ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಮುಕ್ತವಾಗಿ ವಿವರಿಸಿದ ವಿವಿಯ ಉಪನ್ಯಾಸಕ!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಮುಕ್ತವಾಗಿ ವಿವರಿಸಿದ ವಿವಿಯ ಉಪನ್ಯಾಸಕ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 04, 2023 | 11:33 AM

ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿರುವ ವಿಧಾನ ಗಾಬರಿ ಮತ್ತು ಆತಂಕ ಮೂಡಿಸುತ್ತದೆ ಎಂದು ಉಪನ್ಯಾಸಕ ಹೇಳುತ್ತಾರೆ. ಅಧ್ಯಯನ ಮತ್ತು ಪ್ರಾದೇಶಿಕ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಮನಬಂದಂತೆ ಹಣ ಪೀಕಲಾಗುತ್ತಿದೆ, ಉಚಿತವಾಗಿ ಅಡ್ಮಿಶನ್ ಪಡೆಯಬೇಕಿದ್ದ ಅಂಧ ವಿದ್ಯಾರ್ಥಿಯೊಬ್ಬರಿಂದ ರೂ. 12,000 ಕಿತ್ತುಕೊಳ್ಳಲಾಗಿದೆ ಅಂತ ಅವರು ಹೇಳುತ್ತಾರೆ.

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಹಗರಣಗಳ ಕೂಪ. ಅಲ್ಲಿಂದ ಯಾವುದಾದರು ವಿವಾದ ಹೊರಬೀಳದಿದ್ದರೆ ವಿವಿ ಬಂದ್ ಆಗಿದೆ ಅಂತಲೇ ಅರ್ಥ. ಕೆಎಸ್​ಒಯು ಒಂದು ಸದ್ದುದ್ದೇಶದಿಂದ ಸ್ಥಾಪಿಸಲಾಯಿತು. ಆದರೆ, ಆ ಉದ್ದೇಶವೊಂದನ್ನು ಬಿಟ್ಟು ಬೇರೆಲ್ಲ ವಿದ್ಯಮಾನಗಳು-ಅವ್ಯಹಾರಗಳು ಅನ್ನೋದು ಹೆಚ್ಚು ಸೂಕ್ತ; ವಿವಿ, ಅದರ ಪ್ರಾದೇಶಿಕ ಮತ್ತು ಅಧ್ಯಯನ ಕೇಂದ್ರಗಳಲ್ಲಿ (study centre) ನಡೆಯುತ್ತಿವೆ. ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಲವಾರು ಅಕ್ರಮಗಳ ಬಗ್ಗೆ ಅಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುವ ಡಾ ಜಗದೀಶ ಬಾಬು (Dr Jagadish Babu) ಮುಕ್ತವಾಗಿ ಮಾತಾಡಿದ್ದಾರೆ. ಇಲ್ಲಿ ಕಾಣುತ್ತಿರುವ ವಿಡಿಯೋ ವಿವಿಯ ಬಳ್ಳಾರಿ ಪ್ರಾದೇಶಿಕ ಕೇಂದ್ರದ್ದು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮಾಸ್ ಕಾಪಿಯಿಂಗ್ ಪದಕ್ಕೆ ಇದ್ಕಕಿಂತ ಉತ್ತಮ ಉದಾಹರಣೆ ಸಿಗಲಾರದು. ಜಗದೀಶ ಬಾಬು, ಈ ವಿಡಿಯೋ ಅಲ್ಲಚೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿರುವ ವಿಧಾನ ಗಾಬರಿ ಮತ್ತು ಆತಂಕ ಮೂಡಿಸುತ್ತದೆ ಎಂದು ಅವರು ಹೇಳುತ್ತಾರೆ. ಅಧ್ಯಯನ ಮತ್ತು ಪ್ರಾದೇಶಿಕ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಮನಬಂದಂತೆ ಹಣ ಪೀಕಲಾಗುತ್ತಿದೆ, ಉಚಿತವಾಗಿ ಅಡ್ಮಿಶನ್ ಪಡೆಯಬೇಕಿದ್ದ ಅಂಧ ವಿದ್ಯಾರ್ಥಿಯೊಬ್ಬರಿಂದ ರೂ. 12,000 ಕಿತ್ತುಕೊಳ್ಳಲಾಗಿದೆ ಅಂತ ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ