ಮೈಸೂರು: ಕಾವೇರಿಪುರ ಮೂಡಲಹುಂಡಿ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ, ಎರಡು ಮೇಕೆಗಳ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು
ಟಿ ನರಸೀಪುರ ತಾಲ್ಲೂಕಿನ ಕಾವೇರಿಪುರ ಮೂಡಲಹುಂಡಿ ಗ್ರಾಮವನ್ನು ಹೊಕ್ಕಿರುವ ಈ ಚಿರತೆ ಎರಡು ಮೇಕೆಗಳನ್ನು ಕೊಂದು ತಿಂದಿದೆ. ಬಳಿಕ ಊರ ಹೊರವಲಯದಲ್ಲಿರುವ ಕಾಲುವೆಯೊಂದರ ಬಳಿ ಅದು ಓಡಾಡಿಕೊಂಡಿದ್ದಾಗ ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ ಫೋನಲ್ಲಿ ಅದರ ಚಲನವಲನಗಳನ್ನು ಸೆರೆಹಿಡಿದಿದ್ದಾರೆ.
ಮೈಸೂರು: ನೀವೇನೇ ಹೇಳಿ ಸ್ವಾಮಿ, ಎಲ್ಲ ವನ್ಯಜೀವಿಗಳ ಪೈಕಿ ಚಿರತೆಗಳಿಗೆ (leopards) ಕಾಡುವಾಸಕ್ಕಿಂತ ಜನ ವಾಸ ಮಾಡುವ ಪ್ರದೇಶಗಳೇ ಹೆಚ್ಚು ಇಷ್ಟವಾಗುತ್ತಿದೆ. ಎರಡನೇ ಸ್ಥಾನ ಅನೆಗಳಿಗೆ (elephants) ದಕ್ಕುತ್ತದೆ. ಚಿರತೆ ಹಾವಳಿ, ಊರು ಪ್ರವೇಶಿಸಿದ ಚಿರತೆ, ಬೋನಿಗೆ ಬಿದ್ದ ಚಿರತೆ, ನಾಯಿ, ಕುರಿ ಮೇಲೆ ಚಿರತೆ ದಾಳಿ, ರೈತನ ಮೇಲೆ ಚಿರತೆ ಮಾರಣಾಂತಿಕ ದಾಳಿ-ಇಂಥ ಸುದ್ದಿಗಳನ್ನು ನೀವು ಕನಿಷ್ಟ ವಾರಕ್ಕೊಮ್ಮೆಯಾದರೂ ನೋಡುತ್ತೀರಿ, ಹೌದು ತಾನೇ? ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿರುವ ಶಿವಂಗಂಗಾ ಗಿರಿಯಲ್ಲಿ ಚಿರತೆ ಕಂಡ ಬಗ್ಗೆ ನಾವು ನಿನ್ನೆಯಷ್ಟೇ ವರದಿ ಮಾಡಿದ್ದೆವು. ಇವತ್ತು ಬೆಳಗ್ಗೆ ಮೈಸೂರಿನ ಟಿ ನರಸೀಪುರ ತಾಲ್ಲೂಕಿನ ಕಾವೇರಿಪುರ ಮೂಡಲಹುಂಡಿ (Kaveripura Moodalahundi) ಗ್ರಾಮವನ್ನು ಹೊಕ್ಕಿರುವ ಈ ಚಿರತೆ ಎರಡು ಮೇಕೆಗಳನ್ನು ಕೊಂದು ತಿಂದಿದೆ. ಬಳಿಕ ಊರ ಹೊರವಲಯದಲ್ಲಿರುವ ಕಾಲುವೆಯೊಂದರ ಬಳಿ ಅದು ಓಡಾಡಿಕೊಂಡಿದ್ದಾಗ ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ ಫೋನಲ್ಲಿ ಅದರ ಚಲನವಲನಗಳನ್ನು ಸೆರೆಹಿಡಿದಿದ್ದಾರೆ. ಆದು ಮತ್ತಷ್ಟು ಅನಾಹುತಗಳನ್ನು ನಡೆಸುವ ಮೊದಲು ಆರಣ್ಯ ಇಲಾಖೆ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ