ಪಶುಸಂಗೋಪನೆ ಸಚಿವರ ಕ್ಷೇತ್ರದಲ್ಲಿ ಬಣ ರಾಜಕೀಯ: ಚರಂಡಿಗೆ ಹಾಲು ಸುರಿದು ಚಿಟ್ಟೇನಹಳ್ಳಿ ಗ್ರಾಮಸ್ಥರ ಆಕ್ರೋಶ

ಪಶುಸಂಗೋಪನೆ ಸಚಿವರ ಕ್ಷೇತ್ರದಲ್ಲಿ ಬಣ ರಾಜಕೀಯ: ಚರಂಡಿಗೆ ಹಾಲು ಸುರಿದು ಚಿಟ್ಟೇನಹಳ್ಳಿ ಗ್ರಾಮಸ್ಥರ ಆಕ್ರೋಶ

ದಿಲೀಪ್​, ಚೌಡಹಳ್ಳಿ
| Updated By: Rakesh Nayak Manchi

Updated on:Sep 04, 2023 | 10:00 PM

ಹಾಲು ಖರೀದಿ ವಿಚಾರದಲ್ಲೂ ಬಣ ರಾಜಕೀಯ ಮಾಡಿದರೆ ಹೈನುಗಾರಿಕೆ ಮಾಡುವವರು ಏನು ಮಾಡುವುದು ಮಾರಾಯ್ರೆ? ಪಶುಸಂಗೋಪನೆ ಸಚಿವರ ಕ್ಷೇತ್ರದಲ್ಲೇ ಬಣರಾಜಕೀಯಕ್ಕೆ ಚಿಟ್ಟೇನಹಳ್ಳಿಯ ಡೇರಿಯಲ್ಲಿ ಹಾಲು ಖರೀದಿಸದ ಹಿನ್ನೆಲೆ ಗ್ರಾಮಸ್ಥರು ಚರಂಡಿಗೆ ಹಾಲನ್ನು ಸುರಿದ ಘಟನೆ ನಡೆದಿದೆ. ಸಚಿವ ಕೆ.ವೆಂಕಟೇಶ್ ಕುಮ್ಮಕ್ಕಿನಿಂದ ಹಾಲು ಪಡೆಯದ ಆರೋಪ ಕೇಳಿಬಂದಿದೆ.

ಮೈಸೂರು, ಸೆ.4: ಪಶುಸಂಗೋಪನೆ ಸಚಿವ​ ಕೆ.ವೆಂಕಟೇಶ್ (K.Venkatesh) ಅವರ ತವರು ಕ್ಷೇತ್ರ ಪಿರಿಯಪಟ್ಟಣ ತಾಲೂಕಿನಲ್ಲಿ ಬಣ ರಾಜಕೀಯಕ್ಕೆ ಚಿಟ್ಟೇನಹಳ್ಳಿ ಗ್ರಾಮದ ಹೈನುಗಾರರು ಪರದಾಟ ನಡೆಸುವಂತಾಗಿದೆ. ಚಿಟ್ಟೇನಹಳ್ಳಿಯಲ್ಲಿರುವ ಡೇರಿಯಲ್ಲಿ ಕಾರ್ಯದರ್ಶಿ ಹಾಲು ಪಡೆಯದೆ ಮತ್ತೊಂದು ಬಿಎಂಸಿ ಕೇಂದ್ರಕ್ಕೆ ಹಾಲು ಹಾಕುವಂತೆ ತಾಕೀತು ಮಾಡಿದ್ದಾರೆ. ಇದರಿಂದ ದಿಕ್ಕು ತೋದಚೆ ಡೇರಿಗೆ ತಂದ ಹಾಲನ್ನು ಗ್ರಾಮಸ್ಥರು ಚರಂಡಿಗೆ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಸಚಿವ ಕೆ.ವೆಂಕಟೇಶ್ ಕುಮ್ಮಕ್ಕಿನಿಂದ ಕಾರ್ಯದರ್ಶಿ ಹಾಲು ಪಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಒಂದೇ ಡೇರಿಯಲ್ಲಿ ಹಾಲು ಹಾಕಿಸಿಕೊಳ್ಳಬೇಕು ಎಂದು ರೈತರ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Sep 04, 2023 09:55 PM