ಲಿ ಒಮ್ಮತ ಮೂಡಿಬಂದಿಲ್ಲ. ಹೈಕಮಾಂಡ್ ಬಿಟ್ಟುಕೊಟ್ಟರೂ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಸಿದ್ಧರಿಲ್ಲದ ಸ್ಥಳೀಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ಪಡೆಯುವುದೇ ಜೆಡಿಎಸ್ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಅದಾಗ್ಯೂ, ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜೆಡಿಎಸ್ ಕೆಲಸ ಆರಂಭಿಸಿದೆ.
ಈಗಾಗಲೇ ಮೈತ್ರಿ ಮಾತುಕತೆ ವೇಳೆ ಮಂಡ್ಯ ಜೆಡಿಎಸ್ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಸಿಗ್ನಲ್ ಕೊಟ್ಟಿದೆ. ಆದರೆ, ಸ್ಥಳೀಯವಾಗಿ ಮಂಡ್ಯದಲ್ಲಿ ಕಮಲ ದಳ ನಾಯಕ ನಡುವೆ ಒಮ್ಮತ ಮೂಡಿಬಂದಿಲ್ಲ. ಬಿಜೆಪಿಯ ಸ್ಥಳೀಯ ನಾಯಕರ ಮನವೊಲಿಕೆಗೆ ಜೆಡಿಎಸ್ ಕಸರತ್ತು ಮುಂದುವರಿಸಿದೆ. ಅದಾಗ್ಯೂ, ಮಂಡ್ಯದ ಮೈತ್ರಿ ಅಭ್ಯರ್ಥಿಯಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ.
ಮಂಡ್ಯ ಲೋಕಸಭಾ ಚುನಾವಣಾ ಅಖಾಡ ಮತ್ತೆ ಗರಿಗೆದರಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎಂಬ ಚರ್ಚೆ ನಡುವೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ಪರ್ಯಟಣೆ ಕುತೂಹಲ ಕೆರಳಿಸಿದೆ. ಮುಂದಿನ ವಾರದಲ್ಲಿ ನಿಖಿಲ್ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಸಿಡಿದೆದ್ದ ನಾರಾಯಣಗೌಡ; ಸಿದ್ದರಾಮಯ್ಯ ಜೊತೆ ರಜಸ್ಯ ಮಾತುಕತೆ
ಮುಂದಿನ ವಾರ ಅಥವಾ ಈ ತಿಂಗಳ ಕೊನೆಯ ವಾರದಲ್ಲಿ ನಿಖಿಲ್ ಮಂಡ್ಯ ಪ್ರವಾಸ ಕೈಗೊಳ್ಳಲಿದ್ದು, ಮಂಡ್ಯ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರವಾಸ ಕೈಗೊಳ್ಳಲಿದ್ದಾರೆ. ಕ್ಷೇತ್ರಗಳ ಪ್ರತಿ ಹೋಬಳಿಯಲ್ಲೂ ಮಹಿಳಾ, ಯುವ ಘಟಕ ಸೇರಿ ಪಕ್ಷದ ಎಲ್ಲ ಘಟಕದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಆ ಮೂಲಕ ಪಕ್ಷದ ಮುಖಂಡರ ವಿಶ್ವಾಸಗಳಿಸಲು ನಿಖಿಲ್ ರಣತಂತ್ರ ರೂಪಿಸುತ್ತಿದ್ದಾರೆ. ಯಾವುದೇ ಸಮಾವೇಶ, ರ್ಯಾಲಿ ನಡೆಸದೆ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಪ್ಲಾನ್ ಮಾಡುತ್ತಿದ್ದಾರೆ. ಹಾಗಾದರೆ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಗುವುದು ಖಚಿತವೇ? ತಂಬ ಕುತೂಹಲವೂ ಮೂಡಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ