ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರನ್ನ ಭೇಟಿಯಾದ ಆರ್ ಅಶೋಕ್ ಏನಂದ್ರು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 18, 2023 | 5:47 PM

ಜಮೀರ್ ಹೇಳಿಕೆಯಿಂದ ಕೋಮು ಸೌಹಾರ್ದತೆ ಹಾಳಾಗುವ ರೀತಿಯಲ್ಲಿ ಜಮೀರ್ ಮಾತನಾಡಿದ್ದಾರೆ. ಜಮೀರ್ ಮಾತಿಗೆ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ರು, ವಿಧಾನಸಭೆಯಲ್ಲಿ ಚರ್ಚೆ ಮಾಡಿ ಎಂದು ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ, ರೇವಣ್ಣ ಬೆಳಗ್ಗೆ ಕರೆ ಮಾಡಿ ಹಾರೈಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.

ಬೆಂಗಳೂರು, ನ.18: ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಹಿನ್ನೆಲೆ ಆರ್​ ಅಶೋಕ(R Ashoka) ಅವರು ಇಂದು(ನ.18) ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ(HD Deve Gowda)ರ ನಿವಾಸಕ್ಕೆ ಭೇಟಿ ನೀಡಿ, ಆರ್ಶಿವಾದವನ್ನು ಪಡೆದಿದ್ದಾರೆ. ಇದಾದ ಬಳಿಕ ಮಾತನಾಡಿದ ಅವರು ‘ರಾಜ್ಯದ ಮುತ್ಸದಿ, ಹಿರಿಯರು, ಮಣ್ಣಿನ ಮಗ ದೇವೇಗೌರನ್ನು‌ ಭೇಟಿ ಮಾಡಿದೆ. ವಿಪಕ್ಷ ನಾಯಕನಾಗಿದ್ದಕ್ಕೆ ಅಭಿನಂಧನೆ ಸಲ್ಲಿಸಿದ್ರು,  ಸಾಕಷ್ಟು ಹೊತ್ತು ಚರ್ಚೆ ಮಾಡಿದೆ. ಕಾವೇರಿ ಹಾಗೂ ಮಹದಾಯಿ ನದಿ ವಿಚಾರವಾಗಿ ಹೆಚ್​ಡಿಡಿ ಸಲಹೆ ನೀಡಿದರು. ಇದಕ್ಕೆ ಸಂಬಂಧಪಟ್ಟಂತೆ ಪೂರ್ತಿ ಸಹಕಾರ ನೀಡುತ್ತೇನೆ ಎಂದು ಹೇಳಿದ್ದೇನೆ ಎಂದರು.

ನೀವು ಕುಮಾರಸ್ವಾಮಿ ಒಟ್ಟಾಗಿ ಕೆಲಸ ಮಾಡಿ

‘ನೀವು ಕುಮಾರಸ್ವಾಮಿ ಸೇರಿ ಒಟ್ಟಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ ಅವರು, ಯಾವುದೇ ಸಮಯದಲ್ಲಿ ಸಹಾಯ, ಆಶೀರ್ವಾದ ಇರುತ್ತದೆ ಎಂದರು. 60 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ, ಮೋದಿಯವರಿಗೆ ಗೌರವ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ ಅಂದರು, ನಾನು ಕೂಡ ಲೋಕಸಭೆಗೆ ಸಂಪೂರ್ಣವಾಗಿ ತೊಡಗಿಕೊಳ್ಳುತ್ತೇನೆ ಅಂದಿದ್ದಾರೆ. ಒಟ್ಟಿಗೆ ಹೋಗಿ ದುರಾಡಳಿತ ಸರ್ಕಾರವನ್ನು ತೆಗೆದುಹಾಕಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ; ಇದು ಇಟಲಿ ಅಲ್ಲ ಭಾರತ: ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ ವಾಗ್ದಾಳಿ

ಮೈತ್ರಿ ವಿಚಾರವಾಗಿ ಮಾತುಕತೆ ‌

ಇನ್ನು ಇದೇ ವೇಳೆ ‘ಮೈತ್ರಿ ವಿಚಾರವಾಗಿ ಕೂಡ ಮಾತುಕತೆ ‌ಮಾಡಿದ್ದೇವೆ. ವಿಧಾನಸಭೆ ಒಳಗೆ, ಹೊರಗೆ ಹೋರಾಟ ಮಾಡುತ್ತೀವಿ, ಆ ಮೂಲಕ ಸರ್ಕಾರಕ್ಕೆ ನಡುಕ ಹುಟ್ಟುವ ಕೆಲಸ ಮಾಡುತ್ತೇವೆ. ಜಮೀರ್ ಹೇಳಿಕೆಯಿಂದ ಕೋಮು ಸೌಹಾರ್ದತೆ ಹಾಳಾಗುವ ರೀತಿಯಲ್ಲಿ ಜಮೀರ್ ಮಾತನಾಡಿದ್ದಾರೆ. ಜಮೀರ್ ಮಾತಿಗೆ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ರು, ವಿಧಾನಸಭೆಯಲ್ಲಿ ಚರ್ಚೆ ಮಾಡಿ ಎಂದು ಸೂಚನೆ ನೀಡಿದ್ದಾರೆ.
ಕುಮಾರಸ್ವಾಮಿ, ರೇವಣ್ಣ ಬೆಳಗ್ಗೆ ಕರೆ ಮಾಡಿ ಹಾರೈಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಜೊತೆಗೆ ಹೆಚ್‌ಡಿಡಿ, ಬಿಎಸ್ವೈ ರಾಜಕೀಯ ತಂತ್ರಗಾರಿಕೆಯನ್ನು ನಾವು ಬಳಿಕೆ ಮಾಡಿಕೊಳ್ತೀವಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Sat, 18 November 23