AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ: ತಿರುಮಲ ಬೆಟ್ಟದಲ್ಲಿ ಮತ್ತೆ ಚಿರತೆ-ಕರಡಿ ಪ್ರತ್ಯಕ್ಷ, ಅಲಿಪಿರಿ ಕಾಲ್ನಡಿಗೆ ಮೆಟ್ಟಿಲುಗಳ ಮೇಲೆ ಚಿರತೆ ಹಾವಳಿ

Leopard in TTD: ಬುಧವಾರ ಬೆಳಗ್ಗೆ ಪಾದಚಾರಿ ಮಾರ್ಗದ ಬಳಿ ಚಿರತೆಯೊಂದು ಸಂಚರಿಸಿದೆ ಎಂದು ಭಕ್ತರು ಹೇಳುತ್ತಾರೆ. ಕೆಲ ಭಕ್ತರು ಗುಂಪು ಗುಂಪಾಗಿ ಹೋಗುತ್ತಿದ್ದಾಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ನಾಮಲಗಣಿ ಬಳಿ ಮರಗಳ ನಡುವೆ ಚಿರತೆ ಕಂಡ ಭಕ್ತರು ಭಯಭೀತರಾಗಿ ಓಡಿದರು. ಸ್ವಲ್ಪ ಸಮಯದ ನಂತರ ಕರಡಿಯೂ ಕಾಣಿಸಿಕೊಂಡಿದೆ. ಗಾಬರಿಗೊಂಡ ಭಕ್ತರು ಈ ವಿಷಯವನ್ನು ಟಿಟಿಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಟಿಟಿಡಿ ಹಾಗೂ ಅರಣ್ಯಾಧಿಕಾರಿಗಳ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದೆ.

ಸಾಧು ಶ್ರೀನಾಥ್​
|

Updated on: Aug 17, 2023 | 12:13 PM

Share

ತಿರುಪತಿ, ಆಗಸ್ಟ್​ 17: ತಮ್ಮ ಆರಾಧ್ಯದೈವ ತಿಮ್ಮಪ್ಪನ (tirupati) ದರ್ಶನಕ್ಕಾಗಿ ತಿರುಮಲ ಬೆಟ್ಟದಲ್ಲಿ ಕಾಲ್ನಡಿಗೆಯಲ್ಲಿ ತೆರಳಲು ಭಕ್ತರು ಗಡಗಡ ನಡುಗುತ್ತಿದ್ದಾರೆ. ಚಿರತೆಗಳ ಭಯ ಭಕ್ತರನ್ನು ಕಾಡುತ್ತಿದೆ. ಮೆಟ್ಟಿಲು ಹತ್ತಿ ಮಗುವನ್ನು ಕೊಂದ ಚಿರತೆ ಕೊನೆಗೂ ಸಿಕ್ಕಿಬಿದ್ದಿದ್ದು, ಇದೀಗ ಮತ್ತೊಂದು ಚಿರತೆ (leopard) ಹಾಗೂ ಕರಡಿ (bear) ಕಾಣಿಸಿಕೊಂಡಿರುವುದರಿಂದ ತಿರುಮಲದಲ್ಲಿ ಆತಂಕ ಮೂಡಿದೆ. ನಿನ್ನೆ ಬುಧವಾರ ಬೆಳಗ್ಗೆ ಪಾದಚಾರಿ ಮಾರ್ಗದ ಬಳಿ ಚಿರತೆಯೊಂದು ಸಂಚರಿಸಿದೆ ಎಂದು ಭಕ್ತರು ಹೇಳುತ್ತಾರೆ. ಕೆಲ ಭಕ್ತರು ಗುಂಪು ಗುಂಪಾಗಿ ಹೋಗುತ್ತಿದ್ದಾಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ನಾಮಲಗಣಿ ಬಳಿ (alipiri steps) ಮರಗಳ ನಡುವೆ ಚಿರತೆ ಕಂಡ ಭಕ್ತರು ಭಯಭೀತರಾಗಿ ಓಡಿದರು.

ಸ್ವಲ್ಪ ಸಮಯದ ನಂತರ ಕರಡಿಯೂ ಕಾಣಿಸಿಕೊಂಡಿದೆ. ಗಾಬರಿಗೊಂಡ ಭಕ್ತರು ಈ ವಿಷಯವನ್ನು ಟಿಟಿಡಿ (ttd) ಅಧಿಕಾರಿಗಳಿಗೆ ತಿಳಿಸಿದ್ದಾರೆ. ಟಿಟಿಡಿ ಹಾಗೂ ಅರಣ್ಯಾಧಿಕಾರಿಗಳ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ತಿರುಮಲ ಅಲಿಪಿರಿ ಮಾರ್ಗದಲ್ಲಿ ಮತ್ತೆ ತೀವ್ರ ಆತಂಕ ಮತ್ತು ಉದ್ವಿಗ್ನತೆ ಉಂಟಾಗಿದೆ. ಕಾಡು ಪ್ರಾಣಿಗಳ ದಾಂಗುಡಿಯಿಟ್ಟಿ ಸರಣಿ ಘಟನೆಗಳಿಂದ ಭಕ್ತರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು: ಗುಲಾಂ ನಬಿ ಆಜಾದ್

ಈ ನಡುವೆ ತಿರುಮಲ ಮೆಟ್ಟಿಲುಗಳ ಆಸುಪಾಸಿನಲ್ಲಿ ಮೂರು ಚಿರತೆಗಳು ಓಡಾಡುತ್ತಿರುವುದನ್ನು ಟಿಟಿಡಿ ಬಹಿರಂಗಪಡಿಸಿದೆ. ಅವನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹಾಗೂ ಟಿಟಿಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸಿಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ.

ತಿರುಮಲ ಮೆಟ್ಟಿಲುಗಳ ಮೇಲೆ ನಿರ್ಬಂಧಗಳು ಮುಂದುವರಿದಿದ್ದು, ಎಲ್ಲಾ ಭಕ್ತರು ಸಹಕರಿಸುವಂತೆ ಕೋರಲಾಗಿದೆ. ಚಿರತೆ ಹಿಡಿಯಲು ಕ್ರಮ ಕೈಗೊಂಡಿದ್ದು, ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡುವುದಾಗಿ ಟಿಟಿಡಿ ತಿಳಿಸಿದೆ. ಮೂರು ದಿನಗಳ ಹಿಂದೆ ತಿರುಮಲ ಮೆಟ್ಟಿಲುಗಳ ಮೇಲಿರುವ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನೆಲ್ಲೂರು ಜಿಲ್ಲೆಯ ಲಕ್ಷಿತಾ ಎಂಬ ಬಾಲಕಿಯನ್ನು ಚಿರತೆಯೊಂದು ಕೊಂದು ಹಾಕಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ