ಕುಡಿಯುವ ನೀರಿಗೂ ನಿರ್ಬಂಧ; ಪಶ್ಚಿಮ ಬಂಗಾಳದ ದಾಸ್ಪುರ್ನಲ್ಲಿ ನೀರಿಗಾಗಿ ಕಣ್ಣೀರಿಟ್ಟ ಕುಟುಂಬ
ಈ ಆರೋಪ ಬೆಳಕಿಗೆ ಬಂದ ನಂತರ ದಾಸ್ಪುರd ಠಾಣೆ ಪೊಲೀಸರು ಎಲ್ಲ ನಲ್ಲಿಗಳನ್ನು ಬುಧವಾರ ಸರಿಪಡಿಸಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ರಾತ್ರಿಯ ವೇಳೆಗೆ ಮತ್ತೆ ಮುರಿದುಬಿತ್ತು. ಕಳ್ಳರು ಪೈಪ್ ಸಮೇತ ನಲ್ಲಿಯನ್ನು ಒಡೆದಿದ್ದಾರೆ ಎನ್ನಲಾಗಿದೆ. ಬ್ಲಾಕ್ ಆಡಳಿತ ಇದನ್ನು ಸರಿಪಡಿಸಿತ್ತು, ಆದರೆ ಯಾರೋ ಅದನ್ನು ಮುರಿದರು ಎಂದು ಬಿಡಿಒ ವಿಕಾಸ್ ನಸ್ಕರ್ ಹೇಳಿದ

ದಾಸ್ಪುರ: ಗಂಟೆಗಟ್ಟಲೆ ಕಾದರೂ ಕುಡಿಯುವ ನೀರು (Water) ಸಿಗುತ್ತಿಲ್ಲ. ನಲ್ಲಿಗಳು ಮುರಿದುಹೋಗಿವೆ, ಕೆಲವು ಪೈಪ್ ನಲ್ಲಿಗಳನ್ನು ಮುಚ್ಚಲಾಗಿದೆ. ‘ಪಂಚಾಯ್ತಿಗೆ ಹೋಗು’ ಎಂದು ಪೊಲೀಸ್ ಠಾಣೆಯವರು ಹೇಳುತ್ತಾರೆ, ಪಂಚಾಯಿತಿಯವರು ಠಾಣೆಗೆ ಕಳುಹಿಸುತ್ತಾರೆ. ನೀರಿಗಾಗಿ ಪರದಾಡುತ್ತಿದ್ದರೂ ಪರಿಹಾರ ಸಿಗದ ಕಾರಣ ಇಲ್ಲಿನ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಪಶ್ಚಿಮ ಬಂಗಾಳ (West Bengal)ದ ಪಶ್ಚಿಮ ಮೇದಿನಿಪುರ ಜಿಲ್ಲೆಯ ದಾಸ್ಪುರ್ (Daspur) ಥಾನಾ ಪ್ರದೇಶದ ಸಮತ್ ಗ್ರಾಮದ ಘಟನೆ ನಡೆದಿದೆ. ಸ್ಥಳೀಯ ಮೂಲಗಳ ಪ್ರಕಾರ ಕೆಲವು ಬುಡಕಟ್ಟು ಸಮುದಾಯಗಳು ಇಂತಹ ಫತ್ವಾ ಹೊರಡಿಸಿವೆ. ಆ ಕುಟುಂಬಗಳಿಗೆ ನೀರು ಸಿಗದಂತೆ ಪದೇ ಪದೇ ನಲ್ಲಿ ಒಡೆದು ಬಿಡುವವರು ಇವರೇ. ಯಾರೂ ಅವರಿಗೆ ನೀರಿನ ಸಹಾಯ ಮಾಡಬಾರದು ಎಂದು ಫತ್ವಾ ಹೊರಡಿಸಿದ್ದೇ ಇದಕ್ಕೆಲ್ಲ ಕಾರಣ ಎಂದು ಟಿವಿ9 ಬಾಂಗ್ಲಾ ವರದಿ ಮಾಡಿದೆ.
ಸರ್ಕಾರ ಮನೆ ಮುಂದೆ ಕುಡಿಯುವ ನೀರಿಗಾಗಿ ನಲ್ಲಿಗಳನ್ನು ಅಳವಡಿಸಿದೆ. ಗ್ರಾಮದ ಹಲವೆಡೆ ಆ ನಲ್ಲಿಯನ್ನು ಮುಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಕುಡಿಯುವ ನೀರು ಸಿಗದೆ ಗ್ರಾಮದ ಮಂಜುರಿದೇವಿ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡರು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ. ನೀರು ಕುಡಿಯದೆ ಎಷ್ಟು ದಿನ ಬದುಕಬೇಕು ಎಂಬುದು ಅರ್ಥವಾಗುತ್ತಿಲ್ಲ. ಮೊದಲು ಪೊಲೀಸ್ ಠಾಣೆಗೆ ಹೋದೆವು. ಅದನ್ನೆಲ್ಲ ಸರಿ ಮಾಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದರು. ಆದರೆ ಇಲ್ಲ, ಪರಿಹಾರ ಸಿಗದ ಕಾರಣ ಪಂಚಾಯಿತಿ ಮೊರೆ ಹೋದೆವು, ಅಲ್ಲಿಂದ ಪೋಲೀಸ್ ಠಾಣೆಗೆ ಹೋಗಿ ಅಂತಾರೆ. ಆದರೆ, ಹಳ್ಳಿಯಲ್ಲಿ ಹೊರಡಿಸಲಾದ ಫತ್ವಾ ಬಗ್ಗೆ ಯಾರೂ ಬಾಯಿ ಬಿಡುತ್ತಿಲ್ಲ.
ಈ ಆರೋಪ ಬೆಳಕಿಗೆ ಬಂದ ನಂತರ ದಾಸ್ಪುರd ಠಾಣೆ ಪೊಲೀಸರು ಎಲ್ಲ ನಲ್ಲಿಗಳನ್ನು ಬುಧವಾರ ಸರಿಪಡಿಸಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ರಾತ್ರಿಯ ವೇಳೆಗೆ ಮತ್ತೆ ಮುರಿದುಬಿತ್ತು. ಕಳ್ಳರು ಪೈಪ್ ಸಮೇತ ನಲ್ಲಿಯನ್ನು ಒಡೆದಿದ್ದಾರೆ ಎನ್ನಲಾಗಿದೆ. ಬ್ಲಾಕ್ ಆಡಳಿತ ಇದನ್ನು ಸರಿಪಡಿಸಿತ್ತು, ಆದರೆ ಯಾರೋ ಅದನ್ನು ಮುರಿದರು ಎಂದು ಬಿಡಿಒ ವಿಕಾಸ್ ನಸ್ಕರ್ ಹೇಳಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತು ರಾಜನಗರ ಗ್ರಾಮ ಪಂಚಾಯಿತಿ ಉಪ ಮುಖ್ಯಸ್ಥ ಹಾಗೂ ತೃಣಮೂಲ ಮುಖಂಡ ಚಿನ್ಮಯ್ ಚಕ್ರವರ್ತಿ ಮಾತನಾಡಿ, ಘಟನೆಯ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ತಮಿಳುನಾಡಿಗೆ ಹೆಚ್ಚುವರಿ ಕಾವೇರಿ ನೀರು, ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ: ಹೆಚ್ಡಿಕೆ ಕಿಡಿ
ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಯಾರ ವಿರುದ್ಧ ದೂರು ನೀಡಲಾಗಿದೆಯೋ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆದಿವಾಸಿ ಸಂಘಟನೆ ಮುಖಂಡ ರಾಕೇಶ್ ನಾಯ್ಕ ಹೇಳಿದರು. ಸಮಸ್ಯೆ ಬಗ್ಗೆ ತಿಳಿದು ಪೊಲೀಸರು ಹಾಗೂ ಬಿಡಿಒಗೆ ವಿಷಯ ತಿಳಿಸಿದ್ದಾರೆ. ಈ ರೀತಿ ಮಾಡುತ್ತಿರುವವರು ಕೂಡಲೇ ನಿಲ್ಲಿಸಿ ಎಂದು ಮನವಿ ಮಾಡಿದರು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ