ಬರ ಸಂಕಷ್ಟ; 114 ತಾಲ್ಲೂಕುಗಳ ಬಿಪಿಎಲ್ ಕುಟುಂಬಗಳಿಗೆ ಅಕ್ಟೋಬರ್ನಿಂದ ಹಣದ ಬದಲು ಹತ್ತತ್ತು ಕೇಜಿ ಅಕ್ಕಿ: ಕೆ ಹೆಚ್ ಮುನಿಯಪ್ಪ
ರಾಜ್ಯದಲ್ಲಿ ಅಕ್ಕಿಯ ದಾಸ್ತಾನು ಇಲ್ಲದ ಕಾರಣ ಹಣ ನೀಡಲಾಗುತಿತ್ತು, ಅದರೆ ಈಗ ಅಕ್ಕಿ ಲಭ್ಯವಿರುವುದರಿಂದ ಮತ್ತು ಬರಗಾಲದಂಥ ಸ್ಥಿತಿಯಲ್ಲಿ ಜನರಿಗೆ ಹಣಕ್ಕಿಂತ ಅಕ್ಕಿ ಮುಖ್ಯವಾಗುವುದರಿಂದ ಅದನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎದು ಸಚಿವ ಹೇಳಿದರು. 114 ತಾಲ್ಲೂಕುಗಳಲ್ಲಿ ಎಷ್ಟು ಬಿಪಿಎಲ್ ಕುಟುಂಬಗಳಿವೆ, ಪ್ರತಿ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಅನ್ನೋದನ್ನು ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ ಎಂದು ಕೆ ಹೆಚ್ ಮುನಿಯಪ್ಪ ಹೇಳಿದರು
ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ (KH Muniyappa) ಒಂದು ಸಂತಸದ ಸಂಗತಿಯನ್ನು ಬಿಪಿಎಲ್ ಕುಟುಂಬಗಳಿಗೆ ನೀಡಿದ್ದಾರೆ. ರಾಜ್ಯದಲ್ಲಿ ಬರಗಾಲದ ಸ್ಥಿತಿ ಎದುರಾಗುರುವುದರಿಂದ 114 ತಾಲ್ಲೂಕುಗಳಲ್ಲಿರುವ ಬಿಪಿಎಲ್ ಕಾರ್ಡ್ ದಾರರಿಗೆ (BPL cardholders) ಅಕ್ಟೋಬರ್ ತಿಂಗಳಿಂದ ಅನ್ನ ಭಾಗ್ಯ ಯೋಜನೆ (Anna Bhagya) ಅಡಿ ಹಣದ ಬದಲು ಅಕ್ಕಿ ನೀಡಲಾಗುತ್ತದೆ ಎಂದು ಹೇಳಿದರು. ನಗರದಲ್ಲಿಂದು ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಸಚಿವ, ರಾಜ್ಯದಲ್ಲಿ ಅಕ್ಕಿಯ ದಾಸ್ತಾನು ಇಲ್ಲದ ಕಾರಣ ಹಣ ನೀಡಲಾಗುತಿತ್ತು, ಅದರೆ ಈಗ ಅಕ್ಕಿ ಲಭ್ಯವಿರುವುದರಿಂದ ಮತ್ತು ಬರಗಾಲದಂಥ ಸ್ಥಿತಿಯಲ್ಲಿ ಜನರಿಗೆ ಹಣಕ್ಕಿಂತ ಅಕ್ಕಿ ಮುಖ್ಯವಾಗುವುದರಿಂದ ಅದನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎದು ಸಚಿವ ಹೇಳಿದರು. 114 ತಾಲ್ಲೂಕುಗಳಲ್ಲಿ ಎಷ್ಟು ಬಿಪಿಎಲ್ ಕುಟುಂಬಗಳಿವೆ, ಪ್ರತಿ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಅನ್ನೋದನ್ನು ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ ಎಂದು ಕೆ ಹೆಚ್ ಮುನಿಯಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ