ಚೆನ್ನೈ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನಿಂದ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಈ ವಿಚಾರವಾಗಿ ಬಿಜೆಪಿಯಿಂದ ಈವರೆಗೆ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಮೋದಿ ಅವರನ್ನು ತಮಿಳುನಾಡಿನ ಜನತೆಗೆ ಇಲ್ಲಿನವರೇ ಎಂಬುದಾಗಿ ಪರಿಗಣಿಸಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಹೇಳಿದ್ದಾರೆ. ತಮಿಳುನಾಡಿನ ರಾಮನಾಥಪುರಂ ಕ್ಷೇತ್ರದಿಂದ ಮೋದಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಇತ್ತೀಚೆಗೆ ಹರಿದಾಡಿತ್ತು. ಇದರ ಅರ್ಥ ಮೋದಿಯವರು ಪ್ರಾದೇಶಿಕ ಅಡೆತಡೆಗಳನ್ನು ಮೀರಿದ ನಾಯಕ ಎಂದು ಅಣ್ಣಾಮಲೈ ಬಣ್ಣಿಸಿದ್ದಾರೆ.
ಮೋದಿ ಜೀ ಇಲ್ಲಿನವರೇ. ಕಳೆದ ಒಂದು ತಿಂಗಳಿನಲ್ಲಿ ನೀವು ತಮಿಳುನಾಡಿನ ಸುದ್ದಿಗಳನ್ನು ಗಮನಿಸಿದರೆ, ಮೋದಿ ಅವರು ತಮಿಳುನಾಡಿನಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಯನ್ನು ಯಾರೋ ಹರಿಯಬಿಟ್ಟಿರುವುದು ಗಮನಕ್ಕೆ ಬರಲಿದೆ. ಎಲ್ಲೇ ಹೋದರೂ, ಮೋದಿ ತಮಿಳುನಾಡಿನಿಂದ ಸ್ಪರ್ಧಿಸಲಿದ್ದಾರೆಯೇ ಎಂಬುದಾಗಿ ಜನ ಪ್ರಶ್ನಿಸುತ್ತಿದ್ದಾರೆ ಎಂದು ‘ಎಎನ್ಐ’ ಸುದ್ದಿ ಸಂಸ್ಥೆಗೆ ಅಣ್ಣಾಮಲೈ ತಿಳಿಸಿದ್ದಾರೆ.
ಇದನ್ನೂ ಓದಿ: Karnataka News Live Updates: ಯುವಕರು ಎಲ್ಲ ಕ್ಷೇತ್ರಗಳಲ್ಲಿ ಧೈರ್ಯದಿಂದ ಮುನ್ನುಗ್ಗಬೇಕು: ಅಮಿತ ಶಾ
2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ವಾರಾಣಸಿ ಮತ್ತು ಗುಜರಾತ್ನ ವಡೋದರದಿಂದ ಮೋದಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಅವರು ವಾರಾಣಸಿಯನ್ನು ಉಳಿಸಿಕೊಂಡಿದ್ದರು. 2019ರಲ್ಲಿಯೂ ವಾರಾಣಸಿಯಿಂದ ಮರು ಆಯ್ಕೆಯಾಗಿದ್ದರು.
Will PM Modi contest the Lok Sabha poll from this seat in Tamil Nadu? K Annamalai explains#ANIPodcastWithSmitaPrakash #Podcast #Annamalai #SmitaPrakash #Modi2024
Watch the full episode here: https://t.co/RQbLYuyukp pic.twitter.com/NzkpbWechp
— ANI (@ANI) January 27, 2023
ರಾಮನಾಥಪುರದಿಂದ ಮೋದಿ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂಬುದು ಊಹಾಪೋಹವಷ್ಟೆ. ಜನ ಈ ವದಂತಿಯನ್ನು ಹರಿಯಬಿಟ್ಟಿದ್ದಾರೆ. ಅವರು ಮಾತನಾಡುತ್ತಿದ್ದಾರೆ. ಮೋದಿ ಅವರು ಇಲ್ಲಿಂದ ಸ್ಪರ್ಧಿಸಬೇಕೆಂದು ಜನರು ಬಯಸುತ್ತಿದ್ದಾರೆ. ಮೋದಿ ಅವರನ್ನು ಹೊರಗಿನವರಲ್ಲ, ಇಲ್ಲಿನವರೇ ಎಂಬಂತೆ ಜನ ಪರಿಗಣಿಸಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ