ಸಿದ್ದರಾಮಯ್ಯನವರ ಸವಾಲ್ ಸ್ವೀಕರಿಸಿ, ಪ್ರತಿಸವಾಲು ಹಾಕಿದ ಶ್ರೀರಾಮುಲು

| Updated By: ರಮೇಶ್ ಬಿ. ಜವಳಗೇರಾ

Updated on: Oct 16, 2022 | 3:33 PM

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸವಾಲನ್ನು ಸಚಿವ ಶ್ರೀರಾಮುಲು ಸ್ವೀಕರಿಸಿದ್ದು, ಜೊತೆ ಪ್ರತಿಸವಾಲ್ ಸಹ​ ಹಾಕಿದ್ದಾರೆ.

ಸಿದ್ದರಾಮಯ್ಯನವರ ಸವಾಲ್ ಸ್ವೀಕರಿಸಿ, ಪ್ರತಿಸವಾಲು ಹಾಕಿದ ಶ್ರೀರಾಮುಲು
Siddarmaiah And Sriramulu
Follow us on

ಬಳ್ಳಾರಿ: ಕಾಂಗ್ರೆಸ್​ ಜೋಡೋ ಯಾತ್ರೆ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಸಚಿವ ಶ್ರೀರಾಮುಲು ವಿರುದ್ಧ ಏಕವಚನದಲ್ಲಿ ಮನಸೋಇಚ್ಛೆ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಇದೀಗ ಸಚಿವ ಶ್ರೀರಾಮುಲು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೇ ಅವರ ಸವಾಲಿಗೆ ಪ್ರತಿಸವಾಲ್ ಹಾಕಿದ್ದಾರೆ.

ಇಂದು(ಅ.16) ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮುಲು, ನಿನ್ನೆ ರಾಹುಲ್ ಗಾಂಧಿ. ಕಾಂಗ್ರೆಸ್ ಮುಖ್ಯಮಂತ್ರಿಗಳು. ಘಟನಾಘಟಿ ನಾಯಕರು ದೊಡ್ಡ ಸಮಾವೇಶ ಮಾಡಿದ್ದು, ಅದನ್ನು ಸೂಕ್ಮವಾಗಿ ಗಮನಿಸಿದೆ. ಸಮಾವೇಶ ಸರ್ಕಸ್ ತರ ಇತ್ತು. ಆ ಸಿದ್ದರಾಮಯ್ಯನವರು ಸರ್ಕಸ್ ಕಂಪನಿಯ ಜೋಕರ್ ತರ ಕಾಣುತ್ತಿದ್ದರು. ಸಮಾವೇಶದಲ್ಲಿ ಉತ್ತರಕುಮಾರ್ ತರ ಕಂಡು ಬಂದರು. ಅವರು ಭಾಷಣದಲ್ಲಿ ಮೋದಿಯವರನ್ನ. ಅಮಿತ್ ಶಾರನ್ನ. ಬೊಮ್ಮಾಯಿಯವರನ್ನ ಬಿಟ್ಟು ಮಾತನಾಡಲು ಬರಲಿಲ್ಲ. ಚಕ್ರವ್ಯೂಹದಲ್ಲಿ ಸಿಲುಕಿದಂತೆ ಕಂಡು ಬಂದರು ಎಂದು ವ್ಯಂಗ್ಯವಾಡಿದರು.

ನಿನ್ನಂತಹ ಪೆದ್ದನ ಜೊತೆ ಚರ್ಚೆ ಮಾಡಲು ನಾವು ತಯಾರಿಲ್ಲ: ಸಚಿವ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ

ಸಿದ್ದರಾಮಯ್ಯನ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರು ನನ್ನ ಕೊನೆಯ ಚುನಾವಣೆ ಅಂತ ಹಿಂದೆ ಘೋಷಣೆ ಮಾಡಿದ್ರು. ಮುಂದಿನ ಚುನಾವಣೆ ಶಾಶ್ವತವಾಗಿ ಕೊನೆಯ ಚುನಾವಣೆ ಆಗಲಿದೆ. ಅವರನ್ನ ಮನೆಗೆ ಕಳುಹಿಸುತ್ತಾರೆ. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಶಕುನಿ‌ ಇದ್ದಂತೆ . ಜೆಡಿಎಸ್ ಪಕ್ಷ ಮುಗಿಸಿದ್ರು. ದೇವಗೌಡರಿಗೆ ಮೋಸ ಮಾಡಿದ್ರು. ಸಿದ್ದರಾಮಯ್ಯ ದ್ರೋಹಿ ಎಂದು ಗುಡುಗಿದರು.

ನಾನು ಪೆದ್ದ ಅಂತ ಹೇಳ್ತಾರೆ. ಆದ್ರೆ ನಾನು ಪೆದ್ದ ಅಲ್ಲ. ಅವರ ರಾಹುಲ್ ಗಾಂಧಿ ತರಹ ನಾನು ಪೆದ್ದ ಅಲ್ಲ. ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಸೋಲಿಸಿದ್ರು. ಸಿದ್ದರಾಮಯ್ಯ ಜಾಣ ಇರಬಹುದು. ಸಿದ್ದರಾಮಯ್ಯ ಸಂಡೇ ವಕೀಲಗಿರಿ ಮಾಡಿಕೊಂಡು ಬಂದವರು ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ರಾಕ್ಷಸ. ಸಿದ್ದರಾಮಯ್ಯಗೆ ಮಸಿ ಬಳಿದು ಸೋಲಿಸಿದ್ರು. ಅವಕಾಶವಾದಿ,‌ ದುಷ್ಟ. ರಾಕ್ಷಸ ರಾಜಕಾರಣಿ ಸಿದ್ದರಾಮಯ್ಯ ಆರ್‌ಎಸ್ ಎಸ್ ಬಗ್ಗೆ ಮಾತನಾಡುತ್ತಾನೆ. ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನೀನು ಎನ್ ಹೋರಾಟ ಮಾಡಿದ್ದಿಯಾ ಎಂದು ಪ್ರಶ್ನಿಸಿದರು.

ಹಿಂದೆ‌ ನೀನೇ ಸಿಎಂ‌ ಆಗಿದ್ದೆ. ಜಾತಿ ಜಾತಿಗಳ‌ ಮಧ್ಯೆ ಜಗಳ ಹಚ್ಚಿಲ್ವಾ.? ಸಿದ್ದರಾಮಯ್ಯ ಯಾವ ಜಾತಿಯನ್ನ ಸಮಾಧಾನವಾಗಿ ಇರಲು ಬಿಟ್ರು. ಎಲ್ಲರ ಮಧ್ಯೆ ಜಗಳ ಹಚ್ಚಿದ್ರು. ಸಿಎಂ ಆಗಿದ್ದ ಸಿದ್ದರಾಮಯ್ಯರನ್ನ ಸೋಲಿಸಿ ಮನೆಗೆ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.

ನಾನು ನಂಬಿಕೆ ದ್ರೋಹಿ ಅಲ್ಲ. ಅನ್ನ‌ ಕೊಟ್ಟ ಮನೆಗೆ ಮೋಸ‌ ಮಾಡಿಲ್ಲ.ನಾನು ಮೋಸ ಮಾಡಿ ರಾಜಕಾರಣ ಮಾಡಿಲ್ಲ. ಸಿದ್ದರಾಮಯ್ಯ ಅಹಿಂದ ಮುಖವಾಡ ಹೊತ್ತುಕೊಂಡು ಖರ್ಗೆಯವರನ್ನ ತುಳಿದ್ರು. ಪರಮೇಶ್ವರ ಅವರನ್ನ ಸೋಲಿಸಿದ್ರು. ಇದು ಸಿದ್ದರಾಮಯ್ಯ ಶಕುನಿ ರಾಜಕಾರಣ. ಈಗ ಡಿಕೆಶಿ ಸಿಎಂ ಆಗೋ‌ ಕನಸು ಕಾಣುತ್ತಿದ್ದಾರೆ. ಅವರ ಕುರಿತಾದ ದಾಖಲೆಗಳನ್ನ ಇಟ್ಟುಕೊಂಡು ಮುಗಿಸುವ ಯತ್ನ ಮಾಡುತ್ತಿದ್ದಾರೆ. ದಾಖಲೆಗಳನ್ನ ಇಟ್ಟುಕೊಂಡು ಬೇರೆಯವರ ಮನೆ ತಟ್ಟುವ ಕೆಲಸ‌ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಸೋಲಿಸುವುದು ಅಲ್ಲ. ಇಡೀ ಕಾಂಗ್ರೆಸ್ ಪಕ್ಷ ಸೋಲಿಸುವುದು ನಮ್ಮ ಅಜೆಂಡಾ. ಸಿದ್ದರಾಮಯ್ಯ ಚಾಮುಂಡೇಶ್ವರಿ. ಬಾದಾಮಿಯಲ್ಲಿ ಸೋತಿದ್ದಾರೆ. ಬಹಿರಂಗ ಚರ್ಚೆಗೆ ಕರೆದಿದಿದ್ದಾರೆ. ಅವರ ಸವಾಲು ಸ್ವೀಕರಿಸಲು ನಾನು ಬದ್ಧ. ಸಿದ್ದರಾಮಯ್ಯ ಬಳ್ಳಾರಿಗೆ ಬಂದಾಗೆಲ್ಲಾ ರೆಡ್ಡಿ-ರಾಮುಲುಗೆ ಬೈಯಲೇ ಸಮಯ ಮೀಸಲಿಟ್ಟಿದ್ದಾರೆ. ಅವರಿಗೆ ಮಾತನಾಡಲು ಬೇರೆ ವಿಷಯಗಳು ಇಲ್ಲ ಎಂದು ಟಾಂಗ್ ನೀಡಿದರು.

ಮೀಸಲಾತಿ ವಿಚಾರದಲ್ಲಿ ಸಿಎಂ ಆಗಿದ್ದ ವೇಳೆ‌ ಸಿದ್ದರಾಮಯ್ಯ ಫೈಲ್ ಮುಚ್ಚಿಟ್ಟಿದ್ದರು. ನಿಮ್ಮ ಮನೆಯಲ್ಲಿ ಫೈಲ್ ಮುಚ್ಚಿಟ್ಟು ಮೋಸ ಮಾಡಿಲ್ಲ. ನಾವು ಮೀಸಲಾತಿ ಕೊಟ್ಟಿದ್ದೇವೆ. ಮೀಸಲಾತಿ ವಿಚಾರದಲ್ಲಿ ಮಾತನಾಡಲು ನೈತಿಕತೆ ಇಲ್ಲ. ಸೋನಿಯಾ ಗಾಂಧಿ ಪ್ಯಾಕೇಜ್ ಎಲ್ಲಿ ಹೋಯ್ತು ಎಂದು ಲೆಕ್ಕ ಕೊಡಲಿ ಎಂದು ಆಗ್ರಹಿಸಿದರು.

ಸಿದ್ದು ಸವಾಲ್​ಗೆ ಶ್ರೀರಾಮುಲು ಪ್ರತಿಸವಾಲ್

ಸಿದ್ದರಾಮಯ್ಯ ಬಹಿರಂಗ ಸವಾಲಿಗೆ ನಾನು ಸಿದ್ಧ. ಆದ್ರೆ ನೀವೂ ಸವಾಲಿಗೆ ಉಗ್ರಪ್ಪನ ಕಳುಹಿಸುತ್ತೀರಾ.?
ಉಗ್ರಪ್ಪರನ್ನ ಬಳ್ಳಾರಿ ಜನರು ಸೋಲಿಸಿ ಪಾವಗಡಕ್ಕೆ ಕಳುಹಿಸಿದ್ದಾರೆ. ರಾಹುಲ್ ಗಾಂಧಿ ಯಾತ್ರೆಯ ವೇಳೆ ಬಹಿರಂಗ ಚರ್ಚೆಗೆ ಬರಲಿ. ನಾನು ಬಹಿರಂಗ ಚರ್ಚೆಗೆ ಸಿದ್ಧ. ನಿಮ್ಮ ಸವಾಲಿಗೆ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಬಳ್ಳಾರಿ ನಿಮ್ಮಗೆ ಪ್ರೀತಿಯ ಊರು. ಇಲ್ಲೇ ಬಹಿರಂಗ ಚರ್ಚೆಗೆ ಬರಲಿ. ಬಳ್ಳಾರಿಯಲ್ಲಿ ಅವರು ಬಹಿರಂಗ ಚರ್ಚೆಗೆ ಬರಲಿ. ನಮ್ಮ ಸರ್ಕಾರ. ‌ಮೋದಿ‌ ಕೊಟ್ಟ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವೆ. ಸ್ಥಳ. ದಿನಾಂಕ‌ ನಿಗದಿ ಮಾಡಲಿ ಎಂದು ಸಿದ್ದರಾಮಯ್ಯಗೆ ಶ್ರೀರಾಮುಲು ಪ್ರತಿಸವಾಲ್ ಹಾಕಿದರು.

ನಿಮ್ಮ ಸರ್ಕಾರ ಇದ್ದಾಗ 13 ಸಾವಿರ ಕೋಟಿ ಕೊಡಲಿಲ್ಲ.‌ಆದ್ರೆ ನಮ್ಮ ಸರ್ಕಾರ ಅವಳಿ ಜಿಲ್ಲೆಗೆ 13 ಸಾವಿರ ಕೋಟಿ ರೂ. ಕೊಡಬೇಕಾಯ್ತು. ನಾನು ಸರ್ಕಾರದ ಭಾಗ, ನಾನು ಸಚಿವ ಹಾಲಪ್ಪ ಸೇರಿಕೊಂಡು ಅನುದಾನ ಬಿಡುಗಡೆ ಮಾಡಿಸಿಕೊಂಡು ಬರಬೇಕಾಯ್ತು ಎಂದು ಹೇಳಿದರು.