ಚಿಕ್ಕಮಗಳೂರು: ಮದುವೆಯ ಪೋಟೋಶೂಟ್​ಗಾಗಿ ಶಿವಗಂಗಾ ಗಿರಿ ಹೋದವರಿಗೆ ಕಾಣಿಸಿದ್ದು ಚಿರತೆಗಳು!

ಚಿಕ್ಕಮಗಳೂರು: ಮದುವೆಯ ಪೋಟೋಶೂಟ್​ಗಾಗಿ ಶಿವಗಂಗಾ ಗಿರಿ ಹೋದವರಿಗೆ ಕಾಣಿಸಿದ್ದು ಚಿರತೆಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 04, 2023 | 10:38 AM

ಕಡೂರು ತಾಲ್ಲೂಕಿನಲ್ಲಿರುವ ಶಿವಗಂಗಾ ಗಿರಿಯಲ್ಲಿ ಚಿರತೆ ಕಾಣಿಸಿರೋದು ಇದು ಮೊದಲ ಸಲವೇನಲ್ಲ, ಇದಕ್ಕೂ ಮೊದಲು ಸ್ಥಳೀಯರು ವನ್ಯಜೀವಿಯನ್ನು ನೋಡಿದ್ದಾರೆ. ಶಿವಗಂಗಾ ಗಿರಿ ಶ್ರೀ ಕ್ಷೇತ್ರವೂ ಆಗಿರುವುದರಿಂದ ಭಕ್ತರ ದಂಡು ನಿರಂತರವಾಗಿ ಆಗಮಿಸುತ್ತಿರುತ್ತದೆ. ಇದೊಂದು ಏಕಶಿಲಾ ಬೆಟ್ಟ ಮತ್ತು ಬೆಟ್ಟದ ಸುತ್ತ ಬಯಲು ಪ್ರದೇಶವಿದೆ. ಬೆಟ್ಟದ ಮೇಲೆ ಹೋಗಲು ಉತ್ತಮವಾದ ರಸ್ತೆ ಇದೆ ಮತ್ತು ಮೆಟ್ಟಿಲುಗಳು ಸಹ ಇವೆ.

ಚಿಕ್ಕಮಗಳೂರು: ಮದುವೆಯ ಮಮತೆಯ ಕರೆಯೋಲೆ ಚಿರತೆಗಳಿಗೆ (leopards) ತಲುಪಿತ್ತೋ ಇಲ್ಲವೋ ಗೊತ್ತಿಲ್ಲ ಮಾರಾಯ್ರೇ ಆದರೆ, ಲಗ್ನದ ಪೋಟೋ ಶೂಟ್ (pre-wedding photo shoot) ನಡೆಯುವ ಸಂದರ್ಭದಲ್ಲೇ ಜಿಲ್ಲೆಯ ಪ್ರಸಿದ್ಧ ಶಿವಗಂಗಾ ಗಿರಿಯಲ್ಲಿ (Shivaganga Giri) ಮೂರು ಚಿರತೆಗಳು ಪ್ರತ್ಯಕ್ಷವಾಗಿಬಿಟ್ಟಿದ್ದವು. ವಿಡಿಯೋ ಕಾಣೋದು ಒಂದು ಚಿರತೆಯಾದರೂ ಗಿರಿಯಲ್ಲಿ ಮೂರು ಚಿರತೆಗಳಿದ್ದವು ಎನ್ನುತ್ತಾರೆ ದ್ರೋಣ್ ಮೂಲಕ ಮೊದಲು ಲೊಕೇಶನ್ ಶೂಟ್ ಮಾಡೋಣ ಅಂತ ತೆರಳಿದವರು. ಹಾಗೆ ನೋಡಿದರೆ, ಕಡೂರು ತಾಲ್ಲೂಕಿನಲ್ಲಿರುವ ಶಿವಗಂಗಾ ಗಿರಿಯಲ್ಲಿ ಚಿರತೆ ಕಾಣಿಸಿರೋದು ಇದು ಮೊದಲ ಸಲವೇನಲ್ಲ, ಇದಕ್ಕೂ ಮೊದಲು ಸ್ಥಳೀಯರು ವನ್ಯಜೀವಿಯನ್ನು ನೋಡಿದ್ದಾರೆ. ಶಿವಗಂಗಾ ಗಿರಿ ಶ್ರೀ ಕ್ಷೇತ್ರವೂ ಆಗಿರುವುದರಿಂದ ಭಕ್ತರ ದಂಡು ನಿರಂತರವಾಗಿ ಆಗಮಿಸುತ್ತಿರುತ್ತದೆ. ಇದೊಂದು ಏಕಶಿಲಾ ಬೆಟ್ಟ ಮತ್ತು ಬೆಟ್ಟದ ಸುತ್ತ ಬಯಲು ಪ್ರದೇಶವಿದೆ. ಬೆಟ್ಟದ ಮೇಲೆ ಹೋಗಲು ಉತ್ತಮವಾದ ರಸ್ತೆ ಇದೆ ಮತ್ತು ಮೆಟ್ಟಿಲುಗಳು ಸಹ ಇವೆ. ಇದರ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳು ಬೆಟ್ಟದ ಕಡೆ ಸುಳಿಯದಂತೆ ಮಾಡುವ ಆವಶ್ಯಕತೆಯಂತೂ ಇದ್ದೇ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ