ಭಾರತ್ ಜೋಡೋ ಯಾತ್ರೆಗೆ 1 ವರ್ಷ, ಯಾತ್ರೆ ನೆನಪಿಗಾಗಿ ರಾಮನಗರದಲ್ಲಿಂದು ಸಿಎಂ-ಡಿಸಿಎಂ ಪಾದಯಾತ್ರೆ

Bharat Jodo Yatra: ಇಂದು ಭಾರತ್ ಜೋಡೋ ಯಾತ್ರೆ ನಡೆದು 1 ವರ್ಷ ಹಿನ್ನೆಲೆ ಭಾರತ್ ಜೋಡೋ ಯಾತ್ರೆ ನೆನಪಿಗಾಗಿ ರಾಮನಗರದಲ್ಲಿಂದು ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​​, ಸಚಿವರು, ಹಲವು ಶಾಸಕರು, ಕಾಂಗ್ರೆಸ್​​ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸಂಜೆ 5ಗಂಟೆಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯಿಂದ ಜಾಥಾ ಆರಂಭವಾಗಲಿದೆ.

ಭಾರತ್ ಜೋಡೋ ಯಾತ್ರೆಗೆ 1 ವರ್ಷ, ಯಾತ್ರೆ ನೆನಪಿಗಾಗಿ ರಾಮನಗರದಲ್ಲಿಂದು ಸಿಎಂ-ಡಿಸಿಎಂ ಪಾದಯಾತ್ರೆ
ಭಾರತ್ ಜೋಡೋ ಯಾತ್ರೆ(ಸಂಗ್ರಹ ಚಿತ್ರ)
Follow us
| Updated By: ಆಯೇಷಾ ಬಾನು

Updated on: Sep 07, 2023 | 7:02 AM

ರಾಮನಗರ, ಸೆ.07: ರಾಜೀವ್‌ಗಾಂಧಿ ಆರೋಗ್ಯ ವಿವಿಯಿಂದ ಮೆಡಿಕಲ್ ಕಾಲೇಜು ಕನಕಪುರಕ್ಕೆ ವರ್ಗಾವಣೆ ವಿಚಾರದ ನಡುವೆ ರಾಮನಗರದಲ್ಲಿ ಕಾಂಗ್ರೆಸ್ ಅದ್ದೂರಿ ಕಾರ್ಯಕ್ರಮ ಇಟ್ಟುಕೊಂಡಿದೆ. ಭಾರತ್ ಜೋಡೋ ಯಾತ್ರೆಗೆ(Bharat Jodo Yatra) ಒಂದು ವರ್ಷ ತುಂಬಿದ ಹಿನ್ನೆಲೆ, ಅದರ ಸ್ಮರಣಾರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಸೇರಿದಂತೆ ಸಚಿವ ಸಂಪುಟದ ಹಲವು‌ ಸಚಿವರು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಮಾಡಿ ಇಡೀ ದೇಶದಲ್ಲಿ ಸಂಚಲನ ಉಂಟು ಮಾಡಿದ್ದ ಕಾಂಗ್ರೆಸ್ ರಾಮನಗರದಲ್ಲಿ ಇಂದು ಯಾತ್ರೆಯ ಸ್ಮರಣಾರ್ಥವಾಗಿ ಪಾದಯಾತ್ರೆ ಮಾಡಲು ಹೊರಟಿದೆ.

ರಾಮನಗರ ಪಟ್ಟಣದ ಜಿಲ್ಲಾ ಕಚೇರಿಯಿಂದ ಐಜೂರು ಸರ್ಕಲ್ ವರೆಗೂ ಪಾದಯಾತ್ರೆ ನಡೆಯಲಿದ್ದು, ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಮನಗರ ಉಸ್ತುವಾರಿ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದಾರೆ.‌ ಜಿಲ್ಲೆಯ ಹಲವು ಕಡೆಗಳಿಂದ ಕೈ ಕಾರ್ಯಕರ್ತರು ಆಗಮಿಸಲಿದ್ದು ಸಂಜೆ 5 ಗಂಟೆಗೆ ಪಾದಯಾತ್ರೆ ಶುರುವಾಗಲಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಭಾರತ್ ಜೊಡೊ ಯಾತ್ರೆ ಕರ್ನಾಟಕದಲ್ಲಿ ಅಭೂತ ಪೂರ್ವ ಸಕ್ಸಸ್ ಸಿಕ್ಕ ನಂತರ ಕಾಂಗ್ರೆಸ್ ಯಾತ್ರೆಯ ಇನ್ನಷ್ಟು ಮೈಲೇಜ್ ಪಡೆದುಕೊಳ್ಳೋದಕ್ಕೆ ಮುಂದಾಗಿದೆ. ಇಂದು ರಾಮನಗರ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡುವ ಮುಖಾಂತರ ಹಳೇ ಮೈಸೂರು ಭಾಗದಲ್ಲಿ ಲೋಕಸಭೆ ಚುನಾವಣೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪಕ್ಕಾ ಪ್ಲ್ಯಾನ್ ಮಾಡಿದೆ. ಹೀಗಾಗಿ ಇಂದು ಸಂಜೆ ರಾಮನಗರಕ್ಕೆ ಬರಲಿರುವ ಸಿಎಂ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಕಚೇರಿಯಿಂದ ಮೂರೂವರೆ ಕಿಮಿ ನಡೆದು ಐಜೂರು ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮುಖಾಂತರ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಾಂಚಜನ್ಯ ಊದಲು ಸರ್ವತಯಾರಿ ಮಾಡಿಕೊಂಡಿದೆ.

ಇದನ್ನೂ ಓದಿ: Rahul Gandhi US Tour: ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಸರ್ಕಾರ ಪ್ರಯತ್ನಿಸಿತ್ತು: ರಾಹುಲ್ ಗಾಂಧಿ

ಇನ್ನು ಈ ಕಾರ್ಯಕ್ರಮದಲ್ಲಿ 20 ಸಾವಿರ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಕಾಂಗ್ರೆಸ್​ನಿಂದ 224 ಕ್ಷೇತ್ರಗಳಲ್ಲೂ ಕಾರ್ಯಕ್ರಮ ನಡೆಯಲಿದ್ದು ಸಚಿವ ಸಂಪುಟ ಸಭೆ ಇರುವ ಹಿನ್ನೆಲೆ ನಾಳೆ(ಸೆ.08) ಇತರೆ ಜಿಲ್ಲೆಗಳಲ್ಲಿ ಜಾಥಾ ನಡೆಯಲಿದೆ. ಸಂಜೆ 5ರಿಂದ 7 ಗಂಟೆವರೆಗೂ ಕಾರ್ಯಕ್ರಮ ನಡೆಯಲಿದ್ದು ನಾವೆಲ್ಲಾ ಒಂದಾಗಿದ್ದೇವೆಂಬ ಸಂದೇಶ ರವಾನಿಸಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ