Banana plant: ಮನೆಯಲ್ಲಿ ಬಾಳೆ ಗಿಡ ಬೆಳೆಸಲು ಆಲೋಚಿಸುತ್ತಿದ್ದೀರಾ? ಮೊದಲು ಈ ವಾಸ್ತು ನಿಯಮಗಳನ್ನು ಪಾಲಿಸಿ
ಬಾಳೆ ಗಿಡಕ್ಕೆ ಅನುಗಾಲವೂ ಶುಭ್ರ ನೀರನ್ನು ಹರಿಸಬೇಕು. ಬಾಳೆ ಗಿಡಕ್ಕೆ ಬಟ್ಟೆ ಒಗೆದ ನೀರು, ಪಾತ್ರೆ ತೊಳೆದ ನೀರು, ಬಚ್ಚಲು ಮನೆ ನೀರು ಹೀಗೆ ಅಶುಭ್ರ ನೀರನ್ನು ಹರಿಸಬಾರದು. ಹಾಗೆಯೇ, ಮನೆಯಲ್ಲಿ ದೇವರ ವಿಗ್ರಹಗಳನ್ನು ತೊಳೆದ ನೀರನ್ನು ಬಾಳೆ ಗಿಡದ ಮೇಲೆ ಹಾಕಬೇಡಿ. ಬಾಳೆ ಗಿಡದ ಸುತ್ತಲೂ ಶುಭ್ರತೆಯನ್ನು ಕಾಪಾಡಿ.
Vastu Tips: ಮನೆಯಲ್ಲಿ ಬಾಳೆ ಗಿಡವನ್ನು (banana plant) ಬೆಳೆಸಲು ಆಲೋಚಿಸುತ್ತಿದ್ದೀರಾ? ಮೊದಲು ಈ ವಾಸ್ತು ನಿಯಮಗಳನ್ನು ಪಾಲಿಸಿ. ಏಕೆಂದರೆ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಿ ಬಾಳೆ ಗಿಡವನ್ನು ನಾಟಿದರೆ ಅದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬಾಳೆ ಗಿಡಕ್ಕೆ ವಿಶೇಷ ಮಹತ್ವದ ಗೌರವದ ಸ್ಥಾನ ನೀಡಲಾಗಿದೆ. ಪ್ರತಿ ಗುರುವಾರದಂದು ಬಾಳೆಗಿಡಕ್ಕೆ ಪೂಜೆ ಮಾಡುತ್ತಾರೆ. ಈ ಗಿಡದಲ್ಲಿ ಭಗವಂತ ನಾರಾಯಣ ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ. ಆದರೆ ಈಗಿನ ಕಾಲಮಾನದಲ್ಲಿ ಬಹಳಷ್ಟು ಜನ ತಮ್ಮ ಮನೆಗಳಲ್ಲಿ ಬಾಳೆ ಗಿಡ ನೆಡಲು ಇಷ್ಟಪಡುವುದಿಲ್ಲ. ಜೊತೆಗೆ ಮನೆ ಬಳಿ ಬಾಳೆ ಗಿಡ ಹಾಕುವುದಕ್ಕೆ ಜಾಗವೂ ಇರುವುದಿಲ್ಲ ಎಂಬುದು ಗಮನಾರ್ಹ. ಇನ್ನು ಕೆಲವರಿಗೆ, ಮನೆಯಲ್ಲಿ ಬಾಳೆ ಗಿಡ ಹಾಕಿದರೆ ಅಪಶಕುನ ಎಂಬ ಭೀತಿಯೂ ಇದೆ. ಆದರೆ ವಾಸ್ತವವಾಗಿ ವಾಸ್ತು ಅನುಸರಿಸಿ ಬಾಳೆ ಗಿಡ ನೆಟ್ಟು, ಪೋಷಣೆ ಮಾಡಿದರೆ ಯಾವುದೇ ರೀತಿಯ ತೊಡಕು ಉದ್ಭವಿಸುವುದಿಲ್ಲ. ಅದೇ ಬಾಳೆ ಗಿಡವನ್ನು ತಪ್ಪು ತಪ್ಪಾಗಿ ಬೆಳೆಸಿದರೆ ಅದು ಅಶುಭವಾದೀತು. ಜನ ತಪ್ಪೆಸುಗುವುದು ಇಲ್ಲಿಯೇ, ವಾಸ್ತುವನ್ನು ಸರಿಯಾಗಿ ತಿಳಿದುಕೊಳ್ಳದೆ ಎಲ್ಲೆಂದರಲ್ಲಿ ಗಿಡ ನೆಟ್ಟು ಅಶುಭವನ್ನು ತಂದುಕೊಂಡು ಆ ಮೇಲೆ ಪಶ್ಚಾತ್ತಾಪ ಪಡುತ್ತಾರೆ. ಹಾಗಾದರೆ ಬನ್ನೀ ನಿಮಗಿಂದು ಬಾಳೆ ಗಿಡ ನೆಡುವ ಶಾಸ್ತ್ರದ ಬಗ್ಗೆ ತಿಳಿಸೋಣ.
- * ಯಾವ ದಿಕ್ಕಿನಲ್ಲಿ ಬಾಳೆ ಗಿಡ ನೆಡಬೇಕು ಅಂದರೆ… ಪೂಜೆಗೆ ತಕ್ಕುದಾದ ದಿಕ್ಕಿ ಅಂದರೆ ಅದು ಈಶಾನ್ಯದ ದಿಕ್ಕು. ಹಾಗಾಗಿ ಆ ದಿಕ್ಕಿನಲ್ಲಿ ಬಾಳೆ ಗಿಡ ನೆಡುವುದು ಶುಭಪ್ರದ ಎಂದು ಎಣಿಸಬಹುದು. ಇದಲ್ಲದೆ ಪೂರ್ವ ದಿಕ್ಕು, ಉತ್ತರ ದಿಕ್ಕುಗಳಲ್ಲಿಯೂ ನೆಡಬಹುದು.
- * ಮನೆಯ ಹಿತ್ತಲಿನಲ್ಲಿ ಬಾಳೆ ಗಿಡ ನೆಡಬೇಕು… ಮನೆಯ ಮುಂದೆ ಎಂದಿಗೂ ಬಾಳೆ ಗಿಡ ನೆಡಬೇಡಿ. ಅದೇ ಮನೆಯ ಹಿಂಭಾಗದಲ್ಲಿ ಈ ಗಿಡ ನೆಡಬಹುದು. ಬಾಳೆ ಗಿಡಕ್ಕೆ ಅನುದಿನವೂ ನೀರು ಹಾಯಿಸುತ್ತಿರಬೇಕು.
- * ಬಾಳೆ ಗಿಡ ಮತ್ತು ತುಳಸಿ ಗಿಡವನ್ನು ಬೆಳೆಸುವ ವಿಧಾನ… ಬಾಳೆ ಗಿಡದಲ್ಲಿ ಭಗವಾನ್ ವಿಷ್ಣು ನೆಲೆಸಿರುತ್ತಾನೆ ಎಂಬ ಪ್ರತೀತಿ ಇದೆ. ಇನ್ನು ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂಬ ಮಾತಿದೆ. ಹಾಗಾಗಿ ಬಾಳೆ ಗಿಡದ ಪಕ್ಕದಲ್ಲಿ ತುಳಸಿ ಗಿಡವನ್ನು ನೆಟ್ಟಿರಬೇಕು. ಇದರಿಂದ ವಿಷ್ಣು ಮತ್ತು ಲಕ್ಷ್ಮಿ ಇಬ್ಬರ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಾಗೆಯೇ ಪ್ರತಿ ಗುರುವಾರ ಬಾಳೆ ಗಿಡಕ್ಕೆ ಅರಶಿಣ ಹಚ್ಚಿ, ಪೂಜೆ ಮಾಡಬೇಕು.
- * ಬಾಳೆ ಗಿಡಕ್ಕೆ ಎಂತಹ ನೀರು ಹರಿಸಬೇಕು: ಬಾಳೆ ಗಿಡಕ್ಕೆ ಅನುಗಾಲವೂ ಶುಭ್ರ ನೀರನ್ನು ಹರಿಸಬೇಕು. ಬಾಳೆ ಗಿಡಕ್ಕೆ ಬಟ್ಟೆ ಒಗೆದ ನೀರು, ಪಾತ್ರೆ ತೊಳೆದ ನೀರು, ಬಚ್ಚಲು ಮನೆ ನೀರು ಹೀಗೆ ಅಶುಭ್ರ ನೀರನ್ನು ಹರಿಸಬಾರದು. ಹಾಗೆಯೇ, ಮನೆಯಲ್ಲಿ ದೇವರ ವಿಗ್ರಹಗಳನ್ನು ತೊಳೆದ ನೀರನ್ನು ಬಾಳೆ ಗಿಡದ ಮೇಲೆ ಹಾಕಬೇಡಿ. ಬಾಳೆ ಗಿಡದ ಸುತ್ತಲೂ ಶುಭ್ರತೆಯನ್ನು ಕಾಪಾಡಿ. ಅಷ್ಟೇ ಅಲ್ಲ, ಬಾಳೆ ಎಲೆ ಒಣಗಿಹೋದರೆ ತಕ್ಷಣ ಅದನ್ನು ತೆಗೆದು ಬಿಸಾಡಿ. (Read in Telugu here)