ನಾಗರಿಕತೆ ಅಂದರೆ ನಾವು ಏನು ಎಂದು ಅರ್ಥ, ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುದು: ಸಿಎಂ ಬಸವರಾಜ ಬೊಮ್ಮಾಯಿ
CM Basavaraj Bommai: ಭಾರತದಲ್ಲಿ ಅತಿ ಹೆಚ್ಚು ಭಕ್ತಿ ಚಳವಳಿಗಳು ನಡೆದಿವೆ. ಇಸ್ಕಾನ್ ದೇಶದ ಅನೇಕ ಕಡೆ ದೇವಸ್ಥಾನಗಳನ್ನು ನಿರ್ಮಿಸಿದೆ. ಆಧ್ಯಾತ್ಮದ ಚಿಂತನೆಗಳನ್ನ ಸಾರುವಲ್ಲಿ ಇಸ್ಕಾನ್ ಪಾತ್ರ ದೊಡ್ಡದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಇಸ್ಕಾನ್ನ ಶ್ರೀ ರಾಜಾಧಿರಾಜ ಗೋವಿಂದ ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ (ISKCON Sri Rajadhi Raja Govind Temple inauguration) ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ ಮಾತ್ರವಲ್ಲ ಇಡೀ ವಿಶ್ವಕ್ಕೆ ಭಕ್ತಿಯ ಚೈತನ್ಯದ ದಿನ ಇದಾಗಿದೆ. ಪ್ರಭು ರಾಜಾಧಿರಾಜ ಗೋವಿಂದರ ಆಗಮನ ಇಲ್ಲಿ ಆಗಿದೆ. ಮಧುಪಂಡಿತ್ ದಾಸ್ ಅವರು ಎರಡು ದಶಕಗಳ ಕಾಲ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ದೇವರ ಮೂರ್ತಿ ಪ್ರತಿಷ್ಠಾಪಿಸಿ ಲೋಕ ಕಲ್ಯಾಣ ಸಂಕಲ್ಪ ಮಾಡಿದ್ದಾರೆ. ರಾಷ್ಟ್ರಪತಿಗಳು ಈ ದೇವಸ್ಥಾನ ಲೋಕಾರ್ಪಣೆ ಮಾಡಿದ್ದಾರೆ. ನಮ್ಮ ದೇಶ ಎಂಥಾ ದೈವೀ ಸಂಸ್ಕೃತಿ ಹೊಂದಿದೆ ಎಂಬುದನ್ನ ತೋರಿಸಿದ್ದಾರೆ. ನಾಗರಿಕತೆ ಹಾಗೂ ಸಂಸ್ಕೃತಿ ವ್ಯತ್ಯಾಸ ಹಲವರಿಗೆ ಗೊತ್ತಿಲ್ಲ. ನಾಗರಿಕತೆ ಅಂದರೆ ನಾವು ಏನು ಎಂದು ಅರ್ಥ. ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುದಾಗಿದೆ. ಸಾಕಷ್ಟು ಜನರಿಗೆ ಸಂಸ್ಕೃತಿ ಹಾಗೂ ಆಧ್ಯಾತ್ಮದ ಜ್ಞಾನ ಕಡಿಮೆಯಿದೆ. ಭಾರತದಲ್ಲಿ ಅತಿ ಹೆಚ್ಚು ಭಕ್ತಿ ಚಳವಳಿಗಳು ನಡೆದಿವೆ. ಇಸ್ಕಾನ್ ದೇಶದ ಅನೇಕ ಕಡೆ ದೇವಸ್ಥಾನಗಳನ್ನು ನಿರ್ಮಿಸಿದೆ. ಆಧ್ಯಾತ್ಮದ ಚಿಂತನೆಗಳನ್ನ ಸಾರುವಲ್ಲಿ ಇಸ್ಕಾನ್ ಪಾತ್ರ ದೊಡ್ಡದಿದೆ. ರಾಜ್ಯದಲ್ಲಿ ಅಕ್ಷಯ ಪಾತ್ರೆ ಯೋಜನೆ ನಡೆಯುತ್ತಿದೆ. ಯೋಜನೆಗೆ ನಮ್ಮ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದೆ ಎಂದು ಸಿಎಂ ಬೊಮ್ಮಾಯಿ (CM Basavaraj Bommai) ಹೇಳಿದರು.
ಇಸ್ಕಾನ್ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಬೊಮ್ಮಾಯಿ ದೇಗುಯಲದ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅನಿರೀಕ್ಷಿತವಾಗಿ ಕಾಮಗಾರಿ ಪರಿಶೀಲನೆಗೆ ತೆರಳಿದ್ದಾರೆ. ಹೆಚ್ಎಎಲ್ ಏರ್ಪೋರ್ಟ್ನಿಂದ ಕೆ.ಆರ್. ಪುರಂನತ್ತ ತೆರಳಿದ ಸಿಎಂ K.R.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಮಾರತ್ಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಅಂಡರ್ಪಾಸ್ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ, ಬೆಳ್ಳಂದೂರು ಬಳಿ ರಸ್ತೆಗೆ ಹಾಕಲಾಗುತ್ತಿರುವ ಟಾರ್ ಕಾಮಗಾರಿಯನ್ನು ವೀಕ್ಷಿಸಿದರು.
ಬಿಬಿಎಂಪಿ ಚುನಾವಣೆ ಹತ್ತಿರ… ಫುಲ್ ಆಕ್ಟೀವ್ ಆದ ಸಿಎಂ ಬೊಮ್ಮಾಯಿ
ಬಿಬಿಎಂಪಿ ಚುನಾವಣೆ ಹತ್ತಿರ ಬರ್ತಿದ್ದಂತೆ ಸಿಎಂ ಬೊಮ್ಮಾಯಿ ಫುಲ್ ಆಕ್ಟೀವ್ ಆಗಿದ್ದಾರೆ. ಒಂದೊಂದೇ ವಿಧಾನಸಭಾ ಕ್ಷೇತ್ರದಲ್ಲಿ ಹೋಗಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದು, ಮತ್ತೊಂದು ಕಡೆ ದಿಢೀರ್ ಪರಿಶೀಲನೆ ನಡೆಸುವುದು ಆಗ್ತಿದೆ. ಇಂದು ನಿಗದಿತ ಕಾರ್ಯಕ್ರಮ ಅಲ್ಲದಿದ್ದರೂ ಕೆಆರ್ ಪುರ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಮೊನ್ನೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ತೆರಳಿದ್ದರು. ಇದರಿಂದ ನಿಧಾನವಾಗಿ ಬಿಬಿಎಂಪಿ ಎಲೆಕ್ಷನ್ ಗೆ ಸಜ್ಜಾಗುತ್ತಿದ್ದಾರಾ ಸಿಎಂ ಎಂಬ ಪ್ರಶ್ನೆ ತೂರಿಬಂದಿದೆ.
ಇದನ್ನೂ ಓದಿ: Banana plant: ಮನೆಯಲ್ಲಿ ಬಾಳೆ ಗಿಡ ಬೆಳೆಸಲು ಆಲೋಚಿಸುತ್ತಿದ್ದೀರಾ? ಮೊದಲು ಈ ವಾಸ್ತು ನಿಯಮಗಳನ್ನು ಪಾಲಿಸಿ
ಇದನ್ನೂ ಓದಿ:
ಈ ವಸ್ತುಗಳನ್ನು ಮನೆಯ ನೈಋತ್ಯ ದಿಕ್ಕಿನಲ್ಲಿಡಿ, ಹಣದ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳು ಲಭಿಸುತ್ತವೆ
Published On - 3:12 pm, Tue, 14 June 22