ಇಡಿ ಅಧಿಕಾರಿಗಳ ಪರಿಶೀಲನೆ ಅಂತ್ಯ: ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಾಂಗ್ರೆಸ್ ಶಾಸಕ

ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ನಿವಾಸದ ಮೇಲೆ ನಡೆದಿದ್ದ ಇಡಿ ದಾಳಿ ಅಂತ್ಯವಾಗಿದೆ. ಇದರ ಬೆನ್ನಲ್ಲೇ ಕೆ.ವೈ ನಂಜೇಗೌಡ ಅವರು ಮಾಧ್ಯಮಗಳ ಮುಂದೆ ಭಾವುಕರಾಗಿದ್ದಾರೆ. ಹಾಗಾದ್ರೆ, ಇಡಿ ಅಧಿಕಾರಿಗಳು ಏನೆಲ್ಲಾ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ? ಈ ಬಗ್ಗೆ ಶಾಸಕ ಹೇಳಿದ್ದೇನು? ಇಲ್ಲಿದೆ ವಿವರ

ಇಡಿ ಅಧಿಕಾರಿಗಳ ಪರಿಶೀಲನೆ ಅಂತ್ಯ: ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಾಂಗ್ರೆಸ್ ಶಾಸಕ
ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ
Edited By:

Updated on: Jan 09, 2024 | 10:45 PM

ಕೋಲಾರ, (ಜನವರಿ 09): ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ(Congress MLA KY Nanjegowda)  ನಿವಾಸದ ಮೇಲೆ ನಡೆದಿದ್ದ ಇಡಿ ದಾಳಿ (ED raids) ಅಂತ್ಯವಾಗಿದೆ. ನಿನ್ನೆ(ಜನವರಿ 08) ಇಡಿ ಅಧಿಕಾರಿಗಳು ನಂಜೇಗೌಡ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದು, ಇಂದು (ಜನವರಿ 09) ರಾತ್ರಿ ಪರಿಶೀಲನೆ ಅಂತ್ಯವಾಗಿದೆ. ಆದ್ರೆ, ಮನೆಯಲ್ಲಿ ಸಿಕ್ಕ ದಾಖಲಾತಿಗಳನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ನಂಜೇಗೌಡ ದಂಪತಿ ಕಣ್ಣೀರಿಟ್ಟಿದ್ದಾರೆ.

ಇಡಿ ಅಧಿಕಾರಿಗಳು ಪರಿಶೀಲನೆ ಮಾಡಿ ವಾಪಸ್ ಹೋದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಂಜೇಗೌಡ, ನಿನ್ನೆ ಇಡಿ ಅಧಿಕಾರಿಗಳು ನಮ್ಮ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಅವರು ಕೇಳಿದ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಮುಂದೆ ಸಹ ಏನೂ ಆಗಲ್ಲ ಅನ್ನೋ ನಂಬಿಕೆ ಇದೆ. ಮೂರು ವಿಚಾರವಾಗಿ ನನ್ನ ಬಳಿ ಮಾಹಿತಿ ಕೇಳಿದ್ರು, ಒಂದು ಕೋಚಿಮುಲ್ ನೇಮಕಾತಿ, ಎರಡನೆಯದು ಭೂ ಮಂಜೂರಾತಿ ಹಾಗೂ ನನ್ನ ಬಿಸಿನೆಸ್ ಬಗ್ಗೆ ಮಾಹಿತಿ ಕೇಳಿದ್ರು ಎಂದು ವಿವರಿಸಿದರು.

ಇದನ್ನೂ ಓದಿ: ಕೋಚಿಮುಲ್ ಅವ್ಯವಹಾರ: ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ಇಡಿ ದಾಳಿ

ನನ್ನ ಮುಗಿಸಲು ಸಾಕಷ್ಟು ಜನರ ಸಂಚು ರೂಪಿಸಿದ್ದಾರೆ. ಕೆಲವು ದಾಖಲೆ ಹಾಗೂ ತಮ್ಮನ ಮಗಳ ಮದುವೆಗೆ ಬಟ್ಟೆ ತರಲು ಹಣ ಹೊಂದಿಸಿದ್ದೆ, ಆ ಹಣ ಹಾಗೂ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. 16 ಲಕ್ಷ ರೂ. ಹಣ ತೆಗೆದುಕೊಂಡು ಹೋಗಿದ್ದಾರೆ. ಹಣ ವಾಪಸ್ ಕೊಡಿ ಎಂದು ನಮ್ಮ ಮನೆಯವರು ಸಹ ಕೇಳಿಕೊಂಡೆವು. ಆದ್ರೂ ಹಣ ಹಾಗೂ ದಾಖಲೆಗಳು ವಶಕ್ಕೆ ಪಡೆದಿದ್ದಾರೆ, ಮತ್ತೆ ವಿಚಾರಣೆಗೆ ಕರೆದಿದ್ದಾರೆ ಹೋಗುವೆ. ಇಡಿ ಯನ್ನ ಕಾಂಗ್ರೇಸ್ ಮೇಲೆ ಯಾವ ರೀತಿ ದಾಳಿ‌ ಮಾಡಿಸುತ್ತಿದೆ ಎಂದು ಗೊತ್ತಿದೆ. ಅದರ ಕುರಿತು ನಾನೇನು ಮಾತನಾಡುವುದಿಲ್ಲ ಎಂದು ಭಾವುಕರಾದರು. ಇದನ್ನು ನೋಡಿ ಪಕ್ಕದಲ್ಲೇ ಇದ್ದ ಪತ್ನಿ ರತ್ನಮ್ಮ ಸಹ ಕಣ್ಣೀರು ಹಾಕಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Tue, 9 January 24