ಬೆಂಗಳೂರು: ರಾಹುಲ್ ಗಾಂಧಿ ( Rahul Gandhi) ರಾಜ್ಯ ಪ್ರವಾಸ ವೇಳೆ ಕಾಣಿಸಿಕೊಳ್ಳದ ಶಾಸಕ ಜಮೀರ್ ಅಹ್ಮದ್, ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆತ್ಮೀಯರ ಬಳಿ ಅಸಮಾಧಾನ ಹೊರಹಾಕಿರುವ ಜಮೀರ್, ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಿದ್ದಾರೆ ಎಂದಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಜತೆ ಸಭೆಗೆ ಆಹ್ವಾನ ನೀಡದ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ನೇರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದರು. ಈ ಎಲ್ಲಾ ಲಕ್ಷಣಗಳನ್ನು ಗಮನಿಸಿದಾಗ ಜಮೀರ್ ಅಹ್ಮದ್ ಕಾಂಗ್ರೆಸ್ ಬಿಡುವ ಬಗ್ಗೆ ಅನುಮಾನ ಹೆಚ್ಚಾಗಿದೆ.
ಕಾಂಗ್ರೆಸ್ನಲ್ಲಿ ಪಕ್ಷಾಂತರ ಪರ್ವ ಆರಂಭ:
ಬಾಗಲಕೋಟೆ: ರಾಜ್ಯ ಕಾಂಗ್ರೆಸ್ನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಶುರುವಾಗಿದ್ದು, ಎಸ್ಆರ್ ಪಾಟೀಲ್ ಕಾಂಗ್ರೆಸ್ ತೊರೆಯುವ ಸಾಧ್ಯತೆಯಿದೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಎಸ್ಆರ್ ಪಾಟೀಲ್ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ರಾಜ್ಯದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೂ ಗೈರಾಗಿದ್ದರು.
ರಾಹುಲ್ ಗಾಂಧಿ ಕುಮಾರಕೃಪಾಗೆ ಭೇಟಿ ನೀಡಿದ್ದರು. ಪಾಟೀಲ್ ಇದಕ್ಕೂ ಮುನ್ನ ಕುಮಾರಕೃಪಾದಲ್ಲಿದ್ದರು. ಬಿಜೆಪಿ ನಾಯಕರ ಜತೆಯಿದ್ದರು. ಕಾರಜೋಳ ಜತೆ ಸುದೀರ್ಘ ಮಾತುಕತೆ ನಡೆಸಿದ ಮಾಹಿತಿಯಿದೆ. ಶೀಘ್ರವೇ ನಿರ್ಧಾರ ತಿಳಿಸುವುದಾಗಿ ಪಾಟೀಲ್ ಹೇಳಿದ್ದಾರೆ.
ರಾಜ್ಯ ನಾಯಕರ ಜೊತೆ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ತಿಳಿಸುವುದಾಗಿ ಕಾರಜೋಳ ಹೇಳಿದ್ದರು. ನಿವಾಸಕ್ಕೆ ಬಂದಿದ್ದ ಡಿಕೆ ಶಿವಕುಮಾರ್ಗೂ ಪಾಟೀಲ್ ಗರಂ ಆಗಿಯೇ ಮಾತನಾಡಿದ್ದರು. ಇನ್ನು ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಎಸ್ ಆರ್ ಪಾಟೀಲ್ ಪ್ರಮುಖ ಪಾತ್ರವಹಿಸಿದ್ದರು. ಬಳಿಕ ಪಕ್ಷದಲ್ಲೇ ಮೂಲೆಗುಂಪಾಗಿದ್ದಕ್ಕೆ ಬಗ್ಗೆ ಬೇಸರಗೊಂಡಿದ್ದಾರೆ. ಈ ಹಿನ್ನಲೆ ಪಕ್ಷ ಬಿಡುವ ನಿರ್ಧಾರ ಮಾಡಿರುವ ಬಗ್ಗೆ ಮಾಹಿತಿ ಇದೆ.
ಇದನ್ನೂ ಓದಿ
Shreyas Iyer: ಪಂದ್ಯ ಮುಗಿದ ಬಳಿಕ ಆಂಡ್ರೆ ರಸೆಲ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು ಗೊತ್ತೇ?
ಕರ್ನಾಟಕ ನಮ್ಮದು, ರಾಜ್ಯ ಒಡೆಯುವ ದ್ರೋಹಿಗಳದ್ದಲ್ಲ; ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ
Published On - 11:07 am, Sat, 2 April 22