ಬೆಂಗಳೂರು: ಸಂಪರ್ಕ್ ಸೆ ಸಮರ್ಥನ್ ಅಭಿಯಾನದ ಭಾಗವಾಗಿ ಬಿಜೆಪಿ (BJP) ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆ ಜೂನ್ 27 ರಂದು ಸಂವಾದ ನಡೆಸುವ ಅವಕಾಶ ಸಿಗಲಿದೆ. ಇದಕ್ಕಾಗಿ ಫಲಾನುಭವಿಗಳ ಜೊತೆ ಹೆಚ್ಚಿನ ವಿಡಿಯೋ ಅಥವಾ ಸೆಲ್ಫಿ ತೆಗೆದು ಕಳುಹಿಸಬೇಕು. ಈ ಬಗ್ಗೆ ಬಿಜೆಪಿ ಕರ್ನಾಟಕವು ಪೋಸ್ಟರ್ ಹಂಚಿಕೊಂಡಿದೆ.
ನನ್ನ ಬೂತ್ ಎಲ್ಲಕ್ಕಿಂತಲೂ ಬಲಿಷ್ಠ ಬೂತ್ ಎಂಬ ಹೆಸರಿನಲ್ಲಿ ಬಿಜೆಪಿ ಹಂಚಿಕೊಂಡ ಪೋಸ್ಟರ್ನಲ್ಲಿ ಇರುವಂತೆ, ಪ್ರಧಾನಮಂತ್ರಿ ಅವರು ಪಕ್ಷದ 10 ಲಕ್ಷ ಬೂತ್ಗಳಲ್ಲಿನ ಲಕ್ಷಾಂತರ ಕಾರ್ಯಕರ್ತರೊಂದಿಗೆ ಜೂನ್ 27 ರಂದು ಸಂವಾದ ನಡೆಸಲಿದ್ದಾರೆ. ಸಂಪರ್ಕ್ ಸೆ ಸಮರ್ಥನ್ ಅಭಿಯಾನದ ಭಾಗವಾಗಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ವಿಡಿಯೋ ಅಥವಾ ಸೆಲ್ಫಿ ತರುವ ಕಾರ್ಯಕರ್ತರಿಗೆ ಮೋದಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಸಿಗಲಿದೆ.
NAMO App ಮೂಲಕ ಈ ಮೂರು ಟಾಸ್ಕ್ಗಳನ್ನು ಪೂರ್ಣಗೊಳಿಸಬೇಕು. ಆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಹಾಭಿಯಾನದಲ್ಲಿ ಜೊತೆಗೂಡುವಂತೆ ಬಿಜೆಪಿ ಕರ್ನಾಟಕ ತಿಳಿಸಿದೆ.
ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇದೇ ಮೇ 30 ಕ್ಕೆ 9 ವರ್ಷ ಪೂರ್ಣವಾಗಿದೆ. 2024ರಲ್ಲಿ ಲೋಕಸಭೆ ಚುನಾವಣೆ ಇದ್ದು, ಈಗಾಗಲೇ ಬಿಜೆಪಿ ಸಿದ್ಧತೆ ಆರಂಭಿಸಿದೆ. ಈ ಹಂತದಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಕೂಡ ಒಂಬತ್ತು ವರ್ಷ ಪೂರ್ಣಗೊಂಡ ಹಿನ್ನೆಲೆ ಜೂನ್ 22ರಿಂದ 26ರವರೆಗೆ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಲು 7 ತಂಡಗಳನ್ನು ರಚಿಸಲಾಗಿದೆ.
ಇದರ ಜೊತೆಗೆ ಜೂನ್ 26ರಿಂದ ಜುಲೈ 5ರವರೆಗೆ ಕರಪತ್ರ ವಿತರಣೆ ಅಭಿಯಾನ ನಡೆಯಲಿದ್ದು, . ಮನೆ ಮನೆಗೆ ಪ್ರಧಾನಿ ಮೋದಿ ಹೆಸರಿನಲ್ಲಿ ಪ್ರತಿ ಮನೆಗೆ ಕೇಂದ್ರದ ಸಾಧನೆಗಳ ಕರಪತ್ರ ವಿತರಿಸಲಾಗುತ್ತದೆ. ಸುಮಾರು 50 ಲಕ್ಷ ಮನೆಗಳಿಗೆ ಕರಪತ್ರ ವಿತರಣೆ ಮಾಡುವ ಗುರಿಯನ್ನು ರಾಜ್ಯ ಬಿಜೆಪಿ ಘಟಕ ಹೊಂದಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ