AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ; ಇದು ಇಟಲಿ ಅಲ್ಲ ಭಾರತ: ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ ವಾಗ್ದಾಳಿ

ರಾಹುಲ್​​ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ ನೀಡಿದನ್ನು  ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಇದು ಕಾಂಗ್ರೆಸ್​​​​ನವರಿಗೆ ಸಂಬಂಧಿಸಿದ ಪ್ರಕರಣ ಅಲ್ಲ. ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ​​ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ ಪ್ರಕ್ರಿಯೆ. ಇದು ಇಟಲಿ ಅಲ್ಲ ಭಾರತ, ಇಲ್ಲಿ ರಾಜಕೀಯ ಮಾಡಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ;  ಇದು ಇಟಲಿ ಅಲ್ಲ ಭಾರತ: ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ ವಾಗ್ದಾಳಿ
ಕಂದಾಯ ಸಚಿವ ಆರ್.ಅಶೋಕ್
TV9 Web
| Updated By: ವಿವೇಕ ಬಿರಾದಾರ|

Updated on:Jun 14, 2022 | 5:04 PM

Share

ಬೆಂಗಳೂರು: ರಾಹುಲ್​​ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿ (Sonia Gandhi) ಅವರಿಗೆ ಇಡಿ ಸಮನ್ಸ ನೀಡಿದನ್ನು  ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ (Congress) ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ (R Ashok) ಮಾತನಾಡಿ ಸ್ವಾತಂತ್ರ್ಯಕ್ಕೂ ಮುನ್ನ ನ್ಯಾಷನಲ್ ​​​​ಹೆರಾಲ್ಡ್ ಪತ್ರಿಕೆ ಆರಂಭವಾಗಿದೆ. ಸ್ವಾತಂತ್ರ್ಯ ಯೋಧರು ಹಣ ಹಾಕಿ ಪ್ರಾರಂಭವಾದ ಪತ್ರಿಕೆಗೆ ಅಂದಿನ ಸರ್ಕಾರಗಳು ಭೂಮಿ ನೀಡಿದ್ದವು. ಪತ್ರಿಕೆಯ ಭೂ ಕಬಳಿಕೆಗೆ ಸೋನಿಯಾ, ರಾಹುಲ್​ ಮುಂದಾಗಿದ್ದಾರೆ. ಇದು ಕಾಂಗ್ರೆಸ್​​​​ನವರಿಗೆ ಸಂಬಂಧಿಸಿದ ಪ್ರಕರಣ ಅಲ್ಲ. ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ​​ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇಡಿ, ಸಿಬಿಐ ಇದ್ದವು. ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ ಪ್ರಕ್ರಿಯೆ. ಇದು ಇಟಲಿ ಅಲ್ಲ ಭಾರತ, ಇಲ್ಲಿ ರಾಜಕೀಯ ಮಾಡಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅವರಿಗೆ ಎಮರ್ಜೆನ್ಸಿ ತಪ್ಪು ಎನ್ನೋದು ಈಗಲಾದರೂ ಅರ್ಥ ಅಯ್ತಾ? ನಾಯಕರ ಬಂಧನ ಆಗಿಲ್ಲ ಆಗಲೇ ಇದನ್ನು ಭೀತಿಯಿಂದ ರಾಜಕೀಯಗೊಳಿಸುತ್ತಿದ್ದಾರೆ. ಕಾಂಗ್ರೆಸ್ ತಪ್ಪಿತಸ್ಥರಲ್ಲ ಅಂದರೆ ಯಾಕೆ ಭೀತಿ? ಕಾಂಗ್ರೆಸ್ ಪಾರ್ಟಿ ಮೇಲೆ ಹಾಕಿರುವ ಕೇಸ್ ಅಲ್ಲ ಇದು, ಸರ್ಕಾರ ಹಾಕಿರುವ ಕೇಸ್ ಕೂಡ ಅಲ್ಲ. ವ್ಯಕ್ತಿಯೊಬ್ಬರು ಹಾಕಿದ ಕೇಸ್, ದೂರು ಬಂದಿದೆ ತನಿಖೆ ಮಾಡುತ್ತಿದ್ದಾರೆ. ನಾಳೆ ಯಾವುದೋ ಜನ ಸಾಮಾನ್ಯರ ಮೇಲೂ ಇಡಿ ಕೇಸ್ ಇದೆ. ಹಾಗಂತ ಇ.ಡಿ ಕೇಸ್ ಇರುವವರೆಲ್ಲ ಕೂಡ ಇಡಿ ಮುಂದೆ ಪ್ರೊಟೆಸ್ಟ್ ಮಾಡ್ತಿದ್ದಾರಾ? ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಇದನ್ನು ಓದಿ: ತಾಳಿ ಕಟ್ಟದೆ ಬಸವ ತತ್ವದ ಅಡಿಯಲ್ಲಿ ಮಠಾಧೀಶರ ಸಮ್ಮುಖದಲ್ಲಿ ನಡೆದ ವಿಶಿಷ್ಟ ಮದುವೆ

ಕಾಂಗ್ರೆಸ್​​ ಪ್ರತಿಭಟನೆಗೆ ಕಾರಣವೇನು ?

ಸೋನಿಯಾ ಗಾಂಧಿ  (Sonia Gandhi), ರಾಹುಲ್ ಗಾಂಧಿಗೆ (Rahul Gandhi) ಇಡಿ ಸಮನ್ಸ್ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದರು. ಮಕ್ಕಳ ಸಮೇತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಡಿ ಕಚೇರಿಗೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಿದ್ದಾರೆ.

ಇದನ್ನು ಓದಿ: ಮುಸ್ಲಿಂ ಯುವಕನ ಎದೆಯ ಮೇಲೆ ಸಿಎಂ ಯೋಗಿ ಟ್ಯಾಟೂ! ಯೋಗಿ ಬಗ್ಗೆ ಯುವಕ ಹೇಳಿದ್ದೇನು ಗೊತ್ತಾ?

ಲಾಲ್​ಬಾಗ್​ ಗೇಟ್​ನಿಂದ ಕಾಂಗ್ರೆಸ್ ರ್ಯಾಲಿ ನಡೆದಿತ್ತು. ಮೆರವಣಿಗೆಗೂ ಮುನ್ನಾ ಕಾರ್ಯಕರ್ತರು ಬಾರ್​ ಕೋಲ್ ಚಳುವಳಿ ನಡೆಸಿದರು. ಮೋದಿ ವೇಷಧಾರಿಗೆ ಬಾರ್ ಕೋಲ್​ನಿಂದ ಏಟು ಕೊಟ್ಟು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಧರಣಿಯಲ್ಲಿ ಯಾವುದೇ ಅಹಿಕತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಲಾಲ್​ಬಾಗ್​ ಸುತ್ತಮುತ್ತ ಪೊಲೀಸ್ ಭದ್ರತೆ ಇದೆ. ವಿಲ್ಸನ್​ ಗಾರ್ಡನ್​ ಸ್ಮಶಾನದ ಬಳಿ ರ್ಯಾಲಿ ತಡೆಯಲು ಪೊಲೀಸರು ಬ್ಯಾರಿಕೇಡ್​ ಅಳವಡಿಕೆ ಮಾಡಿದ್ದಾರೆ. ಧರಣಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಹಿರಿಯ ನಾಯಕರು ಭಾಗಿಯಾಗಿದ್ದರು.

ರಾಜ್ಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Tue, 14 June 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?