ಈ ವಸ್ತುಗಳನ್ನು ಮನೆಯ ನೈಋತ್ಯ ದಿಕ್ಕಿನಲ್ಲಿಡಿ, ಹಣದ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳು ಲಭಿಸುತ್ತವೆ

South west Vastu Tips: ಯಾರೇ ಆಗಲೀ ಸಾಮಾನ್ಯವಾಗಿ ತಮ್ಮ ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುತ್ತಾರೆ. ಮನೆಯ ನಿರ್ಮಾಣದ ವೇಳೆ ವಾಸ್ತು ಶಾಸ್ತ್ರಕ್ಕೆ ಒತ್ತು ಕೊಟ್ಟು ಮನೆ ಡಿಸೈನ್ ಸಿದ್ಧಪಡಿಸ್ತಾರೆ.

ಈ ವಸ್ತುಗಳನ್ನು ಮನೆಯ ನೈಋತ್ಯ ದಿಕ್ಕಿನಲ್ಲಿಡಿ, ಹಣದ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳು ಲಭಿಸುತ್ತವೆ
ಈ ವಸ್ತುಗಳನ್ನು ಮನೆಯ ನೈಋತ್ಯ ದಿಕ್ಕಿನಲ್ಲಿಡಿ, ಹಣದ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳು ಪ್ರಾಪ್ತಿಯಾಗುತ್ತವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 02, 2022 | 6:06 AM

ಯಾರೇ ಆಗಲೀ ಸಾಮಾನ್ಯವಾಗಿ ತಮ್ಮ ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುತ್ತಾರೆ. ಮನೆಯ ನಿರ್ಮಾಣದ ವೇಳೆ ವಾಸ್ತು ಶಾಸ್ತ್ರಕ್ಕೆ ಒತ್ತು ಕೊಟ್ಟು ಮನೆ ಡಿಸೈನ್ ಸಿದ್ಧಪಡಿಸ್ತಾರೆ. ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿದರೆ ಸಕಾರಾತ್ಮಕ ಶಕ್ತಿ ನಿರ್ಮಾಣವಾಗಿ ಪ್ರಶಾಂತತೆ, ಸುಖಸಂತೋಷ, ಧನ ಪ್ರಾಪ್ತಿಯಾಗುತ್ತದೆ ಎಂಬುದು ಜನರ ಅವಿಚ್ಛಿನ್ನ ನಂಬಿಕೆ. ಆದರೆ ಇಲ್ಲಿ ಮನೆ ನಿರ್ಮಾಣಕ್ಕಷ್ಟೇ ಸೀಮಿತವಾಗದೆ ಮನೆಯ ಒಳಗಡೆ ಇಡಬಹುದಾದ ವಸ್ತುಗಳು ಮತ್ತು ಅವುಗಳನ್ನು ಯಾವ ದಿಕ್ಕಿನಲ್ಲಿ/ಜಾಗದಲ್ಲಿ ಪ್ರತಿಷ್ಠಾಪಿಸಬೇಕು ಎಂಬುದನ್ನು ವಾಸ್ತು ತಜ್ಞರಿಂದ ತಿಳಿದು ಪಾಲಿಸಿದರೆ ಉತ್ತಮವಾದೀತು.

ಮನೆಯಲ್ಲಿ ಅಕಸ್ಮಾತ್ ವಾಸ್ತು ದೋಷ ನಿರ್ಮಾಣವಾದರೆ ಅದು ಕುಟುಂಬಸ್ಥರ ಮೇಲೆ ಪರಿಣಾಮ ಬೀರುತ್ತದೆ. ಶಾರೀರಕವಾಗಿ. ಮಾನಸಿಕವಾಗಿ ಕ್ಷೋಭೆಯುಂಟಾಗುತ್ತದೆ. ಹಾಗಾಗಿ ಮನೆಯಲ್ಲಿ ಕೆಲ ವಿಶೇಷ ವಸ್ತುಗಳನ್ನು ಇಡುವಾಗ ಅದಕ್ಕೆ ಸಲ್ಲಬಹುದಾದ ನಿಶ್ಚಿತ ಜಾಗದಲ್ಲಿ ಇಡಬೇಕು ಅನ್ನುತ್ತಾರೆ ವಾಸ್ತು ತಜ್ಞರು.

ಇಲ್ಲಿ ಮುಖ್ಯವಾಗಿ ಮನೆಯ ನೈಋತ್ಯ ದಿಕ್ಕು (South West) ಸಂಬಂಧ ಹೇಳಲಾಗಿದೆ. ವಾಸ್ತು ಪ್ರಕಾರ ಮನೆಯ ನೈಋತ್ಯ ದಿಕ್ಕು ತುಂಬಾ ಪ್ರಧಾನವಾದದ್ದು. ಮನೆಯಲ್ಲಿ ಈ ಮೂಲೆ ಸ್ಥಿರತ್ವದ ಸಂಕೇತವಾಗಿದೆ. ಹಾಗಾಗಿಯೇ ಈ ದಿಕ್ಕಿನಲ್ಲಿ ಯಾವುದಾದರೂ ವಸ್ತುಗಳನ್ನು ಇಡುವ ಮುನ್ನ ಯೋಜಿಸಿ, ಯೋಜಿಸಿ, ಆಲೋಚಿಸಿ, ವಾಸ್ತು ತಜ್ಞರ ಅನುಭವವನ್ನು ಪಡೆದುಕೊಂಡು ಇಡಬೇಕು. ಇದಕ್ಕೆ ಉಲ್ಟಾ ಆಗಿ ವಸ್ತುಗಳನ್ನು ಇಟ್ಟರೆ ಅದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನಗತ್ಯ ಖರ್ಚುಗಳು, ಮಾನಸಿಕ ಒತ್ತಡ ಎದುರಿಸಬೇಕಾಗುತ್ತದೆ. ಹಾಗಾದರೆ ನೈಋತ್ಯ ದಿಕ್ಕಿನಲ್ಲಿ ಎಂತಹ ವಸ್ತುಗಳನ್ನು, ಹೇಗೆ ಇಡಬೇಕು, ಏನೆಲ್ಲಾ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣಾ…

ಭಾರಿ ತೂಕದ ವಸ್ತುಗಳು… ನೈಋತ್ಯ ದಿಕ್ಕಿನಲ್ಲಿ ಏನಾದರೂ ಇಡಬೇಕು ಎಂತಾದರೆ ಅವು ಭಾರವಾದ ವಸ್ತುಗಳಾಗಿರಬೇಕು ಎಂಬುದನ್ನು ಅರಿಯಿರಿ. ಅಗತ್ಯವಾದರೆ ಆ ದಿಕ್ಕಿನಲ್ಲಿ ವಾರ್ಡ್​​ ರೋಬ್ ಅನ್ನು ಇಟ್ಟುಕೊಳ್ಳೀ ಅನ್ನುತ್ತಾರೆ ವಾಸ್ತು ಪರಿಣತರು. ಅದರಲ್ಲಿ ನಗದು, ಆಭರಣಗಳನ್ನು ಇಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

ವಿಂಡ್ ಛೈಮ್ಸ್ (Wind Chimes) ಅನೇಕ ಬಾರಿ ಮನೆಯಲ್ಲಿ ಇರುವ ಪ್ರತಿಕೂಲ ವಾತಾವರಣಗಳು ಜೀವನದಲ್ಲಿ ಅನೇಕ ಸಮಸ್ಯೆಗಳು ತಂದೊಡ್ಡುತ್ತವೆ. ಹಾಗಾಗಿ ಮನೆಯ ನೈಋತ್ಯ ಭಾಗದಲ್ಲಿ ವಿಂಡ್ ಚೈಮ್ಸ್ , ಪಿರಮಿಡ್, ಶುಭಪ್ರದವಾದ ಗಿಡಗಳನ್ನು ನಾಟಿದರೆ ಅದರಿಂದ ಮನೆಯಲ್ಲಿ ಅಷ್ಟೈಶ್ವರ್ಯ ತುಂಬುತ್ತದೆ. ಅದರಿಂದ ಆರೋಗ್ಯ ಕೂಡ ಸದೃಢವಾಗಿರುತ್ತದೆ.

ಗಣೇಶನ ವಿಗ್ರಹ: ಅನೇಕ ಮಂದಿ ತಮ್ಮ ಮನೆಯ ಹೆಬ್ಬಾಗಿಲು ನೈಋತ್ಯ ದಿಕ್ಕಿನಲ್ಲಿ ಬರುವಂತೆ ನಿರ್ಮಿಸಿಕೊಳ್ತಾರೆ. ವಾಸ್ತು ದೋಷಗಳಿಗೆ ಇದೂ ಕೂಡ ಕಾರಣವಾಗುತ್ತದೆ. ಆದರೆ ಆ ದೋಷವನ್ನು ಸುಲಲಿತವಾಗಿ ನಿವಾರಿಸಬಹುದು ಅನ್ನುತ್ತಾರೆ ವಾಸ್ತು ತಜ್ಞರು. ಅದು ಹೇಗೆಂದರೆ ವಾಸ್ತು ಪ್ರಕಾರ ಆ ದಿಕ್ಕಿನಲ್ಲಿ ಇರುವ ಬಾಗಿಲಿನ ಬಳಿ ವಿನಾಯಕನ ವಿಗ್ರಹವನ್ನು ಇಡಬೇಕು. ಹಾಗೆ ಮಾಡುವುದರಿಂದ ಮನೆಯಲ್ಲಿ ಅನುಕೂಲಕರ ವಾತಾವರಣ ಏರ್ಪಡುತ್ತದೆ. ಕುಟುಂಬದ ಸದಸ್ಯರು ಉತ್ತಮ ಜೀವನ ನಿರ್ವಹಿಸಬಹುದು. (Source)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ