ಗರಿಗೆದರಿದ ಮಂಡ್ಯ ಲೋಕಸಭಾ ಅಖಾಡ; ಸೋತಲ್ಲಿಯೇ ಪುಟಿದೇಳಲು ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ರೀ ಎಂಟ್ರೀ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 08, 2024 | 6:34 PM

ಕಳೆದ ಬಾರಿಯ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರ ಅಕ್ಷರಶಃ ರಣರಂಗವಾಗಿತ್ತು. ಈ ರಣರಂಗದ ಚಕ್ರವ್ಯೂಹ ಬೇಧಿಸಲು ನಿಖಿಲ್ ವಿಫಲಾರಾಗಿದ್ದರು. ಇದೀಗ ಮತ್ತೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ರಣರಂಗಕ್ಕೆ ಪ್ರವೇಶ ಮಾಡಲು ವೇದಿಕೆ ಸಜ್ಜಾಗುತ್ತಿದೆ. ಸದ್ಯ ಮಂಡ್ಯ ರಾಜಕೀಯದಲ್ಲಿ ಏನೇಲ್ಲಾ ಬೆಳವಣಿಗಳು ನಡೆಯುತ್ತಿವೆ. ಇಲ್ಲಿದೆ ವಿವರ.

ಗರಿಗೆದರಿದ ಮಂಡ್ಯ ಲೋಕಸಭಾ ಅಖಾಡ; ಸೋತಲ್ಲಿಯೇ ಪುಟಿದೇಳಲು ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ರೀ ಎಂಟ್ರೀ
ನಿಖಿಲ್​ ಕುಮಾರಸ್ವಾಮಿ
Follow us on

ಮಂಡ್ಯ, ಫೆ.08: ರಾಜ್ಯ ರಾಜಕೀಯದಲ್ಲಿ ಹೆಚ್ಚು ಸೌಂಡ್ ಮಾಡುವ ಜಿಲ್ಲೆ. ರಾಜ್ಯ ರಾಜಕಾರಣ ಮಾತ್ರವಲ್ಲ ಮಂಡ್ಯದ (Mandya) ರಾಜಕಾರಣ, ದೆಹಲಿ ರಾಜಕೀಯದಲ್ಲೂ ಸದ್ದು ಮಾಡುತ್ತೆ ಎಂದು ಕಳೆದ ಲೋಕಸಭಾ ಚುನಾವಣೆ(Lok Sabha election) ತೋರಿಸಿಕೊಟ್ಟಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ, ದೇಶದಲ್ಲಿಯೇ ಅತೀ ಹೆಚ್ಚು ಸೌಂಡ್ ಮಾಡಿತ್ತು. ಇದಕ್ಕೆ ಕಾರಣವಾಗಿದ್ದು ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ನಡುವಿನ ಸ್ಪರ್ಧೆ. ಇವರಿಬ್ಬರ ನಡುವೆ ನಡೆದ ಲೋಕಸಭಾ ಕುರುಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದರು. ಇನ್ನು ಮಂಡ್ಯ ಲೋಕಸಭಾ ಕುರುಕ್ಷೇತ್ರದ ಚಕ್ರವ್ಯೂಹವನ್ನು ಬೇಧಿಸಲಾಗದೆ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು.

ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ರೌಂಡ್ಸ್​ಗೆ ಮುಂದಾದ ನಿಖಿಲ್ ಕುಮಾರಸ್ವಾಮಿ

ಅಂದಹಾಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕಿಳಿದು ಅಲ್ಲಿಯೂ ಕೂಡ ಸೋಲು ಕಂಡಿದ್ದರು. ಇದೀಗ ಮೊದಲು ಸೋತ ಜಾಗದಲ್ಲೇ ಗೆಲುವು ಕಾಣಬೇಕೆಂದು ನಿಖಿಲ್ ಮತ್ತೆ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಅಗ್ನಿ ಪರೀಕ್ಷೆ ಎದುರಿಸಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ‌. ಇದಕ್ಕೆ ಪೂರಕ ಎಂಬಂತೆ ನಿಖಿಲ್ ಕುಮಾರಸ್ವಾಮಿ ಅವರು ಇದೇ ತಿಂಗಳು ಮಂಡ್ಯ ಲೋಕಸಭಾ ಕ್ಷೇತ್ರದ ಪ್ರವಾಸಕ್ಕೆ ಮುಂದಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳ ರೌಂಡ್‌ಗೆ ನಿಖಿಲ್ ಮುಂದಾಗಿದ್ದಾರೆ.

ಇದನ್ನೂ ಓದಿ:ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲು ಆದ್ರೂ ಸುಮಲತಾ ಸ್ಪರ್ಧೆ?ಯಾವ ಪಕ್ಷದಿಂದ?

ಇನ್ನು ಒಂದೊಂದು ದಿನ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿರುವ ನಿಖಿಲ್, ಇಡೀ ದಿನ ಆ ಕ್ಷೇತ್ರವನ್ನು ಸುತ್ತಲಿದ್ದಾರೆ. ಕಳೆದ ಬಾರಿ ಆದ ತಪ್ಪುಗಳನ್ನು ಮರುಕಳಿಸ ಬಾರದೆಂದು ನಿಖಿಲ್ ಎಲ್ಲಾ ಘಟಕದ ಪದಾಧಿಕಾರಿಗಳನ್ನು‌ ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆಯೂ ಮನವರಿಕೆ ಮಾಡಲಿದ್ದಾರೆ. ನಿಖಿಲ್ ಅವರ ಮಂಡ್ಯ ಲೋಕಸಭಾ ಕ್ಷೇತ್ರದ ಈ ಪ್ರವಾಸದಿಂದ ನಿಖಿಲ್ ಅವರೇ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಗುವುದು ಗ್ಯಾರಂಟಿ ಎಂದು ಮಂಡ್ಯ ರಾಜಕೀಯ ಪಡಸಾಲೆಯಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿವೆ.

ಇನ್ನು ನಿಖಿಲ್ ಸ್ವರ್ಧೆ ಬಗ್ಗೆ ಕಿಡಿಕಾರಿರೋ ಶಾಸಕ ಉದಯ್, ‘ಮಂಡ್ಯದಲ್ಲಿ ಯಾರು ಗಂಡಸರು ಇಲ್ವಾ, ಎಂದು ಸವಾಲು ಹಾಕಿದ್ದಾರೆ. ಒಟ್ಟಾರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭಿಮನ್ಯು ರೀತಿ ಚಕ್ರವ್ಯೂಹ ಬೇಧಿಸಲಾಗದೇ ಮಂಡ್ಯದಲ್ಲಿ ಸೋಲು ಅನುಭವಿಸಿದ್ದ ನಿಖಿಲ್, ಇದೀಗ ಮತ್ತೆ ಮಂಡ್ಯದ ಚುನಾವಣಾ ರಣರಂಗಕ್ಕೆ ಧುಮುಕುತ್ತಾರಾ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ