ನಂದಿನಿ ಬೆಸ್ಟ್ ಎಂದ ರಾಹುಲ್ ಗಾಂಧಿ; ಕೇರಳದಲ್ಲಿ ಇದರ ಮಾರಾಟ ಸುಗಮವಾಗುವಂತೆ ಮಾಡಿ ಎಂದ ತೇಜಸ್ವಿ ಸೂರ್ಯ
ರಾಹುಲ್ ಗಾಂಧಿಯವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇರಳದಲ್ಲಿ ನಂದಿನಿಯ ಸುಗಮ ಮಾರಾಟದಲ್ಲಿ ಮಧ್ಯಪ್ರವೇಶಿಸಬೇಕು ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ.
ನಂದಿನಿ vs ಅಮುಲ್ ಬ್ರ್ಯಾಂಡ್ (Amul) ವಿವಾದದ ನಡುವೆ, ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾನುವಾರ ಬೆಂಗಳೂರಿನ ಅಂಗಡಿಯೊಂದರಿಂದ ನಂದಿನಿ(Nandini) ಐಸ್ ಕ್ರೀಮ್ ಖರೀದಿಸಿ ಇದು ಕರ್ನಾಟಕದ ಹೆಮ್ಮೆ ಎಂದಿದ್ದಾರೆ. ಕರ್ನಾಟಕ ಹಾಲು ಒಕ್ಕೂಟದ ಪ್ರಮುಖ ಬ್ರ್ಯಾಂಡ್ ನಂದಿನಿಯನ್ನು ರಾಹುಲ್ ಗಾಂಧಿ ಬೆಸ್ಟ್ ಎಂದಿದ್ದಾರೆ. ಅಮುಲ್- ನಂದಿನಿ ವಿವಾದದಲ್ಲಿ ಸ್ಥಳೀಯ ಡೈರಿ ಬ್ರ್ಯಾಂಡ್ ನಂದಿನಿ ಪರ ರಾಜ್ಯ ಪಕ್ಷದ ನಾಯಕರು ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ ರಾಹುಲ್ ಈ ರೀತಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇದ್ದರು. ಫೋಟೊವೊಂದನ್ನು ಟ್ವೀಟ್ ಮಾಡಿದ ರಾಹುಲ್ Karnataka’s Pride – NANDINI is the best ಎಂದಿದ್ದಾರೆ
ರಾಹುಲ್ ಗಾಂಧಿಯವರ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಕೇರಳದಲ್ಲಿ ನಂದಿನಿಯ ಸುಗಮ ಮಾರಾಟದಲ್ಲಿ ಮಧ್ಯಪ್ರವೇಶಿಸಬೇಕು ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ.
Glad that Rahul Gandhi thinks Nandini is the best. There is no doubt about it.
I request him to intervene in Kerala for smooth sale of Nandini. If not, this will be yet another gimmick.
Waiting for Rahul Gandhi to make a public announcement in Kerala for free access to Nandini. https://t.co/x5X6VCLNuz
— Tejasvi Surya (@Tejasvi_Surya) April 16, 2023
ಅಮುಲ್ ತನ್ನ ಹಾಲಿನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ವಿತರಿಸುವ ಯೋಜನೆಯನ್ನು ಘೋಷಿಸಿದಾಗ ಕರ್ನಾಟಕದಲ್ಲಿ ಅಮುಲ್‌ಗೆ ಪ್ರವೇಶ ನೀಡುವ ಮೂಲಕ ಬಿಜೆಪಿಯು ನಂದಿನಿಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ವಿರೋಧ ಪಕ್ಷಗಳು ಆರೋಪಿಸಿವೆ.
ಇದನ್ನೂ ಓದಿ: ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಸಮಾರಂಭ ನೋಡಲು ಬಂದಿದ್ದ 11 ಮಂದಿ ಬಿಸಿಲಿನ ತಾಪಕ್ಕೆ ಬಲಿ
ಹೆಚ್ಚುವರಿಯಾಗಿ, ಅಮುಲ್‌ನ ಪ್ರಾಬಲ್ಯಕ್ಕೆ ದಾರಿ ಮಾಡಿಕೊಡಲು ನಂದಿನಿ ವಸ್ತುಗಳ ಕೊರತೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಅಮುಲ್ ನಂದಿನಿಗೆ ಅಪಾಯವನ್ನುಂಟು ಮಾಡುತ್ತದೆ ಎಂಬ ಆರೋಪಗಳನ್ನು ತಳ್ಳಿಹಾಕಿತು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:54 am, Mon, 17 April 23