ಸಿಎಂ ವಿರುದ್ಧ ಬಹಿರಂಗ ಟೀಕೆ: ಶೋಕಾಸ್​ ನೋಟಿಸ್​ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು

| Updated By: ರಮೇಶ್ ಬಿ. ಜವಳಗೇರಾ

Updated on: Sep 13, 2023 | 12:13 PM

ಕಾಂಗ್ರೆಸ್​ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧವೇ ಬಹಿರಂಗ ವಾಗ್ದಾಳಿ ನಡೆಸಿದ್ದು, ಇದೀಗ ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಎಐಸಿಸಿ ನೋಟಿಸ್​ ಜಾರಿ ಮಾಡಿದ್ದು, 10 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಇನ್ನು ಈ ಶೋಕಾಸ್ ನೋಟಿಸ್​ಗೆ ಹರಿಪ್ರಸಾದ್ ಮೊದಲ ಪ್ರತಿಕ್ರಿಯೆ ಈ ಕೆಳಗಿನಂತಿದೆ.

ಸಿಎಂ ವಿರುದ್ಧ ಬಹಿರಂಗ ಟೀಕೆ: ಶೋಕಾಸ್​ ನೋಟಿಸ್​ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು
ಬಿಕೆ ಹರಿಪ್ರಸಾದ್
Follow us on

ಬೆಂಗಳೂರು, (ಸೆಪ್ಟೆಂಬರ್ 13): ಸಿಎಂ ಸಿದ್ದರಾಮಯ್ಯ ವಿರುದ್ಧವೇ ಸ್ವಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ಬಹಿರಂಗ ಸಮರ ಸಾರಿದ್ದಾರೆ. ಬಹಿರಂಗ ವೇದಿಕೆಯಲ್ಲೇ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಸಿದ್ದರಾಮಯ್ಯ ಬಣದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವಾಗ ಹರಿಪ್ರಸಾದ್ ಹೇಳಿಕೆಯಿಂದ ಪಕ್ಷಕ್ಕೆ ಇರಿಸು ಮುರಿಸು ಉಂಟಾಗುತ್ತಿದ್ದಂತೆಯೇ ಅಲರ್ಟ್​ ಆದ ಹೈಕಮಾಂಡ್ , ಶೋಕಾಸ್ ನೋಟಿಸ್ ಜಾರಿಮಾಡಿದೆ. ಹತ್ತು ದಿನಗಳಲ್ಲಿ ಉತ್ತರಿಸುವಂತೆ ಬಂದಿರುವ ನೋಟಿಸ್​ಗೆ ಇದೀಗ ಸ್ವತಃ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ನೋಟಿಸ್​ ಅಧಿಕೃತವಾಗಿ ನನ್ನ ಕೈಗೆ ಸಿಕ್ಕಾಗ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ನೋಟಿಸ್​ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಹರಿಪ್ರಸಾದ್, ನೋಟಿಸ್​​ ಬಗ್ಗೆ ವಾಟ್ಸಾಪ್​ನಲ್ಲಿ ನೋಡಿದೆ. ಇಂದು ಕಾಪಿ ಬರಬಹುದು. ನೋಟಿಸ್​ ನನಗೂ ಪಕ್ಷಕ್ಕೂ ಇರುವ ಸಂಬಂಧ. ನೋಟಿಸ್​ ಅಧಿಕೃತವಾಗಿ ನನ್ನ ಕೈಗೆ ಸಿಕ್ಕಿದಾಗ ಉತ್ತರ ಕೊಡುತ್ತೇನೆ. 10 ದಿನ ಸಮಯ ಕೊಟ್ಟಿದ್ದಾರೆಂದು ಗೊತ್ತಾಗಿದೆ. ಎಐಸಿಸಿಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ವಿರುದ್ಧ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ಬಹಿರಂಗ ಟೀಕೆ; ಎಐಸಿಸಿಯಿಂದ ಶೋಕಾಸ್ ನೋಟಿಸ್

ಕಳೆದ ಶನಿವಾರ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ದೇವರಾಜ ಅರಸು ಕಾರಿನಲ್ಲಿ ಹೋದಾಕ್ಷಣ ಅರಸು ಆಗುವುದಿಲ್ಲ ಎಂದು ತಿವಿದಿದ್ದರು. ಅಷ್ಟೇ ಅಲ್ಲ ಎಲ್.ಕೆ.ಅಡ್ವಾಣಿಯನ್ನು ಸಿದ್ದರಾಮಯ್ಯ ಭೇಟಿಯಾಗಿದ್ದರು ಅಂತಲೂ ಪರೋಕ್ಷವಾಗಿ ಹೇಳಿದ್ದರು. ಇನ್ನು ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿರುದ್ಧ ಸಿದ್ದರಾಮಯ್ಯ ಆಪ್ತ ಬಣ ತಿರುಗೇಟು ನೀಡಿತ್ತು. ಸಚಿವ ಎಂಬಿ.ಪಾಟೀಲ್, ಇಂಥಹ ಹೇಳಿಕೆ ಶೋಭೆ ತರುವುದಿಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂದು ಟಾಂಗ್ ಕೊಟ್ಟಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ