ನವದೆಹಲಿ: ಕಾಂಗ್ರೆಸ್(Congress) ಜತೆ ಬಿಜೆಪಿ(BJP) ಅತಿರಥರೇ ಒಳಒಪ್ಪಂದ ಮಾಡಿಕೊಂಡಿರುವ ಬಾಂಬ್ ಸ್ಫೋಟವಾಗಿದೆ. ಹೌದು..ಶಾಮೀಲು.. ಅಡ್ಜಸ್ಟ್ಮೆಂಟ್.. ಒಳಒಪ್ಪಂದ.. ಈ ಮಾತುಗಳು ಈಗ ರಾಜ್ಯ ಬಿಜೆಪಿಯಲ್ಲಿ ತಲ್ಲಣವೇ ಸೃಷ್ಠಿಸುತ್ತಿದೆ. ಸ್ವಪಕ್ಷದ ನಾಯಕರ ವಿರುದ್ಧವೇ ಸಂಸದ ಪ್ರತಾಪ್ ಸಿಂಹ (Pratap Simha), ಮಾಜಿ ಶಾಸಕ ಸಿ.ಟಿ.ರವಿ (CT Ravi) ಅಡ್ಜಸ್ಟ್ಮೆಂಟ್ ಬಾಣ ಬಿಟ್ಟಿದ್ದು, ಇದು ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಉರಿಯುವ ಬೆಂಕಿಗೆ ಮತ್ತೋರ್ವ ಬಿಜೆಪಿ ನಾಯಕ ತುಪ್ಪ ಸುರಿದಿದ್ದಾರೆ. ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಸ್ಫೋಟಕ ಹೇಳಿಕೆ ನಿಡಿದ್ದಾರೆ.
ಇದನ್ನೂ ಓದಿ: ಕೋಟಿ ಕೋಟಿ ಹಣ ಪಡೆದು ತಮ್ಮ ಅಭ್ಯರ್ಥಿಯನ್ನೇ ಸೋಲಿಸಿದ್ರಾ ಮುಖಂಡರು? ಆಡಿಯೋ ವೈರಲ್
ನವದೆಹಲಿಯಲ್ಲಿ ಇಂದು(ಜೂನ್ 21) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಎಂಬುದು ಮುಗಿದಕಥೆ. ಹೊಂದಾಣಿಕೆ ಬಗ್ಗೆ ಈಗ ಮಾತನಾಡಿದ್ರೆ ನಾವು ಬೆಂಕಿ ಹಚ್ಚಿದಂತೆ. ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ನನಗೂ ವೈಯಕ್ತಿಕವಾಗಿ ಅನಿಸಿದೆ ಎಂದು ಹೇಳಿದರು.
ಮಂತ್ರಿ ಮಂಡಲ ವಿಸ್ತರಣೆ ಮಾಡದಿರುವುದು ಸೋಲಿಗೆ ಕಾರಣ. ಕಾಂಗ್ರೆಸ್ನ ಸುಳ್ಳು ಆರೋಪಗಳಿಗೆ ಠಕ್ಕರ್ ಕೊಡಲು ಆಗಲಿಲ್ಲ. ಆದರೆ ಈಗ ಚರ್ಚೆ ಮಾಡುವುದು ಅನಗತ್ಯ. JDS, ಬಿಜೆಪಿ ಹೋರಾಟದಿಂದ ಮೂರನೆಯವರಿಗೆ ಲಾಭವಾಗಿದೆ ಎಂದಿರುವ ಯೋಗೇಶ್ವರ್, ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ನಾನು ಮಾತನಾಡಲ್ಲ.ಮೈತ್ರಿ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ ಎಂದು ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ