ಬಳ್ಳಾರಿ, (ಜನವರಿ 11): ಶಾಸಕ ಜನಾರ್ಧನ ರೆಡ್ಡಿ (janardhan reddy) ಪತ್ನಿ ಅರುಣಾ ಲಕ್ಷ್ಮೀ (Aruna Lakshmi) ಅವರು ತಮ್ಮ ಪತಿ ವಿರೋಧಿಗಳಿಗೆ ಸಿನಿಮಾ ಸ್ಟೈಲ್ನಲ್ಲಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಾವ ಸೋಮಶೇಖರ ರೆಡ್ಡಿ (ಜನಾರ್ದನ ರೆಡ್ಡಿ ಸಹೋದರ) (somashekar reddy) ಹಾಗೂ ರೆಡ್ಡಿ ಗೆಳೆಯ ಶ್ರೀರಾಮುಲುಗೆ (Sriramlu) ಖಡಕ್ ವಾರ್ನಿಂಗ್ ನೀಡಿದ್ದಾರೆ. ಜನಾರ್ದನ ರೆಡ್ಡಿ ಸಿಂಹ, ಸಿಂಹ ಯಾವಾಗಲೂ ಸಿಂಗಲ್ ಆಗೇ ಬರತ್ತೆ. ನೀವೆಲ್ಲಾ ಶತ್ರುಗಳು ಒಂದಾದರೂ ಸಹ ಜನಾರ್ದನ ರೆಡ್ಡಿ ಅವರು ಸಿಂಹ. ಸಿಂಹ ಮತ್ತೆ ಬರುತ್ತೆ ನೀವೆಲ್ಲರೂ ಹುಷಾರಾಗಿರಿ ಎಂದು ರೆಡ್ಡಿ ವಿರೋಧಿಗಳಿಗೆ ಅರುಣಾ ಲಕ್ಷ್ಮೀ ಎಚ್ಚರಿಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಜನಾರ್ದನ ರೆಡ್ಡಿ ಹುಟ್ಟುಹಬ್ಬದ ಆಚರಣೆ ವೇಳೆ ಕೇಕ್ ಕಟ್ ಮಾಡಿದ ಬಳಿಕ ಮಾತನಾಡಿದ ಅರುಣಾ ಲಕ್ಷ್ಮೀ , ಜನಾರ್ದನ ರೆಡ್ಡಿ ಸಹಾಯದಿಂದ ರಾಜ್ಯದಲ್ಲಿ ಎಂಎಲ್ಎ, ಎಂಪಿ, ಸಚಿವರು, ಸಿಎಂ ಕೂಡಾ ಆಗಿದ್ದಾರೆ. ಇದರಲ್ಲಿ ರಕ್ತ ಹಂಚಿಕೊಂಡವರು ಇದ್ದಾರೆ. ರಕ್ತ ಹಂಚಿಕೊಳದೇ ಇದ್ದರೂ ಸಹ ರಕ್ತ ಹಂಚಿಕೊಂಡವರಿಗಿಂತ ಹೆಚ್ಚು ಪ್ರೀತಿಯಿಂದ ಇದ್ದವರು ಇದ್ದಾರೆ ಎಂದು ಪರೋಕ್ಷವಾಗಿ ಬಾವ ಸೋಮಶೇಖರ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಗುಡುಗಿದರು.
ರೆಡ್ಡಿ ಕೈಯಲ್ಲಿ ಬೆಳೆದು ಎಂಎಲ್ಎ, ಕೆಎಂಎಫ್ ಚೇರ್ಮನ್, ಮುನಿಸಿಪಲ್ ಚೆರ್ಮನ್ ಆಗಿದ್ದಾರೆ. ಕೃತಜ್ಞತೆ ಇಲ್ಲದೇ ನಡೆದುಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಸೋಮಶೇಖರ್ ರೆಡ್ಡಿಗೆ ಟಾಂಗ್ ಕೊಟ್ಟ ಅರುಣಾ, ಕೌನ್ಸಿಲರಾದ್ರು, ಎಂಎಲ್ ಎ, ಎಂಪಿ, ಮಂತ್ರಿಯಾದ್ರು, ರಾಜ್ಯಮಟ್ಟದ ನಾಯಕ ನಾನೇ ಎಂದು ಬೀಗಿದರು. ಈಗ ಕುಸಿದು ಬಿದ್ದಿದ್ದಾರೆ ಎಂದು ಪರೋಕ್ಷವಾಗಿ ರಾಮುಲುಗೆ ಹಿಗ್ಗಾಮುಗ್ಗಾ ಜಾಡಿಸಿದರು.
ಶತ್ರುವಿನ ಶತ್ರು ಮಿತ್ರನಂತೆ, ಜನಾರ್ದನ ರೆಡ್ಡಿ ಇವರಿಗೆ ಶತ್ರುವಂತೆ. ಇವರೆನ್ನೆಲ್ಲ ಬೆಳಸಿದ್ರಲ್ಲ ಅದಕ್ಕೆ ಇವರಿಗೆ ಜನಾರ್ದನ ರೆಡ್ಡಿ ಶತ್ರುವಂತೆ. ಜನಾರ್ದನ ರೆಡ್ಡಿ ಶತ್ರುಗಳು ಇವರಿಗೆ ಮಿತ್ರನಂತೆ. ಅದಕ್ಕೆ ಶತ್ರುಗಳ ಜೊತೆ ಕೈ ಜೋಡಿಸಲು ಹೋಗಿ ಅವರೂ ಸೋತು, ನನ್ನನ್ನೂ ಸೋಲಿಸಿದ್ದಾರೆ. ಇವರೆಲ್ಲರಿಗೂ ಮತ್ತೆ ಮತ್ತೆ ಹೇಳುವೆ, ನೀವೆಲ್ಲಾ ಶತ್ರುಗಳು ಒಂದಾದ್ರು ಕೂಡಾ ಜನಾರ್ದನ ರೆಡ್ಡಿ ಸಿಂಹ. ರೆಡ್ಡಿ ಸಿಂಹ, ಸಿಂಹ ಯಾವಾಗಲೂ ಸಿಂಗಲ್ ಆಗೇ ಬರತ್ತೆ. ಸಿಂಹ ಮತ್ತೆ ಬರತ್ತೆ ನೀವೆಲ್ಲರೂ ಹುಷಾರಾಗಿರಿ ಎಚ್ಚರಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ