Nandini-Amul Row; ನಂದಿನಿ ಹಾಲಿಗೆ ರಾಯಭಾರಿಗಳಾಗಿದ್ದ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರನ್ನು ಸರ್ಕಾರ ಅವಮಾನಿಸುತ್ತಿದೆ: ಡಿಕೆ ಶಿವಕುಮಾರ್
ಬಸವರಾಜ ಬೊಮ್ಮಾಯಿ ಮತ್ತು ಅವರ ಸರ್ಕಾರ ಅಮುಲ್ ಸಂಸ್ಥೆಗೆ ಮಣೆ ಹಾಕುವ ಮೂಲಕ ಕನ್ನಡ ನಾಡಿಗೆ ಅಪಾರ ಸೇವೆ ಸಲ್ಲಿಸಿದ ರಾಜ್ ಕುಟುಂಬವನ್ನು ಅವಮಾನಿಸುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಹಾಸನ: ಕರ್ನಾಟಕದಲ್ಲಿ ಅಮುಲ್ ಹಾಲು ಹಾರಾಟಕ್ಕೆ ತೀವ್ರ ವೀರೋಧ ವ್ಯಕ್ತವಾಗುತ್ತಿದೆ. ನಗರದಲ್ಲಿಂದು ನಂದಿನಿ ಹಾಲು ಮತ್ತು ನಂದಿನಿಯ ಇತರ ಉತ್ಪನ್ನಗಳನ್ನು ಖರೀದಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನಂದಿನಿ ಹಾಲು ಮತ್ತು ನಂದಿನಿ ಸಂಸ್ಥೆಯ ಎಲ್ಲ ಉತ್ಪನ್ನಗಳಿಗೆ ಕನ್ನಡದ ಕಣ್ಮಣಿಗಳಾಗಿರುವ ಡಾ ರಾಜ್ ಕುಮಾರ್ (Dr Rajkumar) ಮತ್ತು ಪುನೀತ್ ರಾಜಕುಮಾರ್ (Puneeth Rajkumar) ರಾಯಭಾರಿಗಳಾಗಿದ್ದಾರೆ. ವೇದಿಕೆಗಳ ಮೇಲೆ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಾದರಗಳನ್ನು ಸಲ್ಲಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಅವರ ಸರ್ಕಾರ ಅಮುಲ್ ಸಂಸ್ಥೆಗೆ ಮಣೆ ಹಾಕುವ ಮೂಲಕ ಕನ್ನಡ ನಾಡಿಗೆ ಅಪಾರ ಸೇವೆ ಸಲ್ಲಿಸಿದ ರಾಜ್ ಕುಟುಂಬವನ್ನು ಅವಮಾನಿಸುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ