ರಾಯಚೂರು, ಸೆ.23: ಜಿಲ್ಲೆಯಲ್ಲಿ ಇಂದು ಐದನೇ ದಿನದ ಗಣೇಶ ವಿಸರ್ಜನೆ ನಡೆಯಿತು. ಅಂತಿಮ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಸನಾತನ ಧರ್ಮವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಹಿಂದೂ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಸನಾತನ ಧರ್ಮ ಭಗವಂತನಿಂದ ನಿರ್ಮಾಣವಾಗಿದ್ದು, ನಿಮ್ಮಂಥ ಚಪ್ಪರ್ಗಳಿಂದ ಅದನ್ನ ಏನು ಮಾಡಲು ಆಗಲ್ಲ ಎಂದರು.
ಸ್ವಾತಂತ್ರ್ಯ ಮಹಾನ್ ಪುರುಷರಿಗೆ ಅವಮಾನ ಮಾಡೊ ಕೆಲಸ ಆಗುತ್ತಿದೆ. ಸಾವರ್ಕರ್ ಚಪ್ಪಲಿ ಧೂಳಿಗು ಸಮನಾಗದೇ ಇರುವವರು ಅವರ ಬಗ್ಗೆ ಮಾತನಾಡುತ್ತಾರೆ. ಬರೀ ಒಂದು ವಾರ ಎತ್ತಿನ ಗಾಲಿಗೆ ಕಟ್ಟಿದಂತೆ ಕಟ್ಟಿದರೇ ಆ ಮಕ್ಕಳಿಗೆ ಅರ್ಥ ಆಗತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್, ಹಿಂದೂ ವಿರೋಧಿಗಳಿಗೆ ಕೌಂಟರ್ ಕೊಟ್ಟರು.
ಮೊಹಮ್ಮದ್ ಅಲಿ ಜಿನ್ನಾನ ಮೊಮ್ಮಕ್ಕಳು ಇಲ್ಲೆ ಇದ್ದಾರೆ. ಅವರು ಅಲ್ಲಿ ಹೋದರೆ ಹೊಡಿತಾರೆ. ಅವರು ಪಕ್ಕಾ ಮುಸಲ್ಮಾನರಲ್ವಂತೆ ಎಂದು ಹೇಳಿದ ಯತ್ನಾಳ್, ಮುಸ್ಲಿಂರಿಗೆ ಭಾಯಿ ಭಾಯಿ ಅಂತಿರಾ ಅವರು 50 ಪರ್ಸೆಂಟ್ ಆಗುವವರೆಗೆ ನಿಮ್ಮ ಜೊತೆ ಮಾತ್ರ ಭಾಯಿ ಭಾಯಿ. ಸ್ವಂತ ತಂಗಿ ಗಂಡಗ ಭಾಯಿ ಜಾನ್ ಅನ್ನಲ್ಲ. ನಮಗೆ ಹಮ್ ಬಾಯಿ ಭಾಯಿ ಅಂತಾರೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ನಿಂತು ಗುಡುಗಿದ ಬಿಜೆಪಿ ಶಾಸಕ ಯತ್ನಾಳ್, ಪ್ರಮೋದ್ ಮುತಾಲಿಕ್
ಉಪವಾಸ ಕುಳಿತದ್ದಕ್ಕೆ ನಮಗೆ ಸ್ವಾತಂತ್ರ್ಯ ಬಂದಿಲ್ಲ. ನೇತಾಜಿ ಅವರ ಬಂದೂಕಿನಿಂದ ಸ್ವಾತಂತ್ರ್ಯ ಸಿಕ್ಕಿದ್ದು ಅಂತ ಅಂಬೇಡ್ಕರ್ ಹೇಳಿದ್ದರು. ಹೈದ್ರಾಬಾದ್ ನಿಜಾಮಾ ಅರ್ಧ ಆಸ್ತಿ ಕೊಡುತ್ತೇನೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗು ಅಂತ ಅಂಬೇಡ್ಕರ್ ಅವರಿಗೆ ಎಂದಿದ್ದರಂತೆ. ಆದರೆ ಅಂಬೇಡ್ಕರ್ ಅವರು ನಮ್ಮ ಸಮಾಜಕ್ಕೆ ನ್ಯಾಯ ಕೊಡುತ್ತೇನೆ ಬರಲ್ಲ ಅಂತ ಹೇಳಿದ್ದರು. ಅಸಮಾನತೆ ವಿರುದ್ಧ ಸಿಟ್ಟಿದ್ದರೂ ಹಿಂದೂಗಳು ಮೋಸ ಮಾಡಲ್ಲ ಅಂತ ಹೇಳಿದ್ದರು ಎಂದರು.
ಹೊಸ ಪಾರ್ಲಿಮೆಂಟ್ ಉದ್ಘಾಟನೆ ಗಣೇಶ ಚತುರ್ಥಿ ಅಂದು ಉದ್ಘಾಟನೆ ಆಯ್ತು. ಬೇರೆ ಅವರಿದ್ದರೆ ರಂಜಾನ್ ದಿನ ಉದ್ಘಾಟನೆ ಆಗುತ್ತಿತ್ತು. ನಿತೀಶ್ ಕುಮಾರ್ ಬ್ರಿಡ್ಜ್ ಕಟ್ಟು, ಅದು ಒಂದೇ ದಿನಕ್ಕೆ ಬಿತ್ತು. ಹೊಸ ಪಾರ್ಲಿಮೆಂಟ್ನಲ್ಲಿ ಅಖಂಡ ಭಾರತ ನಕಾಶೆ ಹಾಕಲಾಗಿದೆ. ಆದರೆ ಓವೈಸಿ ಅಖಂಡ ಭಾರತ್ ಕ್ಯೂ ಲಗಾಯಾ ಅಂತಾನೆ. ಹೇ ತೇರಾ ಬಾಪ್ ಕಾ ಹೈ ಕ್ಯಾ ಎಂದರು.
ಕೆಲವೇ ದಿನದಲ್ಲಿ ನಿಮ್ಮ ಪಾಕಿಸ್ತಾನ ವಿಭಜನೆ ಆಗತ್ತದೆ. ಕರಾಚಿಯಲ್ಲೂ ಗಣೇಶನನ್ನ ಕೂರಿಸುತ್ತೇನೆ. ಗಣೇಶನನ್ನ ಕೂರಿಸಲು ಪರ್ಮಿಷನ್ ಕೋಡುವ ಮಗ ಯಾರು? ಅವರಿನ್ನು ಹುಟ್ಟಿಲ್ಲ ಎಂದ ಯತ್ನಾಳ್, ಸನಾತನ ಧರ್ಮ ಉಳಿಸಿದರೆ ಸಂವಿಧಾನ ಉಳಿಯುತ್ತದೆ. ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರೂ ಶ್ರೀಗಳು ಏಕೆ ಸುಮ್ಮನಿದ್ದರು? ನಮ್ಮ ಸಮಾಜದವರನ್ನು ಸಿಎಂ ಮಾಡಿ ಅಂತಾ ದೆಹಲಿಗೆ ಹೋಗುವುದು ಬಿಡಿ. ಸನಾತನ ಧರ್ಮದ ಪರ ಇರಿ ಎಂದರು.
ಹಂಪಿ ಉತ್ಸವ, ದಸರಾ ಸರಳ ಉತ್ಸವ ಆಚರಣೆಗೆ ದುಡ್ಡಿಲ್ಲ. ಆದರೆ ಹಜ್ ಯಾತ್ರೆಗೆ 500 ಕೋಟಿ ಕೊಡುತ್ತಾರೆ. ಅಕ್ಕಿ ಗ್ಯಾರಂಟಿ ಬಸ್ ಗ್ಯಾರಂಟಿ ನೋಡಬೇಡಿ. ಲೋಕಸಭೆ ಚುನಾವಣೆ ಬಳಿಕ ಎಲ್ಲ ಗ್ಯಾರಂಟಿ ಬಂದ್ ಆಗುತ್ತವೆ. ರಾಜ್ಯ ಚುನಾವಣೆಯಲ್ಲಿ ಅದೇನಾಯ್ತೋ ಏನೋ ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಇರಿ ಎಂದರು.
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿತ್ತು. ಆಗ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಅರಗ ಜ್ಞಾನೇಂದ್ರ ಹೇಳಿದ್ದರು. ಆದರೆ ನಾಲ್ಕು ಎನ್ಕೌಂಟರ್ ಮಾಡು ಎಲ್ಲಾ ಸುಮ್ಮನಾಗುತ್ತಾರೆ ಅಂತ ಅರಗ ಜ್ಞಾನೇಂದ್ರಗೆ ಹೇಳಿದೆ. ಆದರೆ ನನ್ನ ಮಾತು ಯಾರೂ ಕೇಳುತ್ತಿಲ್ಲ ಅಂತ ಹೇಳಿದರು. ಆಗ ನಂಗೆ ಪವರ್ ಕೊಡು ನಾನು ಮಾಡುತ್ತೇನೆ ಎಂದೆ. ಕಳ್ಳತನ ಮಾಡಿ ಜೈಲಿಗೆ ಹೋಗೊದು ಬೇರೆ. ಇಂಥ ಕೆಲಸ ಮಾಡಿ ಹೋಗೋಕೆ ಏನು ಭಯ ಎಂದು ಕೇಳಿದರು.
ನಮ್ಮ ಸಿಎಂ ಬೊಮ್ಮಾಯಿ ಇದ್ದಾಗ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಶಾಂತಿ ಸಭೆ, ಎಸ್ಪಿ ಮೀಟಿಂಗ್, ಇಷ್ಟೆ ಕುಣಿಬೇಕು, ಒಂದೇ ದಿನ ಕೂರಿಸಬೇಕು, ಐದು ಜನ ಮಾತ್ರ ಇರಬೇಕು ಅಂತ ಆದೇಶ ಹೊರಡಿಸಿದ್ದರು. ಆಗ, ನೀವು ಪಾಕಿಸ್ತಾನ ಮುಖ್ಯಮಂತ್ರಿಯೇ ಅಥವಾ ನಮ್ಮೋರಾ ಅಂತ ಬೊಮ್ಮಾಯಿ ಅವರನ್ನು ನಾನು ಕೇಳಿದ್ದೆ. ಅಲ್ಲದೆ, ನಾನು 11 ದಿನ ಗಣೇಶನನ್ನು ಇಡುತ್ತೇನೆ, 50 ಸಾವಿರ ಜನರನ್ನ ಕರೆಸುತ್ತೇನೆ, ಡಿಜೆ ಹಾಕಿಸುತ್ತೇನೆ ಎಂದೆ. ಆಗ ಯತ್ನಾಳ್ರೆ ಅಂತ ಹೇಳಿ ಸುಮ್ಮನಾದರು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ