ರಾಮನಗರ: ಭಾರತ್ ಜೋಡೋ ಯಾತ್ರೆಗೆ 1 ವರ್ಷ; ನೆನಪಿಗಾಗಿ ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಜರುಗಿದ ಪಾದಯಾತ್ರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 07, 2023 | 9:21 PM

‘ನಾನು ರಾಜಕಾರಣ ಮಾಡಲು ಬಂದಿಲ್ಲ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಲವರು ಬಂದು ನನ್ನ ಜೊತೆಗೆ ಭೇಟಿ ಮಾಡಿದ್ದೀರಿ. ರಾಮನಗರದಲ್ಲೂ ಆಸ್ಪತ್ರೆ ಇರುತ್ತದೆ. ಕನಕಪುರದಲ್ಲೂ ಆಸ್ಪತ್ರೆ ಇರುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ರಾಮನಗರ: ಭಾರತ್ ಜೋಡೋ ಯಾತ್ರೆಗೆ 1 ವರ್ಷ; ನೆನಪಿಗಾಗಿ ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಜರುಗಿದ ಪಾದಯಾತ್ರೆ
ಸಿದ್ದರಾಮಯ್ಯ
Follow us on

ರಾಮನಗರ, ಸೆ.07: ಭಾರತ್ ಜೋಡೋ ಯಾತ್ರೆ(Bharat Jodo Yatra)ಗೆ ವರ್ಷ ತುಂಬಿದ ಹಿನ್ನೆಲೆ ಇಂದು ರಾಮನಗರ (Ramanagara) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್​ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ರಾಮನಗರದಲ್ಲಿ ನಡೆದ ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಅವರು ಭಾಗಿಯಾಗಿದ್ದು, ಅವರು ಬರುತ್ತಿದ್ದಂತೆ ಕ್ರೇನ್​ ಮೂಲಕ ಬೃಹತ್ ರೇಷ್ಮೆ ಹಾಗೂ ಸೇಬಿನ ಹಾರವನ್ನು ಸ್ಥಳೀಯ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಕಿದರು.

ಬರೋಬ್ಬರಿ ನಾಲ್ಕು ಕಿ.ಮೀ ಪಾದಯಾತ್ರೆ ನಡೆಸಿದ ಕಾಂಗ್ರೆಸ್​ ನಾಯಕರು

ಇನ್ನು ಹಾರ ಹಾಕಿಸಿಕೊಂಡ ಬಳಿಕ ರಾಮನಗರ ಡಿಸಿ ಕಚೇರಿಯಿಂದ ಐಜೂರು ವೃತ್ತದವರೆಗೆ ಪಾದಯಾತ್ರೆ ಬರೋಬ್ಬರಿ 4 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಮಾರ್ಗ ಮಧ್ಯೆ ಕಾರ್ಯಕರ್ತರು ಹೂವಿನ ಮಳೆ ಸುರಿಸಿ ಸ್ವಾಗತ ಕೋರಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಸೇರಿದಂತೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್​ ಉಪಸ್ಥಿತರಿದ್ದರು.

ಇದನ್ನೂ ಓದಿ:ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ, ಕಾಂಗ್ರೆಸ್ ನಾಯಕರಿಂದ ರಾಮನಗರದಲ್ಲಿ ಪಾದಯಾತ್ರೆ

ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ‘ನಾನು ರಾಜಕಾರಣ ಮಾಡಲು ಬಂದಿಲ್ಲ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಲವರು ಬಂದು ನನ್ನ ಜೊತೆಗೆ ಭೇಟಿ ಮಾಡಿದ್ದೀರಿ. ಏನೋ ರಾಮನಗರ ಸ್ಟ್ರೈಕ್ ಅಂತೆ, ಬಂದ್ ಅಂತೆ. ಬಂದ್ ಮಾಡಿ ಯಾರು ಬೇಡ ಅಂತಾರೆ, ಮೆಡಿಕಲ್ ಯುನಿವರ್ಸಿಟಿ ಆಗಬೇಕು ಅಂತ ಹೇಳಿದ್ರು ಯಾಕೆ ಮಾಡಲಿಲ್ಲ. ಕುಮಾರಸ್ವಾಮಿನಾ ಸಮ್ಮಿಶ್ರ ಸರ್ಕಾರದಲ್ಲಿ ಕನಕಪುರದಲ್ಲಿ ಆಸ್ಪತ್ರೆ ಬಜೆಟ್ ನಲ್ಲಿ ಮಾಡಿರಲಿಲ್ವಾ ಎಂದರು.

‘ರಾಮನಗರದಲ್ಲೂ ಆಸ್ಪತ್ರೆ ಇರುತ್ತದೆ. ಕನಕಪುರದಲ್ಲೂ ಆಸ್ಪತ್ರೆ ಇರುತ್ತದೆ. ಯಾರು ಎಷ್ಟೇ ಸ್ಟ್ರೈಕ್ ಮಾಡಲಿ, ನಾನೇ ತಮಟೆ ನಗಾರಿ ಕಳಿಸಿಕೊಡ್ತೀನಿ. ಮೊದಲು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಅವರು ಬದುಕು ನೋಡಿಕೊಳ್ಳಲಿ. ರಾಮನಗರ ಟೌನ್ ಬದಲಾವಣೆ ಮಾಡುವುದು ಹೊಸ ರೂಪ ಕೊಡುವ ಕೆಲಸ ನಾವು ಮಾಡ್ತೇವೆ. ಚನ್ನಪಟ್ಟಣ ಕೂಡ ನಮ್ಮದೇ, ಅಲ್ಲಿನ ಜನರೂ ನಮ್ಮವರೇ. ಅಲ್ಲಿಯ ನಾಯಕರು ಯಾಕೆ ವಯಸ್ಸು ಕಳೆದುಕೊಳ್ತೀರಿ. ರೆಡಿಮೇಡ್ ಗಂಡುಗಳ ತರಹ ನಾವು ಐದು ಜನರಿದ್ದೇವೆ. ಯಾಕೆ ಚನ್ನಪಟ್ಟಣ ಮುಖಂಡರು ಯಾಕೆ ವಯಸ್ಸು ಹಾಳು ಮಾಡಿಕೊಳ್ತೀರಿ. ನಿಮಗೆ ಸಹಾಯ ಮಾಡುವುದಕ್ಕೆ ನಾವು ಸಿದ್ದರಿದ್ದೇವೆ ಎಂದು ಹೇಳಿದರು.

ಪೊಲೀಸ್​ ಭದ್ರತೆಯಲ್ಲಿ ವಿವಿಧ ಕಲಾ ತಂಡದಿಂದ ಪ್ರದರ್ಶನ

ಬೃಹತ್ ಸೇಬಿನಹಾರ, ರೇಷ್ಮೇಹಾರ ಹಾಕಿದ ಬಳಿಕ ರಾಮನಗರ ಎಸ್​​ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ನಂತರ ಪಾದಯಾತ್ರೆ ವೇಳೆ ಗಜ್ಜೆ ಕುಣಿತ, ಕಂಸಾಳೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡದಿಂದ ರಸ್ತೆಯುದ್ದಕ್ಕೂ ಪ್ರದರ್ಶನ ನೀಡಲಾಯಿತು.

ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಗೆ 1 ವರ್ಷ, ಯಾತ್ರೆ ನೆನಪಿಗಾಗಿ ರಾಮನಗರದಲ್ಲಿಂದು ಸಿಎಂ-ಡಿಸಿಎಂ ಪಾದಯಾತ್ರೆ

ಪಾದಯಾತ್ರೆ ಸಾಗುವ ವೇಳೆ ಸಿಎಂ, ಡಿಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಇನ್ನು ಪಾದಯಾತ್ರೆ ಸಾಗುವ ವೇಳೆ ಸಿಎಂ, ಡಿಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರ ವಶಕ್ಕೆ ಪಡೆದು ಕರೆದೊಯ್ದರು. ಬಳಿಕ ರಾಮನಗರದ ಐಜೂರು ವೃತ್ತದಲ್ಲಿ ವರ್ಷಾಚರಣೆ ಪಾದಯಾತ್ರೆ ಅಂತ್ಯ ಮಾಡಲಾಯಿತು. ನಂತರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಯಾದಗಿರಿಯಲ್ಲಿ ಕಾಂಗ್ರೆಸ್​ನಿಂದ ಒಂದು ವರ್ಷದ ಸಂಭ್ರಮಾಚರಣೆ

ಯಾದಗಿರಿ: ನಗರದಲ್ಲಿ ಕಾಂಗ್ರೆಸ್​ನಿಂದ ಭಾರತ ಜೋಡೋ ಯಾತ್ರೆಗೆ ಒಂದು ವರ್ಷ ಹಿನ್ನಲೆ ಸಂಭ್ರಮಾಚರಣೆ ಮನೆ ಮಾಡಿತ್ತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಗಾಂಧಿ ವೃತ್ತದ ವರೆಗೆ ಪಾದಯಾತ್ರೆ ನಡೆಸಿ ಸಂಭ್ರಮಿಸಿದರು. ಯಾದಗಿರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ‌ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಪಾದಯಾತ್ರೆಯಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಕಾರ್ಯಕರ್ತರು ಭಾಗಿಯಾಗಿ ಬಳಿಕ ಗಾಂಧಿ ವೃತ್ತದಲ್ಲಿ ಯಾತ್ರೆಯನ್ನು ಅಂತ್ಯಗೊಳಿಸಲಾಯಿತು.

ಇದನ್ನೂ ಓದಿ:ಭಾರತ್ ಜೊಡೋ ಯಾತ್ರೆ ನೆನಪಿನಲ್ಲಿ ಸೆ 7ರಂದು ಪಾದಯಾತ್ರೆ ಮಾಡಲಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್​

ಸಚಿವ ಕೆ.ಹೆಚ್.ಮುನಿಯಪ್ಪ ನೇತೃತ್ವದಲ್ಲಿ ದೇವನಹಳ್ಳಿಯಲ್ಲಿ ಕಾಂಗ್ರೆಸ್‌ನಿಂದ ಮೆರವಣಿಗೆ

ಬೆಂಗಳೂರು ಗ್ರಾಮಾಂತರ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ವರ್ಷ ತುಂಬಿದ ಹಿನ್ನೆಲೆ ಜಿಲ್ಲೆಯ ದೇವನಹಳ್ಳಿಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ದೇವನಹಳ್ಳಿ ಪಟ್ಟಣದ ಐಬಿ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಇನ್ನು ಇದೇ ವೇಳೆ ಸಚಿವರ ಭಾಷಣಕ್ಕೆ ಮಳೆ ಅಡ್ಡಿ ಪಡಿಸಿದ್ದು, ಕೆ.ಹೆಚ್.ಮುನಿಯಪ್ಪ ಭಾಷಣ ಮೊಟಕುಗೊಳಿಸಿ ತೆರಳಿದರು. ಇನ್ನು ತುಮಕೂರಿನಲ್ಲೂ ಶಾಸಕ ಜಯಚಂದ್ರ ಸೇರಿದಂತೆ ಕಾರ್ಯಕರ್ತರು ಸೇರಿ ಬಿಎಚ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ