ದಾವಣಗೆರೆ: ರಾಹುಲ್ ಗಾಂಧಿ (Rahul Gandhi) ಬೈದಿದ್ದು ಬಿಜೆಪಿಯವರನ್ನು. ಇವರನ್ನು ಬೈದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹೇಗೆ ಹೋಗುತ್ತದೆ. ಮೇಲಾಗಿ ಇವರ ಆಡಳಿತದಿಂದ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಮಾತನಾಡಿದ ಅವರು, ನಾರಾಯಣಗೌಡ ಹಾಗೂ ಸೋಮಣ್ಣ ಇಬ್ಬರು ಕಾಂಗ್ರೆಸ್ಗೆ ಬರುವುದು ನನಗೆ ಗೊತ್ತಿಲ್ಲ. ಆ ವಿಚಾರದ ಬಗ್ಗೆ ನಾನು ಉತ್ತರಿಸಲ್ಲ ಎಂದರು. ಇನ್ನು ದಿ. ಧ್ರುವನಾರಾಯಣರವರ ಪುತ್ರನಿಗೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಆ ಬಗ್ಗೆ ನೋಡೋಣ ಎಂದರು. ಕಾಂಗ್ರೆಸ್ ಮೊದಲ ಪಟ್ಟಿ ಇದೇ 17ಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ವಾತಾವರಣ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಹೇಳಿದರು.
ರಾಜ್ಯಕ್ಕೆ ಮೋದಿ ಬಂದರೆ ಏನು ಆಗಲ್ಲ. ಕಳೆದ ಸಲ ಕೂಡ ಬಂದಿದ್ದರು. ಇನ್ನು ಮೈಸೂರು-ಬೆಂಗಳೂರು ಹೈವೇ ಮಾಡಿದ್ದು ಯಾರು, ಇನ್ನು ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದಾಗ ನಾನು ಮಂಜೂರು ಮಾಡಿಸಿದ್ದು. ಈಗ ಕ್ರೆಡಿಟ್ ತೆಗೆದು ಕೊಳ್ಳುತ್ತಿರುವುದು ಬಿಜೆಪಿಯವರು. ಇವರಿಗೆ ಮಾನ ಮಾರ್ಯಾದೆ ಇದೇಯಾ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: BS Yediyurappa: ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಕಠಿಣ ಶ್ರಮ ವಹಿಸುತ್ತೇವೆ; ಬಿಎಸ್ ಯಡಿಯೂರಪ್ಪ
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನನ್ನ ಬಂಧಿಸಬೇಕಿತ್ತು ಜೊತೆಗೆ ಪಕ್ಷದಿಂದ ಉಚ್ಚಾರಣೆ ಮಾಡಬೇಕಿತ್ತು, ಅದನ್ನು ಬಿಜೆಪಿ ಸರ್ಕಾರ ಮಾಡಿಲ್ಲ. ಇವರೇ ಕುಮ್ಮಕ್ಕು ಕೊಡುತ್ತಿದ್ದು, ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿ ರಕ್ಷಿಸುತ್ತಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಪರ ಇದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ: ಲಿಂಗಾಯತರು, ವೀರಶೈವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ನ್ನು ನಂಬಬಾರದು: ಪ್ರಧಾನಿ ಮೋದಿ
ಮಂಡ್ಯ ಸಂಸದೆ ಸುಮಲತಾ ಹೇಳುವ ಪ್ರಕಾರ ಏನು ಅಭಿವೃದ್ಧಿ ಆಗಿದೆ. ಬೇಕಾದರೆ ಚರ್ಚೆಗೆ ಬರಲಿ. ದಾಖಲೆ ತರುತ್ತೇವೆ. ರಾಜ್ಯ ಹೆದ್ದಾರಿ ಇರುವುದು ರಾಷ್ಟ್ರೀಯ ಹೆದ್ದಾರಿ ಆಗಿದ್ದು ಯಾವಾಗ, ಗೊತ್ತಿಲ್ಲ ಅಂದರೆ ಏನು ಮಾಡೋಕೆ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದು ನಾನೇ. ಮೈಸೂರು-ಬೆಂಗಳೂರು ಹೆದ್ದಾರಿ ಅಪೂರ್ಣ ಕಾಮಗಾರಿಯನ್ನು ಚುನಾವಣೆ ಕಾರಣಕ್ಕೆ ಉದ್ಘಾಟನೆ ಮಾಡಲಾಗಿದೆ. ಇನ್ನು ಮೈಸೂರು ಸಂಸದ ಪ್ರತಾಪ್ ಸಿಂಹನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೈವೇ ಬರುವುದು ಕೇವಲ ಏಳು ಕಿಲೋಮೀಟರ್. ಮಾತು ಎತ್ತಿದ್ದರೇ ಪ್ರತಾಪ್ ಸಿಂಹ ಪ್ರತಾಪ್ ಸಿಂಹ ಎನ್ನುತ್ತಾರೆ ಸಿದ್ದರಾಮಯ್ಯ ಟಾಂಗ್ ನೀಡಿದರು.
ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:50 pm, Mon, 13 March 23