ಹುಬ್ಬಳ್ಳಿ: ವಿಧಾನಪರಿಷತ್ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ನಿಂದ ನನಗೆ ಬುಲಾವ್ ಬಂದಿದೆ. ಹೈಕಮಾಂಡ್ನವರು ಏನು ಹೇಳುತ್ತಾರೋ ನೋಡೋಣ. ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ಸಭೆ ನಡೆಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಭಾನುವಾರ (ಫೆಬ್ರವರಿ 13) ಹೇಳಿಕೆ ನೀಡಿದ್ದಾರೆ. ನಮ್ಮ ಮುಖಂಡರ ಜತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಒಂದು ಕಡೆ ಬೈಯ್ಯುತ್ತಿದ್ದಾರೆ, ಮತ್ತೊಂದೆಡೆ ಹೊಗಳುತ್ತಿದ್ದಾರೆ. ವಿ.ಎಸ್. ಉಗ್ರಪ್ಪರಿಂದ ಭ್ರಷ್ಟಾಚಾರ ಆರೋಪ ಮಾಡಿಸುತ್ತಾರೆ. ವಕ್ಫ್ ಬೋರ್ಡ್ನಲ್ಲಿ ಭ್ರಷ್ಟಾಚಾರ ಮಾಡಿರುವುದಾಗಿ ಆರೋಪ ಮಾಡುತ್ತಾರೆ. ಮನೆ ಮುಂದೆ ಕಟ್ಟಿದ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ. ನಾನು ಏನೂ ಇಲ್ಲ ಅಂದ್ಮೇಲೆ ನಮ್ಮ ಪಾಡಿಗೆ ಬಿಟ್ಟುಬಿಡಬೇಕು ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಪರಿಷತ್ನಲ್ಲಿ ಮತಾಂತರ ನಿಷೇಧ ಬಿಲ್ ಮಂಡನೆ ಆಗಲಿದೆ. ನಾನು ರಾಜೀನಾಮೆ ಕೊಟ್ಟರೆ ಬಿಜೆಪಿಗೆ ಲಾಭವಾಗುತ್ತೆ. ಬಿಜೆಪಿಯವರಿಂದ ಹಣ ಪಡೆದಿದ್ದಾರೆಂದು ಆರೋಪ ಬರುತ್ತದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಬಗ್ಗೆ ನಿರ್ಧರಿಸುವೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ, ಕಾಂಗ್ರೆಸ್ ಪಕ್ಷ ತ್ಯಜಿಸುವ, ಮತ್ತೊಂದು ಪಕ್ಷ ಸೇರುವ ಬಗ್ಗೆ ನಿರ್ಧಾರ ತಿಳಿಸುವುದನ್ನು ತಾತ್ಕಾಲಿಕವಾಗಿ ಮುಂದೂಡಿದಂತಾಗಿದೆ.
ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಕಥೆ ಮುಗಿದಿದೆ: ಸಿಎಂ ಇಬ್ರಾಹಿಂ ಟೀಕೆ
ಇದಕ್ಕೂ ಮೊದಲು ದಾವಣಗೆರೆಯಲ್ಲಿ ಸಿ.ಎಂ. ಇಬ್ರಾಹಿಂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಕಥೆ ಮುಗಿದಿದೆ. ಅದನ್ನ ಸುಡಬೇಕೋ, ಹೂಳಬೇಕೋ ಎಂಬ ಪ್ರಶ್ನೆ ಇದೆ. ಬಿಜೆಪಿಯವರದ್ದು ಬಸವಕೃಪ ಅಂದರೆ ಹೂಳಬೇಕಾಗುತ್ತೆ. ಕೇಶವಕೃಪ ಅಂದರೆ ಸುಡಬೇಕಾದ ಸ್ಥಿತಿ ಇದೆ. ಸಿಎಂ ಬೊಮ್ಮಾಯಿ ಸರ್ಕಾರ ಪಂಕ್ಚರ್ ಆಗಿರುವ ಬಸ್. ಅದು ಯಾವಾಗ ಏನಾಗುತ್ತೆ ಎಂಬುದು ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು ಎಂದು ಹೇಳಿದ್ದರು.
ರಾಮಮಂದಿರ ಆಯಿತು, ಗೋಹತ್ಯೆ ನಿಷೇಧವಾಯಿತು. ಇದೀಗ ಬಿಜೆಪಿಯವರು ಹಿಜಾಬ್ ವಿವಾದ ಹಿಡಿದಿದ್ದಾರೆ. ಬಿಜೆಪಿಯವರಿಗೆ ಹಿಜಾಬ್ ಅಂದರೆ ಅರ್ಥವೇ ಗೊತ್ತಿಲ್ಲ. ವಿದ್ಯಾರ್ಥಿಗಳು ಹೆಗಲ ಮೇಲೆ ವೇಲ್ ಹಾಕಿಕೊಳ್ಳುತ್ತಾರೆ. ಅದೇ ವೇಲ್ ತಲೆ ಮೇಲೆ ಹಾಕಿಕೊಂಡರೆ ಏನು ತಪ್ಪು? ಎಂದು ದಾವಣಗೆರೆಯಲ್ಲಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಕಥೆ ಮುಗಿದಿದೆ; ಸಿಎಂ ಬೊಮ್ಮಾಯಿ ಸರ್ಕಾರ ಪಂಕ್ಚರ್ ಆಗಿರುವ ಬಸ್: ಸಿಎಂ ಇಬ್ರಾಹಿಂ ಟೀಕೆ
ಇದನ್ನೂ ಓದಿ: ಕರುನಾಡಿನ ಸಂಸ್ಕೃತಿ ಎತ್ತಿಹಿಡಿದಿದ್ದಾಳೆ: ಮುಸ್ಕಾನ್ ಧೈರ್ಯ, ದಾನಪ್ರಜ್ಞೆಗೆ ಸಿಎಂ ಇಬ್ರಾಹಿಂ ಶ್ಲಾಘನೆ
Published On - 5:38 pm, Sun, 13 February 22