ಕೇಂದ್ರ ಸಚಿವ ಪಿಯುಷ್ ಗೋಯೆಲ್​ರನ್ನು ಭೇಟಿ ಮಾಡಿದ ಸಚಿವ ಕೆಎಚ್​ ಮುನಿಯಪ್ಪ: ರಾಗಿ ಬೆಲೆ ಹೆಚ್ಚಿಸುವಂತೆ ಮನವಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 31, 2023 | 7:10 PM

ಸೋಮವಾರ ಕೇಂದ್ರ ಆಹಾರ ಸಚಿವ ಪಿಯುಷ್​ ಗೋಯೆಲ್​​ ಅವರನ್ನು ರಾಜ್ಯ ಆಹಾರ ಸಚಿವ ಕೆಎಚ್​ ಮುನಿಯಪ್ಪ ಭೇಟಿ ಮಾಡಿದ್ದು, ರಾಗಿ ಮತ್ತೆ ಜೋಳಕ್ಕೆ ಸಂಗ್ರಹಣೆ ಮಾಡುವ ಬೆಲೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಸಚಿವ ಪಿಯುಷ್ ಗೋಯೆಲ್​ರನ್ನು ಭೇಟಿ ಮಾಡಿದ ಸಚಿವ ಕೆಎಚ್​ ಮುನಿಯಪ್ಪ: ರಾಗಿ ಬೆಲೆ ಹೆಚ್ಚಿಸುವಂತೆ ಮನವಿ
ಸಚಿವ ಕೆ ಎಚ್ ಮುನಿಯಪ್ಪ
Follow us on

ದೆಹಲಿ, ಜುಲೈ 31: ಕೇಂದ್ರ ಆಹಾರ ಸಚಿವ ಪಿಯುಷ್ ಗೋಯೆಲ್​ರನ್ನು ರಾಜ್ಯ ಆಹಾರ ಸಚಿವ ಕೆ ಎಚ್ ಮುನಿಯಪ್ಪ (KH Muniyappa) ಸೋಮವಾರ ಭೇಟಿ ಮಾಡಿದ್ದು, 3 ಮುಖ್ಯ ವಿಚಾರ ಬಗ್ಗೆ ಅವರ ಬಳಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು. ರಾಗಿ ಮತ್ತು ಜೋಳಕ್ಕೆ ಸಂಗ್ರಹಣೆ ಮಾಡುವ ಬೆಲೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಒಂದು ಕ್ವಿಂಟಲ್​ಗೆ ರಾಗಿಗೆ 3, 846 ರೂ. ಇದ್ದು, ಅದನ್ನು 5000 ರೂ, ಮಾಲ್ದಂಡಿ ಜೋಳ 3,225 ರೂ ಇದ್ದು, ಅದನ್ನು 4,500 ರೂ, ಸಾಮಾನ್ಯ ಜೋಳ 3,180 ಇದ್ದು, ಅದುನ್ನ 4,500 ರೂ ಹೆಚ್ಚಳ ಮಾಡಬೇಕು. ಯಾಕೆ ಅಂದರೆ ಗೊಬ್ಬರದ ಬೆಲೆ ತುಂಬಾ ಜಾಸ್ತಿ ಆಗಿದೆ ಎಂದರು.

2014-15 ರಲ್ಲಿ ಇದ್ದ ಗೊಬ್ಬರದ ಬೆಲೆ ಈಗ ಇಲ್ಲಾ. 2014-15 ರಲ್ಲಿ ಡಿಎಪಿ 460ರೂ ಇದ್ದಿದ್ದು, ಇಂದು 1,350 ರೂ ಆಗಿದೆ. 367 ಇದ್ದ ಕಾಂಪ್ಲೇಕ್ಸ್ ಗೊಬ್ಬರ 1,470 ಆಗಿದೆ. ಗೊಬ್ಬರದ ಬೆಲೆ ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಇದು ಸರ್ಕಾರ ನೀಡುವ ಬೆಂಬಲ ಬೆಲೆಗೆ ಹೊಂದಾಣಿಕೆಯಾಗುತ್ತಿಲ್ಲ. ರಾಗಿ ಉತ್ಪಾದನೆ ಹೆಚ್ಚಿದೆ. ಈ ಹಿನ್ನಲೆ 6 ರಿಂದ ಮೆಟ್ರಿಕ್ 8 ಟನ್, ಜೋಳ ಮೂರು ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಮಾಡಲು ಮನವಿ ಮಾಡಿರುವುದಾಗಿ ತಿಳಿಸಿದರು.

ಧಾನ್ಯ ದಾಸ್ತಾನಿಗೆ ಒಪ್ಪಿಕೊಂಡಿದ್ದಾರೆ. ಸುಮಾರು 4 ಪಟ್ಟು ಗೊಬ್ಬರದ ಬೆಲೆ ಜಾಸ್ತಿ ಆಗಿದೆ. ಆದರೆ ರೈತರ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಇದರಲ್ಲಿ ಆಗುವ ಖರ್ಚಿನಿಂದ ರೈತರಿಗೆ ಉಳಿತಾಯ ಏನೂ ಆಗುತ್ತಿಲ್ಲ. ಇದರಿಂದ ರೈತರು ಸಾಲಗಾರರಾಗುತ್ತಿದ್ದು, ಬಳಿಕ ಸಾಲ ಕಟ್ಟದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಇದನ್ನೂ ಓದಿ: ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ, 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಟ್ಟ ಕಾಂಗ್ರೆಸ್: ಬಿಜೆಪಿ ಆಕ್ರೋಶ

ಇವತ್ತು ರಾಷ್ಟ್ರಮಟ್ಟದಲ್ಲಿ ಗೊಬ್ಬರ, ಕೀಟನಾಶಕದ ಬೆಲೆ ಜಾಸ್ತಿ ಆಗುತ್ತಲೇ ಇದೆ. ರೈತರನ್ನ ಉಳಿಸೋಕೆ ಸಂಗ್ರಹಣೆ ಮಾಡುವುದಕ್ಕೆ ಅಂತ ಉತ್ತಮ ಬೆಲೆ ಕೊಡಿ ಅಂತ ಕೇಳಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವರು ಉತ್ತಮವಾಗಿ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದರು.

ನಮ್ಮಲ್ಲಿ ರಾಗಿ ಉತ್ಪದನೆ ಹೆಚ್ಚಿದೆ. ಮಿಲ್ಲೆರ್ಸ್ ಪ್ರಾಬ್ಲಮ್ ಕೂಡ ರಾಜ್ಯದಲ್ಲಿದೆ. ಭತ್ತ ಅವರ ಜಾಗಕ್ಕೆ ತಂದು ಹಾಕಿದರೆ, ಅವರಿಗೆ ಅಷ್ಟು ಖರ್ಚು ಆಗುವುದಿಲ್ಲ. ಆದರೆ ಅವರೇ ರೈತರ ಹತ್ತಿರ ಹೋಗಿ ಭತ್ತ ತರೋದಾದರೆ ಅವರಿಗೆ ಕಷ್ಟ ಆಗುತ್ತೆ. ಹೀಗಾಗಿ ಮಿಲ್ಲೆರ್ಸ್​ಗಳನ್ನ ರಕ್ಷಣೆ ಮಾಡಬೇಕು. ಅವರು ಮೊದಲಿನಿಂದಲ್ಲೂ ಭತ್ತ ಮಿಲ್ ಮಾಡಿ ನಮಗೆ ಕೊಡುತ್ತಿದ್ದಾರೆ. ಸದ್ಯ ಅವರಿಗೆ ಇರುವ ಹೊರೆಯನ್ನ ಕಡಿಮೆ ಮಾಡಬೇಕು ಅಂತ ಮನವಿ ಮಾಡಿದ್ದೇನೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ನಿಲ್ಲದ ಭಿನ್ನಮತ; ಪತ್ರ ಬರೆದ ಶಾಸಕರು ಕ್ಷಮೆ ಕೇಳಿದ್ದಾರೆಂಬ ಪರಮೇಶ್ವರ ಹೇಳಿಕೆಗೆ ರಾಯರೆಡ್ಡಿ ಆಕ್ಷೇಪ

ನಾವು ರಾಗಿಯನ್ನ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಎಷ್ಟು ಬೇಕಾದರೂ ರಾಗಿ ಕೊಡುವುದಕ್ಕೆ ಸಿದ್ದ ಅಂತ ನಾನು ಹೇಳಿದ್ದೇನೆ. ತಮಿಳುನಾಡು, ಕೇರಳ ಸೇರಿದಂತೆ ಹಲವು ಉತ್ತರ ಭಾರತದ ರಾಜ್ಯ ರಾಗಿ ಕೇಳುತ್ತಿದ್ದಾರೆ. ಅದಕ್ಕೆ ನಮಗೆ ಅಂದರೆ ನಮ್ಮ ರೈತರಿಗೆ ಉತ್ತಮ ದರ ಕೊಟ್ಟರೆ ನಾವು ರಾಗಿ ಕೊಡುವುದಕ್ಕೆ ರೆಡಿ ಇದ್ದೇವೆ ಅಂತ ಹೇಳಿದ್ದೇನೆ. ಅಷ್ಟೇ ಅಲ್ಲದೇ ರಾಗಿಯನ್ನ ಪ್ರಮೋಟ್ ಮಾಡುವ ಕೆಲಸ ಸಹ ನೀವು ಮಾಡಬೇಕು ಎಂದಿದ್ದೇನೆ.

ನಂದಿನಿ ತುಪ್ಪ ತಿರುಪತಿಗೆ ಹೋಗದ ವಿಚಾರವಾಗಿ ಮಾತನಾಡಿದ ಅವರು, ನಂದಿನಿ ತುಪ್ಪ ತುಂಬಾ ಚೆನ್ನಾಗಿದೆ. ಅದನ್ನ ಬಳಸುವುದರಿಂದ ಯಾವುದೇ ಸಮಸ್ಯೆ ಇಲ್ಲಾ. ತಿರುಪತಿ ಅಂತ ಅಲ್ಲಾ, ಹಿಂದೆ ಎಲ್ಲೆಲ್ಲಿ ಸಪ್ಲೈ ಮಾಡಲಾಗುತ್ತಿತ್ತೊ ಅಲ್ಲೆಲ್ಲ ಮುಂದುವರಿಸುವಂತೆ ನಾನು ಹೇಳುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.