ಡಿಕೆ ಬ್ರದರ್ಸ್ ‘ಬೃಹತ್’ ಆಪರೇಷನ್: ಸಾಮ್ರಾಟ್ ಅಶೋಕ್ ಕ್ಷೇತ್ರದಲ್ಲಿ ಮಾಜಿ ಕಾರ್ಪೊರೇಟರ್ಗಳಿಗೆ ‘ಕೈ’ ಗಾಳ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಡಿಕೆ ಬ್ರದರ್ಸ್ ಆಪರೇಷನ್ ಹಸ್ತದ ಮೂಲ ಪಕ್ಷ ಬಲಪಡಿಸಲು ಪ್ಲ್ಯಾನ್ ಮಾಡಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಮಾಜಿ ಕಾರ್ಪೊರೇಟರ್ಗಳನ್ನೇ ಟಾರ್ಗೆಟ್ ಮಾಡಲಾಗಿದೆ. 10ಕ್ಕೂ ಹೆಚ್ಚು ಬಿಜೆಪಿಯ ಮಾಜಿ ಕಾರ್ಪೊರೇಟರ್ಗಳನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆಯಲು ವೇದಿಕೆ ಸಜ್ಜಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 13): ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಷನ್ ಹಸ್ತ (Congress Operation Hastha) ಸದ್ದು ಮಾಡುತ್ತಿದೆ. ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದ ಆಪರೇಷನ್ ಮತ್ತೆ ಸುದ್ದಿಯಲ್ಲಿದೆ. ಆದ್ರೆ ಈ ಬಾರಿ ಒಂದು ಟ್ವಿಸ್ಟ್ ಇದೆ. ಇಷ್ಟು ದಿನ ದೊಡ್ಡ ತಿಮಿಂಗಿಲಗಳಿಗೆ ಗಾಳ ಹಾಕುತ್ತಿದ್ದ ಕೈ ಪಾಳಯ ಈ ಬಾರಿ ಬೆಂಗಳೂರು ಪಾಲಿಕೆ ವ್ಯಾಪ್ತಿಗೆ ಎಂಟ್ರಿ ಕೊಟ್ಟಿದೆ. ಬಿಜೆಪಿ ಮಾಜಿ ಕಾರ್ಪೊರೇಟರ್ಗಳ ಮೇಲೆ ಕಣ್ಣಿಟ್ಟಿರೋ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿಕೆ ಸುರೇಶ್ ಆರ್. ಅಶೋಕ್ (R Ashok) ಅಡ್ಡಾದಲ್ಲೇ ಆಪರೇಷನ್ಗಿಳಿದಿದ್ದಾರೆ.
ಬಿಜೆಪಿಯ 10ಕ್ಕೂ ಹೆಚ್ಚು ಮಾಜಿ ಕಾರ್ಪೊರೇಟರ್ಗಳ ಆಪರೇಷನ್ ಬಹುತೇಕ ಸಕ್ಸಸ್ ಆಗಿದ್ದು, ಮಾಜಿ ಕಾರ್ಪೊರೇಟರ್ಗಳು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತಾದ್ರೆ ಸೆಪ್ಟೆಂಬರ್ 15ರಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಕ್ಷೇತ್ರದಲ್ಲಿ ಅಶೋಕ್ ಗೆಲುವಿಗೆ ರೂವಾರಿಗಳಾಗಿದ್ದವರೇ ಆಪರೇಷನ್ಗೆ ತುತ್ತಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆ ವೇಳೆಯೇ ಆರ್. ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದ ಮೇಲೆ ಡಿಕೆ ಬ್ರದರ್ಸ್ ಒಂದು ಕಣ್ಣಿಟ್ಟಿದ್ದರು. ಇದೀಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆರ್. ಅಶೋಕ್ಗೆ ಕೋಟೆಯಂತಿರೋ ಮಾಜಿ ಕಾರ್ಪೊರೇಟರ್ಗಳನ್ನೇ ಟಾರ್ಗೆಟ್ ಮಾಡಿ ಆಪರೇಷನ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಸಿಎಂ ವಿರುದ್ಧ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಬಹಿರಂಗ ಟೀಕೆ; ಎಐಸಿಸಿಯಿಂದ ಶೋಕಾಸ್ ನೋಟಿಸ್
ಯಾರಿಗೆಲ್ಲಾ ಆಪರೇಷನ್?
ಬಿಜೆಪಿ ಮಾಜಿ ಪಾಲಿಕೆ ಸದಸ್ಯಎಲ್. ಶ್ರೀನಿವಾಸ್, ಬೊಮ್ಮನಹಳ್ಳಿ ವಾರ್ಡ್ ಮಾಜಿ ಸದಸ್ಯ ಆಂಜಿನಪ್ಪ, ಪದ್ಮನಾಭನಗರದ ಮಾಜಿ ಸದಸ್ಯೆ ಶೋಭಾ ಆಂಜಿನಪ್ಪ, ಗಣೇಶ ಮಂದಿರ ವಾರ್ಡ್ ಮಾಜಿ ಸದಸ್ಯ ಗೋವಿಂದ ರಾಜ್, ಮಾಜಿ ಬಿಬಿಎಂಪಿ ಸದಸ್ಯ ಹೆಚ್. ನಾರಾಯಣ್, ಚಿಕ್ಕಲಸಂದ್ರ ಪಾಲಿಕೆ ಮಾಜಿ ಸದಸ್ಯ ವೆಂಕಟಸ್ವಾಮಿ ನಾಯ್ಡು, ಕುಮಾರಸ್ವಾಮಿ ವಾರ್ಡ್ ಮಾಜಿ ಸದಸ್ಯರ ಹೆಚ್.ಸುರೇಶ್, ಚಿಕ್ಕಲಸಂದ್ರ ವಾರ್ಡ್ ಮಾಜಿ ಸದಸ್ಯೆ ಸುಪ್ರಿಯ ಶೇಖರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀ ಸುರೇಶ್, ಬಿಜೆಪಿ ಘಟಕ ಮಾಜಿ ಅಧ್ಯಕ್ಷ ರಂಗದಾಮೇಗೌಡ.. ಹೀಗೆ 10ಕ್ಕೂ ಹೆಚ್ಚು ಮಾಜಿ ಕಾರ್ಪೊರೇಟರ್ಗಳನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಡಿಕೆ ಬ್ರದರ್ಸ್ ಆಪರೇಷನ್ ಹಸ್ತದ ಮೂಲ ಪಕ್ಷ ಬಲಪಡಿಸಲು ಪ್ಲ್ಯಾನ್ ಮಾಡಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಮಾಜಿ ಕಾರ್ಪೊರೇಟರ್ಗಳನ್ನೇ ಟಾರ್ಗೆಟ್ ಮಾಡಲಾಗಿದೆ. 10ಕ್ಕೂ ಹೆಚ್ಚು ಬಿಜೆಪಿಯ ಮಾಜಿ ಕಾರ್ಪೊರೇಟರ್ಗಳನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆಯಲು ವೇದಿಕೆ ಸಜ್ಜಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ