ಅರವಿಂದ ಕೇಜ್ರಿವಾಲ್‌ಗೆ ಸಹಾನುಭೂತಿ ತೋರಿಸಬೇಡಿ: ಅಜಯ್ ಮಾಕೆನ್

|

Updated on: Apr 17, 2023 | 11:06 AM

ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕೇಜ್ರಿವಾಲ್ ಮತ್ತು ಅವರ ಸಹಚರರಂತಹ ವ್ಯಕ್ತಿಗಳಿಗೆ ಯಾವುದೇ ಸಹಾನುಭೂತಿ ಅಥವಾ ಬೆಂಬಲವನ್ನು ತೋರಿಸಬಾರದು ಎಂದು ನಾನು ನಂಬುತ್ತೇನೆ. ಲಿಕ್ಕರ್ ಗೇಟ್ ಮತ್ತು ಗೀ ಗೇಟ್ ಆರೋಪಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಮಾಕೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಅರವಿಂದ ಕೇಜ್ರಿವಾಲ್‌ಗೆ ಸಹಾನುಭೂತಿ ತೋರಿಸಬೇಡಿ: ಅಜಯ್ ಮಾಕೆನ್
ಅಜಯ್ ಮಾಕೆನ್
Follow us on

ದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ವಿಚಾರಣೆ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಬೆಂಬಲಿಸಬೇಡಿ ಮತ್ತು ಯಾವುದೇ ಸಹಾನುಭೂತಿ ತೋರಿಸಬೇಡಿ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ (Ajay Maken) ಪಕ್ಷಕ್ಕೆ ಹೇಳಿದ್ದಾರೆ. ಕೇಜ್ರಿವಾಲ್​​ಗೆ ಬೆಂಬಲ ನೀಡಿದರೆ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೀಡಾಗುತ್ತಾರೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದಿದ್ದಾರೆ ಮಾಕೆನ್. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಕೇಜ್ರಿವಾಲ್ ಅವರಿಗೆ ಕರೆ ಮಾಡಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿನ ಅಗತ್ಯವನ್ನು ಚರ್ಚಿಸಿದ ಒಂದು ದಿನದ ನಂತರ ಮಾಕೆನ್ ಈ ರೀತಿ ಹೇಳಿದ್ದಾರೆ. ಕಳೆದ ತಿಂಗಳು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಗೆ ಸಿಬಿಐ ಸಮನ್ಸ್ ನೀಡಿತ್ತು. ಈ ಹೊತ್ತಲ್ಲಿ ಕಾಂಗ್ರೆಸ್ ಮುಖ್ಯಸ್ಥರು ಕೇಜ್ರಿವಾಲ್‌ಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತದೆ.

ಕೇಜ್ರಿವಾಲ್ ಅವರ ಸಮಸ್ಯೆಗಳಿಂದ ಕಾಂಗ್ರೆಸ್ ಏಕೆ ದೂರವಿರಬೇಕು ಎಂಬುದರ ಕುರಿತು ಮಾಕೆನ್ ಅವರ ಸುದೀರ್ಘ ಹೇಳಿಕೆಯು ಪ್ರತಿಪಕ್ಷಗಳ ಒಗ್ಗಟ್ಟಿನ ಕರೆ ನಡುವೆ ವಿಷಯಗಳನ್ನು ಸಂಕೀರ್ಣಗೊಳಿಸುವ ಸಾಧ್ಯತೆಯಿದೆ.


ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕೇಜ್ರಿವಾಲ್ ಮತ್ತು ಅವರ ಸಹಚರರಂತಹ ವ್ಯಕ್ತಿಗಳಿಗೆ ಯಾವುದೇ ಸಹಾನುಭೂತಿ ಅಥವಾ ಬೆಂಬಲವನ್ನು ತೋರಿಸಬಾರದು ಎಂದು ನಾನು ನಂಬುತ್ತೇನೆ. ಲಿಕ್ಕರ್ ಗೇಟ್ ಮತ್ತು ಗೀ ಗೇಟ್ ಆರೋಪಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಮಾಕೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್ ಸುಕೇಶ್ ಚಂದ್ರಶೇಖರ್ ರಾಜಕಾರಣಿಗಳು ಮತ್ತು ಮಧ್ಯವರ್ತಿಗಳೊಂದಿಗಿನ ಸಂವಹನದಲ್ಲಿ ₹ 15 ಕೋಟಿ ನಗದು ಎಂಬುದನ್ನು 15 ಗ್ರಾಂ ತುಪ್ಪ ಎಂಬ ಕೋಡ್ ವರ್ಡ್ ಬಳಸಿ ಸಂವಹನ ನಡೆಸಿದ್ದ ಸಂದೇಶದ ಸ್ಕ್ರೀನ್ ಶಾಟ್ ವೈರಲ್ ಆಗಿತ್ತು.

ಕೇಜ್ರಿವಾಲ್ ಅವರು ಭ್ರಷ್ಟ ಮಾರ್ಗಗಳ ಮೂಲಕ ಗಳಿಸಿದ ಹಣವನ್ನು ಪಂಜಾಬ್, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಳಸಲಾಗಿದೆ ಎಂಬುದನ್ನು ಕಾಂಗ್ರೆಸ್ (ಐಎನ್‌ಸಿ) ಸೇರಿದಂತೆ ಎಲ್ಲಾ ರಾಜಕೀಯ ನಾಯಕರು ಗುರುತಿಸುವುದು ಮುಖ್ಯವಾಗಿದೆ ಎಂದಿದ್ದಾರೆ ಮಾಕೆನ್.

ಇದನ್ನೂ ಓದಿ: ನಂದಿನಿ ಬೆಸ್ಟ್ ಎಂದ ರಾಹುಲ್ ಗಾಂಧಿ; ಕೇರಳದಲ್ಲಿ ಇದರ ಮಾರಾಟ ಸುಗಮವಾಗುವಂತೆ ಮಾಡಿ ಎಂದ ತೇಜಸ್ವಿ ಸೂರ್ಯ

2015 ರಲ್ಲಿ ಮಾಕೆನ್ ಕಾಂಗ್ರೆಸ್ ಮುಖ್ಯಸ್ಥರಾಗಿದ್ದಾಗ ಆ ವರ್ಷದ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ವಿರುದ್ಧ ಪಕ್ಷ ಸೋಲು ಅನುಭವಿಸಿತ್ತು. ಮೂರು ಅವಧಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆ ವರ್ಷ ದೆಹಲಿಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲಿಲ್ಲ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Mon, 17 April 23