ಪಟನಾ: ಗಾಂಧಿ ಜಯಂತಿ (Gandhi Jayanti) ಪ್ರಯುಕ್ತ ಇಂದು (ಭಾನುವಾರ) ಬಿಹಾರದಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) 3,500ಕಿಮೀ ಪಾದಯಾತ್ರೆಯಾದ ಜನ್ ಸುರಾಜ್ (jan suraj) ಪಾದಯಾತ್ರೆ ಆರಂಭಿಸಿದ್ದಾರೆ. ದೇಶದಲ್ಲಿರುವ ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾದ ಬಿಹಾರದಲ್ಲಿ ವ್ಯವಸ್ಥೆಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಸಮಾಜದ ನೆರವಿನೊಂದಿಗೆ ಹೊಸ ಮತ್ತು ಉತ್ತಮ ರಾಜಕೀಯ ವ್ಯವಸ್ಥೆಯನ್ನು ರಚಿಸಲು ಮುಂದಿನ 12-15 ತಿಂಗಳುಗಳಲ್ಲಿ ರಾಜ್ಯದ ನಗರಗಳು, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ 3500 ಕಿಮೀ ಪಾದಯಾತ್ರೆ ಮೊದಲ ಪ್ರಮುಖ ಹೆಜ್ಜೆಯಾಗಿದೆ ಎಂದು ಕಿಶೋರ್ ಪಾದಯಾತ್ರೆ ಪ್ರಾರಂಭವಾಗುವ ಮೊದಲು ಟ್ವೀಟ್ ಮಾಡಿದ್ದಾರೆ. 1917 ರಲ್ಲಿ ಗಾಂಧಿಯವರು ತಮ್ಮ ಮೊದಲ ಸತ್ಯಾಗ್ರಹ ಚಳುವಳಿಯನ್ನು ಆರಂಭಿಸಿದ ಪಶ್ಚಿಮ ಚಂಪಾರಣ್‌ನ ಭಿತಿಹರ್ವಾದಲ್ಲಿರುವ ಗಾಂಧಿ ಆಶ್ರಮದಿಂದ ಕಿಶೋರ್ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಕಿಶೋರ್ ಮತ್ತು ಅವರ ಅನುಯಾಯಿಗಳು ಯಾತ್ರೆಯನ್ನು ಪ್ರಾರಂಭಿಸಿದಾಗ ರಸ್ತೆಯಲ್ಲಿ ಜನರು ಅವರನ್ನು ಸ್ವಾಗತಿಸಿದರು. ಪ್ರಶಾಂತ್ ಕಿಶೋರ್ ಅವರು ರಾಜಕೀಯ ಪ್ರವೇಶಕ್ಕೆ ಪಾದಯಾತ್ರೆಯನ್ನು ಪೂರ್ವಭಾವಿಯಾಗಿ ನೋಡಲಾಗುತ್ತಿದೆ. ಆದರೆ ಅಂತಹ ಯಾವುದೇ ನಿರ್ಧಾರವನ್ನು ಪ್ರಚಾರದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡವರು ಮಾತ್ರ ತೆಗೆದುಕೊಳ್ಳಬಹುದು ಎಂದು ರಾಜಕೀಯ ತಂತ್ರಜ್ಞ ಹೇಳಿದ್ದಾರೆ. ಇತ್ತ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಜನಪ್ರಿಯ ಆಗುತ್ತಿರುವ ಹೊತ್ತಲ್ಲೇ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಾದಯಾತ್ರೆ ಆರಂಭವಾಗಿದೆ.
.@PrashantKishor’s “Jan Suraj Padyatra” begins its 3,500 kms long walk from Bhitiharwah, Mahatma Gandhi’s ashram in West Champaran. Yatra to travel through every block in Bihar over 12 months. @jansuraajonline pic.twitter.com/0tlstRHtBI
— Shivam Vij (@DilliDurAst) October 2, 2022
ಶನಿವಾರದ ಹೇಳಿಕೆಯ ಪ್ರಕಾರ, ಕಿಶೋರ್ ಅವರ ಪಾದಯಾತ್ರೆಯು ಮೂರು ಪ್ರಮುಖ ಗುರಿಗಳನ್ನು ಹೊಂದಿದೆ. ತಳಮಟ್ಟದಲ್ಲಿ ಸರಿಯಾದ ಜನರನ್ನು ಗುರುತಿಸುವುದು ಮತ್ತು ಅವರನ್ನು ಪ್ರಜಾಪ್ರಭುತ್ವದ ವೇದಿಕೆಯ ಮೇಲೆ ತರುವುದೂ ಕೂಡಾ ಇದರಲ್ಲಿ ಸೇರಿದೆ.
ಯಾತ್ರೆಯು ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯಗಳನ್ನು ಸೇರಿಸುವ ಮೂಲಕ ಬಿಹಾರಕ್ಕೆ ವಿಷನ್ ಡಾಕ್ಯುಮೆಂಟ್ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.