ನಾವು ಕ್ರೆಡಿಟ್ ವಾರ್ ಹಿಂದೆ ಬಿದ್ದಿಲ್ಲ: ಕಾಂಗ್ರೆಸ್ ನಾಯಕರಿಗೆ ಟಾಂಗ್​ ಕೊಟ್ಟ ಪ್ರಲ್ಹಾದ ಜೋಶಿ

|

Updated on: Mar 11, 2023 | 8:33 PM

ನಾವು ಕ್ರೆಡಿಟ್ ವಾರ್ ಹಿಂದೆ ಬಿದ್ದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ​ ಜೋಶಿ ವಾಗ್ದಾಳಿ ಮಾಡಿದ್ದಾರೆ.

ನಾವು ಕ್ರೆಡಿಟ್ ವಾರ್ ಹಿಂದೆ ಬಿದ್ದಿಲ್ಲ: ಕಾಂಗ್ರೆಸ್ ನಾಯಕರಿಗೆ ಟಾಂಗ್​ ಕೊಟ್ಟ ಪ್ರಲ್ಹಾದ ಜೋಶಿ
ಸಚಿವ ಪ್ರಹ್ಲಾದ್ ಜೋಶಿ
Image Credit source: indianexpress.com
Follow us on

ಧಾರವಾಡ: ನಾವು ಕ್ರೆಡಿಟ್ ವಾರ್ (credit war) ಹಿಂದೆ ಬಿದ್ದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಹೊರವಲಯದಲ್ಲಿರುವ ಚಿಕ್ಕಮಲ್ಲಿಗವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2016ರಲ್ಲಿ ಐಐಟಿಗೆ ಅನುಮೋದನೆ ನೀಡಿದಾಗ ಮೋದಿ ಸರ್ಕಾರವಿತ್ತು. 2019ರಲ್ಲಿ ಶಂಕುಸ್ಥಾಪನೆಯನ್ನೂ ಪ್ರಧಾನಿ ಮೋದಿ ನೆರವೇರಿಸಿದ್ದರು. 65 ವರ್ಷದಲ್ಲಿ ಕೇವಲ 6 ಐಐಟಿಗಳು ಇದ್ದವು, ಈಗ 16 ಐಐಟಿಗಳಿವೆ. ಅಭಿವೃದ್ಧಿ ಬಗ್ಗೆ ಮಾತ್ರ ನಮ್ಮ ಚಿಂತನೆ, ದೇವರು ಅವರಿಗೆ ಸದ್ಬುದ್ಧಿ ಕೊಡಲಿ. ಬೆಂಗಳೂರು-ಮೈಸೂರು ಹೈವೇಗೂ 10 ಸಾವಿರ ಕೋಟಿ ರೂ. ನೀಡಿದ್ದೆವು. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೂಮಿ ಪೂಜೆ ನೆರವೇರಿಸಿದ್ದರು. ಯಾರು ಏನು ಬೋರ್ಡ್ ಹಾಕಿಕೊಳ್ತಾರೆ ಹಾಕಿಕೊಳ್ಳಲಿ. ಲಜ್ಜೆಗೇಡಿತನ ಮಾಡಿದ್ರೆ ಏನು ಹೇಳಬೇಕೆಂದು ಕಿಡಿಕಾರಿದರು.

ಇತಿಹಾಸದಲ್ಲೇ ದೊಡ್ಡ ಕಾರ್ಯಕ್ರಮ

ನಾಳೆ ಪ್ರಧಾನಿ ನರೇಂದ್ರ ಮೋದಿ ಐಐಟಿ ಕಟ್ಟಡ ಉದ್ಘಾಟಿಸಲಿದ್ದಾರೆ. ಧಾರವಾಡದ ಇತಿಹಾಸದಲ್ಲೇ ನಾಳೆಯದ್ದು ದೊಡ್ಡ ಕಾರ್ಯಕ್ರಮ. ನಮಗೆ‌ ಬಂದ ಮಾಹಿತಿಯಂತೆ ಎರಡು ಲಕ್ಷ ಕುರ್ಚಿ ಸಾಕಾಗಲ್ಲ. ಹೆಚ್ಚಿನ ಕುರ್ಚಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಕಾರ್ಯಕ್ರಮಕ್ಕೆ ಬರುವವರಿಗಾಗಿ ಪ್ರತಿ ಗ್ರಾಮಕ್ಕೆ 2 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಮಾ. 12ರ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ನಮ್ಮ ಮತ್ತು ಅವರ ಸಂಬಂಧ‌ ಚೆನ್ನಾಗಿತ್ತು

ಮಾಜಿ ಸಂಸದ ಧ್ರುವನಾರಾಯಣ ನಿಧನ ದುಃಖ ತಂದಿದೆ. ನನ್ನ ಹಾಗೂ ಅವರ ಪಕ್ಷ ಬೇರೆಯಿದ್ದರೂ ನಮ್ಮ ಸಂಬಂಧ‌ ಚೆನ್ನಾಗಿತ್ತು. ಕೆಲಸದ ವಿಚಾರದಲ್ಲಿ ನನ್ನ ಜತೆ ಸದಾ ಸಂಪರ್ಕದಲ್ಲಿದ್ದರು. ರಾಜಕೀಯದಲ್ಲೂ ಆರ್‌.ಧ್ರುವನಾರಾಯಣ ಒಳ್ಳೆಯ ಮನುಷ್ಯ ಆಗಿದ್ದರು. ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದರು.

ಐಐಟಿ ನೂತನ ಕಟ್ಟಡದ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ನಾಳೆ ಧಾರವಾಡದ ಐಐಟಿ ನೂತನ ಕಟ್ಟಡದ ಉದ್ಘಾಟನೆ ನಡೆಯಲಿದ್ದು ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಧಾರವಾಡದ ಚಿಕ್ಕಮಲ್ಲಿಗೆವಾಡ ಗ್ರಾಮದ ವ್ಯಾಪ್ತಿಯಲ್ಲಿ ತಲೆ ಎತ್ತಿ ನಿಂತಿರೋ ಅದ್ಭುತ ಕಟ್ಟಡದ ಪಕ್ಕವೇ ಹೆಲಿಪ್ಯಾಡ್ ನಿರ್ಮಾಣವಾಗಿದೆ. ಮಂಡ್ಯ ಜಿಲ್ಲೆಯ ಕಾರ್ಯಕ್ರಮ ಮುಗಿಸಿಕೊಂಡು ಪ್ರಧಾನಿ ಮೋದಿ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಬಳಿಕ ಹುಬ್ಬಳ್ಳಿ ಏರ್ ಪೋರ್ಟ್ ನಿಂದ ಹೆಲಿಕಾಪ್ಟರ್ ಮೂಲಕ ಐಐಟಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸು ಪ್ರಧಾನಿ ಮೋದಿ, ಅನೇಕ ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ: Narendra Modi: ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಮೈಸೂರು ಕುಶಾಲನಗರ ಹೆದ್ದಾರಿ ಯೋಜನೆ; ಪ್ರಧಾನಿ ಮೋದಿ

ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಉದ್ಘಾಟನೆ  

ವಿಶ್ವದರ್ಜೆಯ ಪ್ಲಾಟ್ ಫಾರಂ ಆಗಿ ಹೊರ ಹೊಮ್ಮಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್ ಫಾರಂನ್ನು ಸಹ ಅಧಿಕೃತವಾಗಿ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:33 pm, Sat, 11 March 23